Advertisement
ಶುಕ್ರವಾರ 273 ನೆಗೆಟಿವ್ ಪ್ರಕರಣ ಮತ್ತು 16 ಪಾಸಿಟಿವ್ ಪ್ರಕರಣ ವರದಿಯಾಗಿದೆ. 16 ಜನರಲ್ಲಿ ಉಡುಪಿ ತಾಲೂಕಿನ ಒಂಬತ್ತು ಮಂದಿ, ಕುಂದಾಪುರ ತಾಲೂಕಿನ ನಾಲ್ವರು, ಕಾರ್ಕಳ ತಾಲೂಕಿನ ಮೂವರು ಇದ್ದಾರೆ. ಇವರಲ್ಲಿ ಮಹಾರಾಷ್ಟ್ರದಿಂದ ಬಂದ ನಾಲ್ವರು, ದ.ಕ. ಜಿಲ್ಲೆಯಿಂದ ಬಂದ ಇಬ್ಬರು, ಬೆಂಗಳೂರಿನಿಂದ ಬಂದ ಒಬ್ಬರು ಇದ್ದಾರೆ. ಇನ್ನು ಒಂಬತ್ತು ಮಂದಿ ಕೋವಿಡ್ ಸೋಂಕಿತರ ಪ್ರಾಥಮಿಕ ಸಂಪರ್ಕಿತರಿದ್ದಾರೆ.
ಇತ್ತೀಚೆಗೆ ಅತಿ ಕ್ಲಿಷ್ಟಕರ ಎನಿಸಿದ ಸೋಂಕಿತ ಮಹಿಳೆಗೆ ಹೆರಿಗೆ ಮಾಡಿಸಿದ ಸಾಧನೆಗೈದ ಉಡುಪಿ ಡಾ|ಟಿಎಂಎ ಪೈ ಆಸ್ಪತ್ರೆ ವೈದ್ಯರು ಮಗುವಿಗೂ ಪರೀಕ್ಷೆ ನಡೆಸಿ ನೆಗೆಟಿವ್ ವರದಿ ಬಂದ ಬಳಿಕ ತಾಯಿ ಮಗುವನ್ನು ಸೋಮವಾರ ಬಿಡುಗಡೆಗೊಳಿಸಿದ್ದಾರೆ. ಮಗುವಿಗೆ ನೆಗೆಟಿವ್
ಜು. 1ರಂದು ಮೃತಪಟ್ಟ ಹತ್ತು ತಿಂಗಳ ಮಗುವಿಗೆ ಸೋಂಕು ಇದ್ದಿರಲಿಲ್ಲ ಎಂದು ವರದಿ ಬಂದಿದೆ. ವಿಜಯಪುರ ಮೂಲದ ದಂಪತಿ ಲಾಕ್‌ಡೌನ್ ಅವಧಿಯಲ್ಲಿ ಊರಿಗೆ ಹೋಗಿ ಕಳೆದ ವಾರ ಬಂದಿದ್ದರು. ಮಗುವಿಗೆ ಜ್ವರ, ಉಸಿರಾಟದ ಸಮಸ್ಯೆ ಇತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದರು. ಜು. 1ರಂದು ಆರೋಗ್ಯ ಗಂಭೀರ ಸ್ಥಿತಿಗೆ ತಲುಪಿದ ಬಳಿಕ ಮಗು ಮೃತಪಟ್ಟಿತ್ತು. ಮಗು ವಿನ ಗಂಟಲ ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಈಗ ವರದಿ ನೆಗೆಟಿವ್ ಬಂದಿದೆ.
Related Articles
ಗಂಭೀರ ಸ್ಥಿತಿಯಲ್ಲಿದ್ದ ಸೋಂಕಿತರಿಬ್ಬರಲ್ಲಿ ಒಬ್ಬರು ವಾರ್ಡ್‌ಗೆ ಸ್ಥಳಾಂತರಗೊಂಡಿದ್ದು ಇನ್ನೊಬ್ಬರು ಗಂಭೀರ ಸ್ಥಿತಿಯಲ್ಲಿ ಇದ್ದಾರೆ. ಈಗ ಒಟ್ಟು ಇಬ್ಬರು ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
ಸೀಲ್ಡೌನ್ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾದ ಹಿನ್ನೆಲೆಯಲ್ಲಿ ಮಣಿಪಾಲದಲ್ಲಿ ಒಂದು ಫ್ಲ್ಯಾಟ್, ಬ್ರಹ್ಮಗಿರಿಯಲ್ಲಿ ಒಂದು ಫ್ಲ್ಯಾಟ್, ಕಿದಿಯೂರು ಗ್ರಾಮದಲ್ಲಿ ಒಂದು ಫ್ಲ್ಯಾಟ್‌ನ್ನು ಸೀಲ್‌ಡೌನ್ ಮಾಡಲಾಗಿದೆ.