Advertisement
ಆರೋಪಿ ಮೊಹಮ್ಮದ್ ರಿಯಾಜ್ ಬಿ.ಎಂ. ಅಂಬಾಗಿಲಿನಲ್ಲಿರುವ ಬ್ಯಾಂಕ್‌ವೊಂದರಲ್ಲಿ ಕಾರು ಖರೀದಿಸಲೆಂದು 12,00,000 ರೂ. ಸಾಲ ಪಡೆದುಕೊಂಡಿದ್ದರು. ಆದರೆ ಬ್ಯಾಂಕಿಗೆ ಸರಿಯಾದ ಸಮಯಕ್ಕೆ ಸಾಲದ ಕಂತು ಪಾವತಿ ಮಾಡದಿದ್ದ ಕಾರಣ ಆತನ ವಾಹನ ಸಾಲದ ಖಾತೆಯು ಎನ್‌ಪಿಎ ಗೊಂಡಿದ್ದರಿಂದ ಬ್ಯಾಂಕಿನ ಸಿಬಂದಿ ಕಾರನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಗೆ ಮುಂದಾದಾಗ ಆರೋಪಿಯು ಅಡ್ಡಿಪಡಿಸಿದ್ದ. ಅನಂತರ ಬ್ಯಾಂಕಿನ ವ್ಯವಸ್ಥಾಪಕರು ಉಡುಪಿ ಆರ್‌ಟಿಒ ಅವರಿಂದ ಕಾರಿನ ಬಿ ವರದಿ ಪಡೆದುಕೊಂಡು ಪರಿಶೀಲಿಸಿದ್ದಾರೆ. ಈ ವೇಳೆ ಬ್ಯಾಂಕಿನ ಹೈಪೋತಿಕೇಶನ್ ಲೀನ್ ಇದ್ದರೂ ಆರೋಪಿ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಮತ್ತು ಬ್ಯಾಂಕಿನ ವ್ಯವಸ್ಥಾಪಕರು ಮತ್ತು ಬ್ಯಾಂಕಿಗೆ ಸಂಬಂಧಿತ ಅಧಿಕಾರಿಗಳ ಸಹಿಗಳನ್ನು ಫೋರ್ಜರಿ ಮಾಡಿ ಸಾಲವನ್ನು ಸಂಪೂರ್ಣವಾಗಿ ಪಾವತಿಸದೇ ಮೂರನೇ ವ್ಯಕ್ತಿಗೆ ಕಾರು ಮಾರಾಟ ಮಾಡಿದ್ದ. ಬ್ಯಾಂಕ್‌ನ ಹಿರಿಯ ಶಾಖಾ ವ್ಯವಸ್ಥಾಪಕರು ನೀಡಿದ ದೂರಿನ ಅನ್ವಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Advertisement
Udupi: ಸಾಲ ಮರುಪಾವತಿಸದೆ ಕಾರು ಮಾರಾಟ; ಬ್ಯಾಂಕ್‌ಗೆ ವಂಚನೆ
01:35 AM May 19, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.