Advertisement

ಉಡುಪಿ; ಪಾನ್‌ ಕಾರ್ಡ್‌ ಲಿಂಕ್‌ ಕಳುಹಿಸಿ ಬ್ಯಾಂಕ್‌ ಖಾತೆಗೆ ಕನ್ನ

10:59 AM Mar 21, 2022 | Team Udayavani |

ಉಡುಪಿ: ಬ್ಯಾಂಕ್‌ ಅಧಿಕಾರಿಗಳಂತೆ ನಕಲಿ ಪಾನ್‌ಕಾರ್ಡ್‌ ಅಪ್‌ಡೇಟ್‌ ಲಿಂಕ್‌ ಕಳುಹಿಸಿ ಆನ್‌ ಲೈನ್‌ ಮೂಲಕ ಬ್ಯಾಂಕ್‌ ಖಾತೆಗೆ ಕನ್ನ ಹಾಕಿದ ಘಟನೆ ಬೆಳಕಿಗೆ ಬಂದಿದೆ.

Advertisement

ಇದನ್ನೂ ಓದಿ:ಭಾರತದಲ್ಲಿ 4ನೇ ಅಲೆ ತೀವ್ರತೆ ಕಡಿಮೆ; 24ಗಂಟೆಯಲ್ಲಿ 1,549 ಕೋವಿಡ್ ಪ್ರಕರಣ ಪತ್ತೆ

ಚಿಟಾ³ಡಿ ನಿವಾಸಿ ಆನೆಟ್‌ ಡಿ’ಸೋಜಾ ಅವರ ಮೊಬೈಲ್‌ ಪಾನ್‌ ಕಾರ್ಡ್‌ ಅಪ್‌ಡೇಟ್‌ ಮಾಡಿಕೊಳ್ಳುವ ಬಗ್ಗೆ ಎಸ್‌ಎಂಎಸ್‌ ಬಂದಿದ್ದು, ಅವರು ಲಿಂಕ್‌ ಒತ್ತಿ ಪಾನ್‌ಕಾರ್ಡ್‌ ಅಪ್‌ ಡೇಟ್‌ ಮಾಡಿ ಅನಂತರ ಮೊಬೈಲ್‌ ಗೆ ಬಂದ ಒಟಿಪಿಯನ್ನು ಅದರಲ್ಲಿ ನಮೂದಿಸಿದ್ದಾರೆ. ಆ ಕೂಡಲೇ ಅವರ ಎಸ್‌ಬಿಐ ಖಾತೆಯಿಂದ ಹಂತ-ಹಂತವಾಗಿ 1.23 ಲಕ್ಷ ರೂ., ಹಣ ಕಡಿತಗೊಂಡಿದೆ.

ಆನೆಟ್‌ ಅವರು ನ್ಯಾಷನಲ್‌ ಸೈಬರ್‌ ಕ್ರೈಂ ಪೋರ್ಟಲ್‌ಗೆ ಮಾಹಿತಿ ನೀಡಿದ್ದು, 81 ಸಾವಿರ ರೂ. ಹಣ ಖಾತೆಗೆ ಮರು ಪಾವತಿಯಾಗಿದೆ. 25 ಸಾವಿರ ರೂ. ವರ್ಗಾವಣೆಗೊಂಡ ಖಾತೆಯಲ್ಲಿಯೇ ಸ್ಥಗಿತಗೊಂಡಿದೆ. 17 ಸಾವಿರ ರೂ. ಹಣ ಬಾಕಿ ಇರುವುದಾಗಿ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next