Advertisement

ಉಡುಪಿ: ಮಳೆಯಬ್ಬರ; ಹಲವು ಮನೆಗಳು ಜಲಾವೃತ

04:23 PM Jul 24, 2019 | Team Udayavani |

ಉಡುಪಿ: ನಿರಂತರವಾಗಿ ಸುರಿದ ಮಳೆಯ ಪರಿಣಾಮ ಉಡುಪಿ ನಗರದ ರಾಜಕಾಲುವೆಯೆನಿಸಿದ ಕಲ್ಸಂಕ ತೋಡಿನ ಇಕ್ಕೆಲಗಳ ಪರಿಸರದ ಸುಮಾರು 25ಕ್ಕೂ ಅಧಿಕ ಮನೆಗಳು ಸೋಮವಾರ ತಡರಾತ್ರಿ ಮತ್ತು ಮಂಗಳವಾರ ಮಧ್ಯಾಹ್ನದವರೆಗೆ ಜಲಾವೃತವಾದವು.

Advertisement

ಗುಂಡಿಬೈಲು, ಮಠದಬೆಟ್ಟು, ಮೂಡನಿಡಂಬೂರು, ನಿಟ್ಟೂರು, ಬೈಲಕೆರೆ ಮೊದಲಾದೆಡೆ ಕಲ್ಸಂಕ ತೋಡು ಉಕ್ಕಿ ಹರಿದ ಪರಿಣಾಮ ಮನೆಗಳ ಹೊಸ್ತಿಲವರೆಗೂ ನೀರು ಬಂದು ಆತಂಕ ಸೃಷ್ಟಿಯಾಯಿತು. ಶ್ರೀಕೃಷ್ಣ ಮಠದ ರಾಜಾಂಗಣ ಪಾರ್ಕಿಂಗ್‌ ಪ್ರದೇಶದ ಹಿಂಭಾಗದಲ್ಲಿ 10ರಷ್ಟು ಮನೆಯವರು ತೊಂದರೆ ಅನುಭವಿಸಿದರು.

‘ರಾತ್ರಿ ಒಂದೇ ಸಮನೆ ಹರಿದುಬಂದ ನೀರಿನ ಮಟ್ಟ ತಗ್ಗಲೇ ಇಲ್ಲ. ಕಲ್ಸಂಕ ತೋಡಿನ ಹೂಳು ತೆಗೆಯದೇ ಇದ್ದುದು, ಗಿಡಗಂಟಿಗಳನ್ನು ತೆಗೆಯದಿರುವುದು ಮತ್ತು ಇಕ್ಕೆಲಗಳಲ್ಲಿ ತಡೆಗೋಡೆ ಕಟ್ಟದೇ ಇರುವುದರಿಂದ ಈ ಬಾರಿಯೂ ನೆರೆ ಉಂಟಾಗಿದೆ. ಮಳೆಯ ಪ್ರಮಾಣಕ್ಕಿಂತಲೂ ಕಲ್ಸಂಕ ತೋಡನ್ನು ಸ್ವಚ್ಛಗೊಳಿಸದೇ ಇರುವುದರಿಂದ ಹೆಚ್ಚು ಸಮಸ್ಯೆಯಾಯಿತು’ ಎಂದು ಸ್ಥಳೀಯ ನಿವಾಸಿಗಳು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next