Advertisement
ಹಿಂದಿನ ಎಸ್‌ಪಿ ಪ್ರಾರಂಭಿಸಿದ್ದ ಸಾರ್ವಜನಿಕರೊಂದಿಗಿನ ಫೋನ್- ಇನ್ ಕಾರ್ಯಕ್ರಮವನ್ನು ಮುಂದು ವರಿಸಲು ನಿರ್ಧರಿಸಿದ್ದೇನೆ. ಚಿತ್ರದುರ್ಗ ದಲ್ಲಿದ್ದಾಗ ಆಕಾಶವಾಣಿಯ ಫೋನ್- ಇನ್ ಕಾರ್ಯಕ್ರಮದಲ್ಲಿ ಜನರೊಂದಿಗೆ ಮಾತನಾಡಿದ್ದೆ ಎಂದು ಹೇಳಿದ ನೂತನ ಎಸ್‌ಪಿ, ಜಿಲ್ಲೆಯ ಚಿತ್ರಣಗಳನ್ನು ಪರಿಶೀಲಿಸಿ ಅಧ್ಯಯನ ನಡೆಸಿದ ಬಳಿಕ ಕಾನೂನು ಸುವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡಲು ಸಂಬಂಧಪಟ್ಟ ಕ್ರಮ ಕೈಗೊಳ್ಳಲಾಗುವುದು ಎಂದರು.
ಉಡುಪಿ ಜಿಲ್ಲೆಯಲ್ಲಿ ಮಟ್ಕಾ, ಗಾಂಜಾ ಮೊದಲಾದ ಅಕ್ರಮ ದಂಧೆ ಗಳು ನಡೆಯುತ್ತಿರುವುದು ಹಾಗೂ ಅವುಗಳ ವಿರುದ್ಧ ಕೈಗೊಂಡ ಕ್ರಮ ಗಳ ಕುರಿತು ಡಾ| ಸಂಜೀವ ಪಾಟೀಲ್ ಅವ ರಿಂದ ಮಾಹಿತಿ ಪಡೆದು ಕೊಂಡಿ ದ್ದೇನೆ. ಅಕ್ರಮಗಳ ಮೂಲ ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಿದ್ದೇನೆ. ನೈತಿಕ ಪೊಲೀಸ್‌ಗಿರಿ ಇದ್ದಲ್ಲಿ ಹತ್ತಿಕ್ಕಲಾಗುವುದು ಎಂದು ಲಕ್ಷ್ಮಣ ನಿಂಬರ್ಗಿ ಹೇಳಿದರು. ಅತಿಥಿ ಉಪನ್ಯಾಸಕರಾಗಿದ್ದ ನಿಂಬರ್ಗಿ
ವಿಜಯಪುರದ ಇಂಡಿ ತಾಲೂಕಿನ ಬೆನಕನಹಳ್ಳಿ ಮೂಲದವರಾಗಿರುವ ಲಕ್ಷ್ಮಣ ಬಿ. ನಿಂಬರ್ಗಿ, ಬೆಳ ಗಾವಿಯ ಸವದತ್ತಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪೂರೈಸಿದ್ದು, ಹುಬ್ಬಳ್ಳಿಯ ಎಂಜಿನಿಯರಿಂಗ್ ಕಾಲೇಜಿ ನಲ್ಲಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿ ಕೇಶನ್‌ನಲ್ಲಿ ಪದವಿ ಪಡೆ ದಿದ್ದಾರೆ. ಬಳಿಕ ಹುಬ್ಬಳ್ಳಿಯ ಕೆಎಲ್‌ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸ್ವಲ್ಪ ಕಾಲ ಅತಿಥಿ ಉಪನ್ಯಾಸಕರಾಗಿ ಹಾಗೂ ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್‌ನಲ್ಲಿಯೂ ಕರ್ತವ್ಯ ನಿರ್ವಹಿಸಿದ್ದರು.
Related Articles
2014ರ ಐಪಿಎಸ್ ಬ್ಯಾಚ್‌ನವರಾದ ನಿಂಬರ್ಗಿ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಉಪ್ಪಿನಂಗಡಿಗಳಲ್ಲಿ ಎಎಸ್‌ಪಿಯಾಗಿ 6 ತಿಂಗಳು ಕರ್ತವ್ಯ ನಿರ್ವಹಿ ಸಿದ್ದರು. ಅನಂತರ ಒಂದೂವರೆ ವರ್ಷ ಚಿತ್ರದುರ್ಗ ಜಿಲ್ಲೆಯಲ್ಲಿ ಸಹಾಯಕ ಎಸ್‌ಪಿಯಾಗಿದ್ದು, ಉಡುಪಿ ಜಿಲ್ಲೆ ಎಸ್‌ಪಿಯಾಗಿ ಭಡ್ತಿ ಪಡೆದಿದ್ದಾರೆ. ಕರ್ತವ್ಯದ ನೆಲೆಯಲ್ಲಿ ಅವರದು ಉಡುಪಿ ಜಿಲ್ಲೆಗೆ ಪ್ರಥಮ ಭೇಟಿ.
Advertisement