Advertisement

Udupi: ಇ-ಸ್ಯಾಂಡ್ ಆ್ಯಪ್ ಮೂಲಕ ಮರಳು ಲಭ್ಯ

12:14 AM Dec 03, 2023 | Team Udayavani |

ಉಡುಪಿ: ಕುಂದಾಪುರ ತಾಲೂಕಿನ ಗುಲ್ವಾಡಿ, ಕಾವ್ರಾಡಿ, ಬಳ್ಕೂರು ಗ್ರಾಮದ ಸರ್ವೇ ನಂ 180, 157, 189ರಲ್ಲಿನ 11.90 ಎಕರೆ ವಿಸ್ತೀರ್ಣ ಪ್ರದೇಶದ ಮರಳು ಬ್ಲಾಕ್‌ ಸಂಖ್ಯೆ 4ರಲ್ಲಿ ಹಾಗೂ ಜಪ್ತಿ, ಹಳ್ನಾಡು ಗ್ರಾಮದ ಸರ್ವೇ ನಂ. 174, 56ರಲ್ಲಿನ 5.70 ಎಕರೆ ವಿಸ್ತೀರ್ಣ ಪ್ರದೇಶದ ಮರಳು ಬ್ಲಾಕ್‌ ಸಂಖ್ಯೆ 6ರಲ್ಲಿ ಮರಳನ್ನು ಸಾರ್ವಜನಿಕರಿಗೆ ಹಾಗೂ ಸರಕಾರಿ ಕಾಮಗಾರಿಗೆ ಉಡುಪಿ ಇ-ಸ್ಯಾಂಡ್‌ ಮೂಲಕ ಪೂರೈಸಲು ತೀರ್ಮಾನಿಸಲಾಗಿದೆ.

Advertisement

ಆವಶ್ಯಕತೆ ಇರುವವರು //udupiesand.com ಸಂದರ್ಶಿಸಿ ಹೆಸರು, ವಾಸ, ಬೇಕಾಗಿರುವ ಮರಳಿನ ಪ್ರಮಾಣ ನಮೂದಿಸಿ ಆನ್‌ಲೈನ್‌ನಲ್ಲಿ ಹಣ ಪಾವತಿಸಬಹುದು. ಜಿಲ್ಲೆಯ ಸಾರ್ವಜನಿಕರು ಉಪ ಯೋಗ ಪಡೆಯಬಹುದಾಗಿದೆ. ಹೊರ ಜಿಲ್ಲೆಗೆ ಪೂರೈಸಲು ಅವಕಾಶ ಇರುವುದಿಲ್ಲ.

ಗ್ರಾ.ಪಂ. ವ್ಯಾಪ್ತಿಯಲ್ಲಿ ಹಳ್ಳ, ತೊರೆ ಮತ್ತು ಕೆರೆಗಳಲ್ಲಿನ ಮರಳು ನಿಕ್ಷೇಪ ಪ್ರದೇಶಗಳಿಂದ ತೆರವುಗೊಳಿಸಿರುವ ಪ್ರತೀ ಮೆಟ್ರಿಕ್‌ ಟನ್‌ಗೆ ಮರಳಿನ ದರ 300 ರೂ. (ಸಾಗಾಟ ಪರವಾನಿಗೆಯೊಂದಿಗೆ). ಲೋಡಿಂಗ್‌ ವೆಚ್ಚ ಮತ್ತು ಮರಳು ತೆರವುಗೊಳಿಸುವ ವೆಚ್ಚವನ್ನು ಮರಳು ಬೇಡಿಕೆದಾರರು ಭರಿಸಬೇಕು. ಕರಾವಳಿ ನಿಯಂತ್ರಣ ವಲಯ ಹೊರತುಪಡಿಸಿದ ಪ್ರದೇಶದಲ್ಲಿನ ಮರಳು ಬ್ಲಾಕ್‌ಗಳಿಂದ ತೆರವುಗೊಳಿಸಿದ ಮರಳಿನ ದರ ಪ್ರತೀ ಮೆ.ಟನ್‌ಗೆ ಸಾಗಾಟ ಪರವಾನಿಗೆಯೊಂದಿಗೆ 700 ರೂ. ಮರಳಿನ ದರ: 3 ಟನ್‌ಗೆ 2,100 ರೂ., 6 ಟನ್‌ಗೆ 4,200 ರೂ., 8 ಟನ್‌ಗೆ 5,600 ರೂ. 10 ಟನ್‌ಗೆ 7,000 ರೂ. 8ರಿಂದ 10 ಮೆ.ಟನ್‌ ವಾಹನಕ್ಕೆ 700 ರೂ. 4 ರಿಂದ 8 ಮೆ.ಟನ್‌ ವಾಹನಕ್ಕೆ 500 ರೂ. ಹಾಗೂ 1ರಿಂದ 4 ಮೆಟ್ರಿಕ್‌ ಟನ್‌ ವರೆಗೆ 300 ರೂ. ಜಿಲ್ಲಾ ವ್ಯಾಪ್ತಿಯಲ್ಲಿ ಮರಳು ಸಾಗಾಟ ದರ ದೊಡ್ಡ ಲಾರಿಗೆ 8 ರಿಂದ 10 ಮೆ.ಟನ್‌ 20 ಕಿ.ಮೀ. ವರೆಗೆ ಸಾಗಾಣಿಕೆಗೆ 3,000 ರೂ. ನಂತರದ ಪ್ರತಿ ಕಿ.ಮೀ.ಗೆ ರೂ. 50 ರೂ. ಮಧ್ಯಮ ಗಾತ್ರದ ವಾಹನಗಳಿಗೆ 4ರಿಂದ 8 ಮೆ.ಟನ್‌ಗೆ 20 ಕಿ.ಮೀ. ವರೆಗೆ ಸಾಗಾಣಿಕೆ ದರ 2,000 ರೂ. ಅನಂತರದ ಪ್ರತಿ ಕಿ.ಮೀ.ಗೆ 40 ರೂ. ಸಣ್ಣ ವಾಹನಗಳಿಗೆ 1ರಿಂದ 4 ಮೆ.ಟನ್‌ ವರೆಗೆ 20 ಕಿ.ಮೀಟರ್‌ವರೆಗೆ ಸಾಗಾಣಿಕೆ ದರ 1500 ರೂ. ಅನಂತರದ ಪ್ರತಿ ಕಿ.ಮೀ.ಗೆ 35 ರೂ.

ಮಾಹಿತಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ 0820-2572333, ಕಂಟ್ರೋಲ್‌ ರೂಮ್‌ 0820-2950088, ಸ್ಯಾಂಡ್‌ ಆಪ್‌ 6366745888 ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next