Advertisement

Udupi ರಾಘವೇಂದ್ರಸ್ವಾಮಿ ವೃಂದಾವನ ಪ್ರತಿಷ್ಠೆಯ ಶತಮಾನೋತ್ಸವ: ಪುತ್ತಿಗೆ ಶ್ರೀ

01:56 AM Aug 23, 2024 | Team Udayavani |

ಉಡುಪಿ: ರಥಬೀದಿಯಲ್ಲಿರುವ ಶ್ರೀ ಮಂತ್ರಾಲಯ ಮಠದ ಶಾಖಾ ಮಠವಾದ ಶ್ರೀ ರಾಘವೇಂದ್ರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಸಂಪನ್ನಗೊಂಡಿತು.

Advertisement

ಮಧ್ಯಾಹ್ನ ಮಹಾಪೂಜೆ, ಪಲ್ಲ ಪೂಜೆಗಳನ್ನು ಪುತ್ತಿಗೆ ಶ್ರೀಪಾದರು ನೆರವೇರಿಸಿದರು. ಸಂಜೆ ಶ್ರೀ ಕೃಷ್ಣನ ಸುವರ್ಣ ರಥದಲ್ಲಿ ರಾಘವೇಂದ್ರ ಸ್ವಾಮಿಗಳ ಪೂರ್ವ ಅವತಾರವಾದ ಪ್ರಹ್ಲಾದ ರಾಜರ ಉತ್ಸವ ಮೂರ್ತಿಯ ರಥೋತ್ಸವ ನಡೆಸಿ ಶ್ರೀಕೃಷ್ಣ ಸಾನ್ನಿಧ್ಯದ ಮುಂಭಾಗದ ಚಂದ್ರ ಶಾಲೆಯಲ್ಲಿ ಪೂಜೆಯನ್ನು ಭಂಡಾರಕೇರಿ ಮಠದ ಶ್ರೀ ವಿದ್ಯೆàಶತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು.

ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ರಾಘವೇಂದ್ರ ಸ್ವಾಮಿಗಳು ಉಡುಪಿಯ ಶ್ರೀಕೃಷ್ಣ ಸಾನ್ನಿಧ್ಯದ ಮಂತ್ರಾಲಯ ಮಠದಲ್ಲಿ 10 ವರ್ಷಗಳಿಗೂ ಹೆಚ್ಚು ಕಾಲ ಇದ್ದು ಶ್ರೀಕೃಷ್ಣನ ಉಪಾಸನೆ ಮಾಡುತ್ತಾ “ಚಂದ್ರಿಕಾಪ್ರಕಾಶ’ ಎಂಬ ಉದ್ಗ†ಂಥವನ್ನು ರಚಿಸಿದ್ದರು. ಶ್ರೀಕೃಷ್ಣನ ಸ್ತೋತ್ರವನ್ನು ನಡೆಸಲು ಅವರು ರಚಿಸಿದ ಇಂದು ಎನಗೆ ಗೋವಿಂದ… ದೇವರ ನಾಮ ಪ್ರಸಿದ್ಧ. ಶ್ರೀಕೃಷ್ಣನ ಪ್ರತಿರೂಪವಾದ ಸುವರ್ಣ ಪ್ರತಿಮೆಯನ್ನು ಸ್ವಯಂ ನಿರ್ಮಿಸಿ ಶ್ರೀ ಮಠದಲ್ಲಿ ಗುರು ಪರಂಪರೆಯಿಂದ ಪೂಜಿತವಾಗಿರುವ ವಿಚಾರಗಳನ್ನು ಸ್ಮರಿಸಿದರು.

ಮಂತ್ರಾಲಯ ಶ್ರೀಪಾದರಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರ ಸಹಯೋಗದಲ್ಲಿ ಮುಂಬರುವ ವರ್ಷದಲ್ಲಿ ಉಡುಪಿಯ ರಾಘವೇಂದ್ರ ಸ್ವಾಮಿಗಳ ಬೃಂದಾವನದ ಪ್ರತಿಷ್ಠೆಯ ಶತಮಾನೋತ್ಸವವನ್ನು ವೈಭವದಿಂದ ಆಚರಿಸಲಾಗುವುದು ಎಂದು ತಿಳಿಸಿದರು.

ಪರ್ಯಾಯ ಮಠದ ದಿವಾನ ನಾಗರಾಜ ಆಚಾರ್ಯ ಉಪಸ್ಥಿತರಿದ್ದರು. ರಾಘವೇಂದ್ರ ಮಠದ ವ್ಯವಸ್ಥಾಪಕ ಶ್ರೀ ಜಯತೀರ್ಥ ಆಚಾರ್ಯರು ಶ್ರೀ ರಾಘವೇಂದ್ರ ಮಠದ ಗೌರವವನ್ನು ಪರ್ಯಾಯ ಶ್ರೀಪಾದದ್ವಯರಿಗೆ ಸಲ್ಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next