Advertisement

ಉಡುಪಿ: ಖ್ಯಾತ ಸ್ಯಾಕ್ಸೋಫೋನ್ ಗುರು ಅಲೆವೂರು ಸುಂದರ ಸೇರಿಗಾರ ನಿಧನ

11:08 AM Jun 14, 2023 | Team Udayavani |

ಉಡುಪಿ: ಖ್ಯಾತ ಸ್ಯಾಕ್ಸೋಫೋನ್ ವಾದಕ, ಮತ್ತು ಸ್ಯಾಕ್ಸೋಫೋನ್ ಗುರು ಉಡುಪಿಯ ಅಲೆವೂರು ಮೂಲದ ಸುಂದರ ಸೇರಿಗಾರ (76) ಬುಧವಾರ (ಜೂನ್ 14 ರಂದು) ಬೆಳಿಗ್ಗೆ ನಿಧನರಾಗಿದ್ದಾರೆ.

Advertisement

ಸುಂದರ ಸೇರಿಗಾರ್ ಅವರು ಉಡುಪಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರಥಮತವಾಗಿ ಸ್ಯಾಕ್ಸೋಫೋನ್ ವಾದನದ ಕಲಿಕೆಯನ್ನು ಆರಂಭಿಸಿದ್ದರು. ಉಡುಪಿ ಮಂಗಳೂರು ಭಾಗದಲ್ಲಿ ಸ್ಯಾಕ್ಸೋಫೋನ್ ಗುರುಗಳಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಸ್ಯಾಕ್ಸೋಫೋನ್ ಅನ್ನು ಕಲಿಸಿಕೊಟ್ಟಿದ್ದಾರೆ.

ಇವರು ಮಹಿಳೆಯರಿಗೆ ಸ್ಯಾಕ್ಸೋಫೋನ್ ತರಬೇತಿ ಯನ್ನು ನೀಡಿದವರಲ್ಲಿ ಪ್ರಥಮತರು. ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಕೂಡಾ ಲಭಿಸಿತ್ತು. ಕರ್ನಾಟಕ ಮಾತ್ರವಲ್ಲದೇ ಕೇರಳ, ಹೈದರಾಬಾದ್, ತಮಿಳುನಾಡು, ಗೋವಾ, ಮುಂಬಯಿ, ಮತ್ತು ದೇಶದ ವಿವಿಧ ಭಾಗಗಳಲ್ಲಿ ಸ್ಯಾಕ್ಸೋಫೋನ್ ತರಗತಿಗಳನ್ನು ನಡೆಸಿಕೊಟ್ಟದ್ದಾರೆ, ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಉತ್ಸವ ಸಂಧರ್ಭದಲ್ಲಿ ಸುಂದರ ಸೇರಿಗಾರ ಅವರು ಸೇವೆಯನ್ನು ನಡೆಸಿಕೊಡುತ್ತಿದ್ದರು.

ಇದನ್ನೂ ಓದಿ: “ಇವರು ಅಂತಾರಾಷ್ಟ್ರೀಯ ಸಂಪತ್ತು”: ಅಜಿತ್ ದೋವಲ್ ರನ್ನು ಹೊಗಳಿದ ಅಮೆರಿಕ ರಾಯಭಾರಿ

ಸುಂದರ ಸೇರಿಗಾರ್ ಅವರಲ್ಲಿ ಸ್ಯಾಕ್ಸೋಫೋನ್ ವಾದನವನ್ನು ಕಲಿತ ವಿದ್ಯಾರ್ಥಿಗಳು ಇಂದು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಯಾಕ್ಸೋಫೋನ್ ವಾದನದ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಸುಂದರ ಸೇರಿಗಾರ ಅವರ ಮೊಮ್ಮಗಳು ಪೂಜಾ ದೇವಾಡಿಗ ಮುಂಬಯಿಯಲ್ಲಿ ಖ್ಯಾತ ಸ್ಯಾಕ್ಸೋಫೋನಿಸ್ಟ್ ಆಗಿದ್ದಾರೆ,

Advertisement

ಇವರು ಓರ್ವ ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಸುಂದರ ಸೇರಿಗಾರ ಅವರು ಇಂಟರ್ನ್ಯಾಷನಲ್ ವರ್ಚುವಲ್ ಪೀಸ್ ಯುನಿವರ್ಸಿಟಿ ಯಿಂದ ಗೌರವ ಡಾಕ್ಟರೇಟ್ ಪದವಿಯನ್ನು ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ಗೌರವವನ್ನು ಕೂಡಾ ಪಡೆದಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next