Advertisement

Udupi ಸಾಲ ಕೊಡದ ಅಂಗಡಿ ಮಾಲಕನಿಗೆ ಹಲ್ಲೆ

12:56 AM May 12, 2024 | Team Udayavani |

ಉಡುಪಿ: ದಿನಸಿ ಸಾಮಗ್ರಿ ಸಾಲವಾಗಿ ಕೊಡದ ಅಂಗಡಿ ಮಾಲಕನಿಗೆ ಬಾಟಲಿಯಿಂದ ಚುಚ್ಚಿ ಗಾಯಗೊಳಿಸಿದ ಘಟನೆ ನಗರದಲ್ಲಿ ಸಂಭವಿಸಿದೆ.

Advertisement

ನಗರದ ಪದ್ಮಶಾಲಿ ಸಂಕೀರ್ಣದಲ್ಲಿರುವ ಮಳಿಗೆ ನಂ-2ರಲ್ಲಿ ಜನರಲ್‌ ಸ್ಟೋರ್‌ ಅಂಗಡಿ ನಡೆಸಿಕೊಂಡಿರುವ ನಾಗರಾಜ್‌ ಅವರಿಗೆ ಒಂದು ತಿಂಗಳ ಹಿಂದೆ ಉದಯ ಎಂಬಾತನು ತನ್ನ ಕೆಲಸಗಾರನಿಗೆ ದಿನಸಿ ಸಾಮಗ್ರಿಗಳನ್ನು ಸಾಲವಾಗಿ ಕೊಡುವಂತೆ ಕೇಳಿಕೊಂಡಿದ್ದ. ಇದಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ದ್ವೇಷದಿಂದ ಮೇ 10ರಂದು ರಾತ್ರಿ 10ಕ್ಕೆ ಅಂಗಡಿಯೊಳಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ಬೈದು ಕೈಯಲ್ಲಿದ್ದ ಒಡೆದ ಮದ್ಯದ ಬಾಟಲಿಯಿಂದ ನಾಗರಾಜ್‌ ಅವರ ಕುತ್ತಿಗೆಗೆ ಚುಚ್ಚಿದ್ದು, ಎದೆಗೆ ಚುಚ್ಚಲು ಬಂದಾಗ ತಪ್ಪಿಸಿಕೊಂಡಿದ್ದಾರೆ. ಎದೆ, ಕಾಲು, ತೊಡೆಗೆ ಗೀರಿದ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next