Advertisement

Udupi:ಮಿನಿ ವಿಧಾನ ಸೌಧಕ್ಕೆ ಸಬ್‌ ರಿಜಿಸ್ಟ್ರಾರ್‌ ಕಚೇರಿ ಸ್ಥಳಾಂತರ- ಕೃಷ್ಣಭೈರೇಗೌಡ ಹೇಳಿಕೆ

11:19 PM Dec 13, 2023 | Team Udayavani |

ಬೆಳಗಾವಿ: ಉಡುಪಿಯ ಹಿರಿಯ ಉಪ ನೋಂದಣಾಧಿಕಾರಿಗಳ ಕಚೇರಿಯನ್ನು ಡಿ. 4ರಂದು ನೂತನ ಮಿನಿ ವಿಧಾನ ಸೌಧ ಕಟ್ಟಡಕ್ಕೆ ಸ್ಥಳಾಂತರಿಸಿ ಕಾರ್ಯರಂಭ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇ ಗೌಡ ತಿಳಿಸಿದ್ದಾರೆ.

Advertisement

ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್‌ನ‌ ಮಂಜುನಾಥ ಭಂಡಾರಿ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ರಾಜ್ಯದಲ್ಲಿ ಒಟ್ಟು 256 ಉಪ ನೋಂದಣಿ ಕಚೇರಿಗಳಿವೆ. ಈ ಪೈಕಿ 11 ಖಾಲಿ ಇರುವ ಉಪ ನೋಂದಣಾಧಿಕಾರಿ ಮತ್ತು 49 ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಆರ್ಥಿಕ ಇಲಾಖೆ ಸಹಮತಿ ನೀಡಿದೆ. ಉಳಿದಂತೆ ಪ್ರಸ್ತುತ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಕಾವೇರಿ -2 ಸುಧಾರಿತ ತಂತ್ರಾಂಶವನ್ನು ಬಳಸುತ್ತಿರುವುದರಿಂದ ಹೆಚ್ಚಿನ ಸಿಬಂದಿಗಳ ಅಗತ್ಯ ಕಂಡು ಬಂದಿಲ್ಲ ಎಂದು ಕೃಷ್ಣಭೈರೇ ಗೌಡ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next