Advertisement
ಇಲಾಖೆ ರಾಜ್ಯದಲ್ಲಿ ಎಲ್ಲ ಜಿಲ್ಲೆಗಳಿಗೂ ಕ್ಲೋಸಿಂಗ್ ಸ್ಟಾಕ್ ಬಳಸಿಕೊಂಡು ಎಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ ಹಂಚಿಕೆಮಾಡುವಂತೆ ಆದೇಶ ನೀಡಿತ್ತು. ಆದರೆ ಉಡುಪಿ ಜಿಲ್ಲೆಯಲ್ಲಿ ಕ್ಲೋಸಿಂಗ್ ಸ್ಟಾಕ್‌ನಲ್ಲಿ ಅಕ್ಕಿ ದಾಸ್ತಾನಿನ ಕೊರತೆ ಇತ್ತು. ಇದರಿಂದಾಗಿ ಎಪಿಎಲ್ ಕಾರ್ಡ್‌ದಾರರು ಪರದಾಡುತ್ತಿದ್ದರು. ಈ ಬಗ್ಗೆ ಉದಯವಾಣಿ ಜು. 23ರಂದು ಎಪಿಎಲ್ “ಅನ್ನ ಭಾಗ್ಯ’ ಯೋಜನೆ ಅಕ್ಕಿಗೆ ಕತ್ತರಿ ಎನ್ನುವ ಶೀರ್ಷಿಕೆಯಡಿ ವರದಿ ಮಾಡಿತ್ತು.
ಜಿಲ್ಲೆಯಲ್ಲಿ ಒಟ್ಟು 72,050 ಎಪಿಎಲ್ ಕಾರ್ಡ್‌ಗಳಿವೆ. ಕೇವಲ 15,309 ಕಾರ್ಡ್‌ದಾರರು ಮಾತ್ರ ಪಡಿತರ ಸಾಮಗ್ರಿ ಪಡೆಯಲು ನೋಂದಾಯಿಸಿಕೊಂಡಿದ್ದಾರೆ. ನೋಂದಾಯಿಸಿ ಕೊಂಡ ಕಾರ್ಡ್‌ದಾರರಿಗೆ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಅಕ್ಕಿ ವಿತರಣೆಯಾಗಲಿದೆ ಎಂದು ಅಧಿ ಕಾರಿಗಳು ಮಾಹಿತಿ ನೀಡಿದ್ದಾರೆ.