Advertisement
ಬೆಳಗ್ಗಿನಿಂದ ರಾತ್ರಿಯವರೆಗೂ ಈ ಸಮಸ್ಯೆ ತಪ್ಪಿದ್ದಲ್ಲ. ಈ ನಡುವೆ ನಗರದಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿರುವ ಕಾರಣ ಸಮಸ್ಯೆ ಎದುರಾಗುತ್ತಿದೆ. ನಗರದ ಸಿಟಿ ಬಸ್ ನಿಲ್ದಾಣ, ಸರ್ವಿಸ್ ಬಸ್ ನಿಲ್ದಾಣ, ಕಲ್ಸಂಕ, ಕರಾವಳಿ ಬೈಪಾಸ್, ತೆಂಕಪೇಟೆ, ಬಡಗುಪೇಟೆ, ಕಿನ್ನಿಮೂಲ್ಕಿ ಹೀಗೆ ವಿವಿಧೆಡೆ ಹಿಂದಿಗಿಂತಲೂ ಅಧಿಕ ವಾಹನಗಳು ಸಂಚರಿಸುತ್ತಿವೆ.
ಕಲ್ಸಂಕ ಬಳಿ ಎಡಬದಿಗೆ ಹೋಗುವ ವಾಹನಗಳ ಸಂಚಾರಕ್ಕೆ ಕೋನ್ ಅಳವಡಿಕೆ ಮಾಡಿದ್ದು, ಅದು ಸಂಪೂರ್ಣ ಕಿತ್ತುಹೋಗಿದ್ದು, ಕಬ್ಬಿಣ ಮೇಲೆ ಎದ್ದು ಕಾಣುತ್ತಿದೆ. ಇದೇ ಕೆಎಂ ಮಾರ್ಗದ ಬಳಿಯೂ ಕೋನ್‌ಗಳು ಸಂಪೂರ್ಣ ಕಿತ್ತುಹೋಗಿವೆ. ಪರಿಣಾಮ ವಾಹನಗಳು ಎಲ್ಲೆಂದರಲ್ಲಿ ಜಾಗ ಇರುವೆಡೆ ನುಗ್ಗಿಸಿಕೊಂಡು ಚಲಿಸುತ್ತವೆ. ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ
ನಗರದ ಹಲವೆಡೆ ನೋ ಪಾರ್ಕಿಂಗ್ ಫಲಕ ಹಾಕಲಾಗಿದ್ದು, ಇದರ ಎದುರು ಭಾಗದಲ್ಲಿಯೇ ವಾಹನಗಳನ್ನು ನಿಲ್ಲಿಸುತ್ತಿರುವ ಪರಿಣಾಮ ಮತ್ತಷ್ಟು ಸಂಚಾರ ದಟ್ಟನೆ ಎದುರಾಗುತ್ತಿದೆ. ಕೆಲವು ಸಿಗ್ನಲ್ ಫಲಕಗಳು ಕೂಡ ಕಿತ್ತು ಹೋಗಿರುವ ಪರಿಣಾಮ ಅದು ಯಾವ ಸಿಗ್ನಲ್ ಎಂಬುವುದು ಪ್ರಯಾಣಿಕರಿಗೆ ತಿಳಿಯುವುದೂ ಇಲ್ಲ.
Related Articles
ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ನಗರದ ವಿವಿಧ ಭಾಗಗಳಿಗೆ ಕೋನ್ ಹಾಗೂ ಸಿಗ್ನಲ್ ಲೈಟ್‌ಗಳನ್ನು ಅಳವಡಿಸುವ ಬಗ್ಗೆ ಈಗಾಗಲೇ ಪ್ರಸ್ತಾವನೆ ಕಳುಹಿಸಲಾಗಿದೆ. ಆಯಾಕಟ್ಟಿನ ಭಾಗದಲ್ಲಿ ಟ್ರಾಫಿಕ್ ಪೊಲೀಸರು ಸಂಚಾರ ದಟ್ಟಣೆೆ ನಿಯಂತ್ರಿಸುತ್ತಿದ್ದಾರೆ. ಹೆಚ್ಚಿನ ದಟ್ಟಣೆ ಕಂಡುಬರುತ್ತಿರುವ ಸ್ಥಳಗಳಲ್ಲಿ ಅಧಿಕ ಮಂದಿ ಸಿಬಂದಿಯನ್ನೂ ನಿಯೋಜಿಸಲಾಗುವುದು.
-ಸುದರ್ಶನ ದೊಡ್ಡಮನಿ, ಪೊಲೀಸ್ ಉಪನಿರೀಕ್ಷಕರು, ಸಂಚಾರ ಠಾಣೆ
Advertisement
ಉಡುಪಿಯಲ್ಲಿ ನಿತ್ಯ ಬ್ಲಾಕ್ನಗರದ ಕಿದಿಯೂರು ಹೊಟೇಲ್ ಮುಂಭಾಗದಲ್ಲಿ ಡ್ರೈನೇಜ್ ಕಾಮಗಾರಿ ಮಾಡುತ್ತಿರುವ ಕಾರಣ ಅಲ್ಲಿಂದ ಶಿರಿಬೀಡು ಮಾರ್ಗವಾಗಿ ಸಿಟಿ ಬಸ್ ನಿಲ್ದಾಣ ಸಂಚಾರ ಸ್ಥಗಿತಗೊಳಿಸಲಾಗಿದೆ. ಮಣಿಪಾಲಕ್ಕೆ ಹೋಗುವವರು ಕಿದಿಯೂರು ಹೊಟೇಲ್‌ನಿಂದ ಬಲಬದಿಗೆ ತಿರುಗಿ ಸಿಟಿ ಬಸ್‌ನಿಲ್ದಾಣದ ಮೂಲಕ ಹೋಗಬೇಕು. ನಗರಕ್ಕೆ ಹೋಗುವವರೂ ಇದೇ ಮಾರ್ಗದಲ್ಲಿ ಹೋಗಬೇಕಿರುವ ಕಾರಣ ಸಿಟಿ ಬಸ್ ನಿಲ್ದಾಣದ ತುಂಬಾ ಬೆಳಗ್ಗಿನಿಂದ ರಾತ್ರಿಯವರೆಗೂ ಟ್ರಾಫಿಕ್ ದಟ್ಟನೆ ಕಂಡುಬರುತ್ತಿದೆ. ಇಲ್ಲಿ ಇಬ್ಬರು ಟ್ರಾಫಿಕ್ ಪೊಲೀಸರನ್ನು ನಿಯೋಜಿಸಲಾಗಿದೆಯಾದರೂ ಕಿರಿದಾದ ಏಕಮುಖ ರಸ್ತೆಯಾದ ಕಾರಣ ನಿತ್ಯ ಈ ಸಮಸ್ಯೆ ಎದುರಾಗುತ್ತಿದೆ. ಆದಷ್ಟು ಬೇಗ ಪೂರ್ಣ ಗೊಳಿಸಿ ಸಂಚಾರ ಮುಕ್ತಗೊಳಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. ಇಲ್ಲವಾದರೆ ಕಾಮಗಾರಿ ಆಗು ವಾಗಲೇ ವಾಹನ ಸಂಚಾರ ಮಾಡುವ ಸಾಧ್ಯತೆಯೂ ಹೆಚ್ಚಿದೆ ಎಂದು ಸ್ಥಳೀಯರು ದೂರಿದ್ದಾರೆ.