ರಸ್ತೆಯಲ್ಲಿ ಎರಡು ಗಂಟೆಗೂ ಹೆಚ್ಚಿನ ಕಾಲ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕು ಹೈರಾಣಾದರು.
Advertisement
ಮಧ್ಯಾಹ್ನ ವೇಳೆ ತಮಿಳುನಾಡು ಮತ್ತು ಮಹಾರಾಷ್ಟ್ರದ ಎರಡು ಸರಕು ತುಂಬಿದ ಟ್ರಕ್‌ಗಳು ಸ್ಟೇರಿಂಗ್ ತುಂಡಾಗಿ ರಸ್ತೆಯಲ್ಲೇ ಕೆಟ್ಟು ನಿಂತವು. ಇದರ ಪರಿಣಾಮ ಟ್ರಾಫಿಕ್ ಜಾಮ್ ಸಂಭವಿಸಿ ಕಿ. ಮಿ. ಗಟ್ಟಲೇ ವಾಹನಗಳು ನಿಂತವು. ಸಂಚಾರ ಪೊಲೀಸರು ಸ್ಥಳಕ್ಕೆ ಆಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿದ ಬಳಿಕ ನಿಧಾನಗತಿಯಲ್ಲಿ ವಾಹನ ಸಂಚಾರ ಆರಂಭವಾಯಿತು.
ಈ ಹೆದ್ದಾರಿಯಲ್ಲಿ ವಿವಿಧ ನಗರಗಳಿಗೆ ನಿತ್ಯ ಉದ್ಯೋಗ, ಶೈಕ್ಷಣಿಕ ಅಗತ್ಯಕ್ಕಾಗಿ ತೆರ ಳುವ ಪ್ರಯಾಣಿಕರಿಗೆ ಟ್ರಾಫಿಕ್ ಜಾಮ್ ಅವ್ಯವಸ್ಥೆ ಕಿರಿಕಿರಿ ಉಂಟು ಮಾಡಿದೆ. ಅಪಘಾತ, ಅನಾರೋಗ್ಯ ಸಂಬಂಧಿಸಿ ತುರ್ತು ಚಿಕಿತ್ಸೆ ಪಡೆಯಲು ಆಗಮಿಸುವ ವಾಹನ ಸವಾರರು ಮತ್ತಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಇಷ್ಟಾ ದರೂ ಕನಿಷ್ಠ ಸುಗಮ ಸಂಚಾರಕ್ಕೆ ವ್ಯವಸ್ಥೆಯನ್ನು ರಾ.ಹೆದ್ದಾರಿ, ಸಂಸದರು, ಶಾಸಕರು ಹಾಗೂ ಜಿಲ್ಲಾಡಳಿತ ರಸ್ತೆ ದುರಸ್ತಿ ಹಾಗೂ ಕಾಮ ಗಾರಿಗೆ ವೇಗ ನೀಡಲು ಮನಸ್ಸು ಮಾಡುತ್ತಿಲ್ಲ ಎಂಬುದು ಪ್ರಯಾಣಿಕರ ಆಕ್ರೋಶದ ನುಡಿಗಳು.
Related Articles
Advertisement
ವಾಹನಗಳಿಗೆ ಹಾನಿಇಕ್ಕಟ್ಟಾದ ಈ ರಸ್ತೆಗಳಲ್ಲಿರುವ ಗುಂಡಿಗಳಿಂದ ಸರಕು ತುಂಬಿದ ಘನ ವಾಹನಗಳಿಗೆ ಹೆಚ್ಚು ಸಮಸ್ಯೆಯಾಗುತ್ತಿದೆ. ಗುಂಡಿಗಳನ್ನು ತಪ್ಪಿಸಿಕೊಂಡು ಹೋಗುವ ಭರದಲ್ಲಿ ವಾಹನದ ಬಿಡಿ ಭಾಗಗಳಿಗೆ ಒತ್ತಡ ಸಂಭವಿಸಿ ಹಾನಿಯಾ ಗುತ್ತಿದೆ. ಇದರಿಂದ ಅಲ್ಲಿಯೆ ಕೆಟ್ಟು ನಿಲ್ಲುವುದರಿಂದ ಟ್ರಾಫಿಕ್ ಜಾಮ್ ಸಂಭವಿಸುತ್ತಿದೆ. ಸರ್ವಿಸ್ ರಸ್ತೆಯ ಇನ್ನೊಂದು ಸಮಸ್ಯೆ
ಬ್ರಹ್ಮಾವರ ಕಡೆಯಿಂದ ಉಡುಪಿ ಕಡೆಗೆ ಸರ್ವಿಸ್ ರಸ್ತೆಯ ಅವ್ಯವಸ್ಥೆ ಇನ್ನೊಂದು ಕಥೆ. ಇಲ್ಲಿ ಅರ್ಧ ರಸ್ತೆ ಕಚ್ಚಾ ರಸ್ತೆ ಇದ್ದು, ಇಲ್ಲಿ ಒಂದೇ ಲೇನ್‌ನಲ್ಲಿ ವಾಹನಗಳು ಸಂಚರಿಸಬೇಕಿದೆ. ಬದಿಯಲ್ಲಿ ಇನ್ನೊಂದು ವಾಹನ ಸಾಗಲು ಸಾಧ್ಯವಿಲ್ಲ. ಈ ರಸ್ತೆಯಲ್ಲಿ ಲಘು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದರೂ ಘನ ವಾಹನ ಟ್ರಕ್, ಬಸ್‌ಗಳು ಈ ರಸ್ತೆಯಲ್ಲಿಯೇ ನುಗ್ಗಿಕೊಂಡು ಬರುತ್ತಿವೆ. ಇದರ ಜತೆ ಉಡುಪಿ ಕಡೆಯಿಂದ ಬರುವವರು ವಿರುದ್ಧ ದಿಕ್ಕಿನಲ್ಲಿ ಸಾಗಿ ಬರುವ ಮೂಲಕ ಟ್ರಾಫಿಕ್ ಜಾಮ್ ಸಂಭವಿಸಲು ಕಾರಣವಾಗುತ್ತಿದೆ. ಆದರೆ ಇದನ್ನು ನಿಯಂತ್ರಿಸಲು ಯಾರೂ ಇಲ್ಲದ್ದಾಗಿದೆ.