ಉಡುಪಿ: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಹಮ್ಮಿಕೊಂಡಿರುವ ಶ್ರೀಕೃಷ್ಣ ಮಾಸೋತ್ಸವದಲ್ಲಿ ಈ ಬಾರಿ ಕ್ರೀಡೋತ್ಸವವನ್ನು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಆಶಯದಂತೆ ವೈಶಿಷ್ಟ್ಯಪೂರ್ಣವಾಗಿ ನಡೆಸಲಾಗುವುದು.
ಇದರ ಉದ್ಘಾಟನೆಯನ್ನು ಶ್ರೀಪಾದರು ಆ.18ರ ಬೆಳಗ್ಗೆ 9.30ಕ್ಕೆ ಕನಕಗೋಪುರದ ಮುಂಭಾಗದಲ್ಲಿ ನೆರವೇರಿಸಲಿರುವರು.
ಅನಂತರ ಶ್ರೀಕೃಷ್ಣ ಜ್ಯೋತಿಯನ್ನು ಬೆಳಗಿಸಿ ರಥಬೀದಿಯಲ್ಲಿ ಮೆರವಣಿಗೆ ನಡೆಸಲಾಗುವುದು. ಆ ದಿನ ರಥಬೀದಿಯಲ್ಲಿ ವಿಶೇಷವಾಗಿ ನಶಿಸಿ ಹೋಗುತ್ತಿರುವ ಆಟೋಟಗಳ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಮುಖ್ಯವಾಗಿ ಕಣ್ಣಿಗೆ ಬಟ್ಟೆ ಕಟ್ಟಿ ಮಡಕೆ ಒಡೆಯುವುದು, ಸೊಪ್ಪಿನ ಆಟ, ಜುಬಿಲಿ, ಸೈಕಲ್ ಚಲಾಯಿಸುವುದು, ಬಂಡಿ ಓಟ, ಟೊಂಕ ಆಟ, ಗೋಣಿಚೀಲ ಓಟ, ವಿಶಲ್ ಚೇರ್, ತಟ್ಟೆ ಓಟ/ನಡಿಗೆ, ಬೆಲ್ಚೆಂಡು, ಹಗ್ಗ ಗಂಟುಹಾಕುವಿಕೆ, ನಿಧಾನ ಸೈಕಲ್ ರೇಸ್, ಕಾಳುಗಳ ವಿಂಗಡಿಸುವಿಕೆ, ದೇವರ ನಾಮದಿಂದ ಆಟ ಹೀಗೆ ಹತ್ತು ಹಲವು ಸ್ಪರ್ಧೆಗಳು ನಡೆಯಲಿವೆ.
ಮಾಹಿತಿಗೆ ಈಶ್ವರ ಚಿಟ್ಪಾಡಿ (9916009660) ಅವರನ್ನು ಸಂಪರ್ಕಿಸಬಹುದು ಎಂದು ಪರ್ಯಾಯ ಶ್ರೀಕೃಷ್ಣ ಮಠ, ಶ್ರೀ ಪುತ್ತಿಗೆ ಮಠದ ದಿವಾನರ ಪ್ರಕಟನೆ ತಿಳಿಸಿದೆ.