ಉಡುಪಿ: ಸಂಗೀತ ಸಭಾ ಹಾಗೂ ಆಭರಣ ಜುವೆಲರ್ ಸಹಯೋಗದೊಂದಿಗೆ ಅಜ್ಜರಕಾಡು ಪುರಭವನದ ಸಭಾಂಗಣದಲ್ಲಿ “ಸಂಗೀತ ಸೌರಭ’ ಭಕ್ತಿ ಮತ್ತು ನಾಟ್ಯ ಸಂಗೀತ ಕಾರ್ಯಕ್ರಮ ರವಿವಾರ ಜರಗಿತು.
ಉಡುಪಿ ಆಸುಪಾಸಿನ ಬಾಲ ಕಲಾವಿದರು ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದರು. ಸಂಗೀತ ಸಭಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಝೀ ಸರಿಗಮಪ ಲಿಟ್ಲ ಚಾಂಪ್ಸ್ ಖ್ಯಾತಿಯ ಜ್ಞಾನೇಶ್ವರಿ ಗಾಡಗೆ ಭಜನ ಮತ್ತು ನಾಟ್ಯ ಸಂಗೀತ ಪ್ರಸ್ತುತಪಡಿಸಿದರು.
ಹಾರ್ವೋನಿಯಂನಲ್ಲಿ ಬಾಲ ಪ್ರತಿಭೆ ಕಾರ್ತಿಕೀ ಗಾಡಗೆ ಜತೆಯಾದರು. ಸಹ ಕಲಾವಿದರಾದ ನಿತೇಶ್ ತೊಂಬ್ರೆ (ಪಕವಾಜ್), ವಿಶಾಲ್ ಪಾಟೀಲ್ (ತಬಲ) ಹಾಗೂ ಸೂರಜ್ ಪಾಟೀಲ್ (ಸೈಡ್ ರಿದಂ), ಬಾಲಪ್ರತಿಭೆಗಳ ಪೋಷಕ
ರಾದ ಗಣೇಶ್ ಗಾಡಗೆ, ರಾಧಾ ಗಾಡಗೆ ಕೋರಸ್ ಮೂಲಕ ಸಾಥ್ ನೀಡಿದರು.
1962ರಲ್ಲಿ ವಿಜಯನಾಥ ಶೆಣೈ ಅವರಿಂದ ಪ್ರಾರಂಭಿಸಲ್ಪಟ್ಟ “ಸಂಗೀತ ಸಭಾ’ ಹತ್ತು ಹಲವಾರು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು ಜನಮನ್ನಣೆಗೆ ಪಾತ್ರವಾಗಿದೆ. ರವಿವಾರ ನಡೆದ ಕಾರ್ಯಕ್ರಮ ದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಸಂಗೀತಾಸಕ್ತರು ಸೇರಿದರು.