Advertisement
ಈ ಮೊದಲು ರಸೀದಿ ನೀಡುವ ಪದ್ಧತಿ ಇದ್ದು, ಬಳಿಕ ಬ್ಲ್ಯಾಕ್‌ಬೆರಿ ಸೆಟ್‌ಗಳ ಮೂಲಕ ತ್ವರಿತ ಕೇಸು ದಾಖಲಿಸುವ ಪದ್ಧತಿ ಬಂದಿತ್ತು. ಇದೀಗ “ಮಲ್ಟಿ ಫಕ್ಷನಿಂಗ್ ಡಿವೈಸ್’ ಹೆಸರಿನ ಸುಧಾರಿತ ತಂತ್ರಜ್ಞಾನ ಉಡುಪಿ ಜಿಲ್ಲೆಗೆ ಪರಿಚಯಿಸಲಾಗಿದ್ದು, ಮೊದ ಹಂತವಾಗಿ 10 ಡಿವೈಸ್‌ಗಳು ಬಂದಿವೆ. ಮಾ.11ರಿಂದ ಹೊಸ ಡಿವೈಸ್‌ನಲ್ಲಿ ಕೆಲಸ ಮಾಡಲಾಗುತ್ತಿದೆ.2012ರಲ್ಲಿ ಬ್ಲ್ಯಾಕ್‌ಬೆರಿ ಬಂದಿತ್ತು ಡಿವೈಸ್
ಸಂಪೂರ್ಣ ಪೇಪರ್ ರಹಿತ ತಾಂತ್ರಿಕತೆ ಅಡಿಯಲ್ಲಿ ಪೊಲೀಸ್ ಸರ್ವರ್‌ಗೆ ಸಂಪರ್ಕ ಕಲ್ಪಿಸುವಂತೆ ಇರುವ ಬ್ಲ್ಯಾಕ್‌ಬೆರಿ ಸಾಧನಗಳು ಬೆಂಗಳೂರಿನಲ್ಲಿ 2005ರಲ್ಲಿ ಜಾರಿಯಾಗಿದ್ದವು. 2012 ಜೂ.15ರಂದು ಇದು ಉಡುಪಿಗೆ ಪರಿಚಯಗೊಂಡಿತ್ತು. ಕೇಸಿನ ವಿವರಗಳನ್ನು ಬ್ಲಾಕ್‌ಬೆರಿಯಿಂದ ಬ್ಲೂಟೂತ್ ಮೂಲಕ ಪ್ರಿಂಟರ್‌ಗೆ ರವಾನಿಸಿ ದಾಖಲೆಯ ಪ್ರಿಂಟ್ ತೆಗೆಯಲಾಗುತ್ತಿತ್ತು. ಅಂದು ಉಡುಪಿ ಜಿಲ್ಲೆಗೆ 8 (ಉಡುಪಿಗೆ 4, ಕುಂದಾಪುರಕ್ಕೆ 4)ಸಾಧನಗಳನ್ನು ನೀಡಲಾಗಿತ್ತು. ಆದರೆ ಇದರಲ್ಲೂ ಕೆಲವೊಂದು ಲೋಪಗಳಿದ್ದ ಹಿನ್ನೆಲೆಯಲ್ಲಿ ಸುಧಾರಿತ ತಂತ್ರಜ್ಞಾನವಿರುವ ಸಾಧನವನ್ನು ಪರಿಚಯಿಸಲಾಗುತ್ತಿದೆ.
ಸದ್ಯ ಇಂಟರ್‌ನೆಟ್ ಬಳಸಿ ಟ್ರಾಫಿಕ್ ನಿಯಮ ಉಲ್ಲಂಘನೆ ಕೇಸು ಹಾಕುವುದು ಮತ್ತು ಅದರಲ್ಲೇ ಪ್ರಿಂಟ್ ತೆಗೆಯುವ ಆಪ್ಶನ್ ಅನ್ನು ಮಾತ್ರ ಆಕ್ಟಿವ್ ಮಾಡಲಾಗಿದೆ. ಸ್ಮಾರ್ಟ್ ಲೈಸೆನ್ಸ್ ಇದ್ದರೆ ಅದನ್ನು ಡಿವೈಸ್‌ನಲ್ಲಿ ಸ್ವೆ„ಪ್ ಮಾಡಿ ತಂತ್ರಾಂಶದಲ್ಲಿ ವಿವರಗಳನ್ನು ದಾಖಲಿಸಿಕೊಂಡು ಅವರು ಉಲ್ಲಂ ಸಿರುವ ನಿಯಮಕ್ಕೆ ಅನುಗುಣವಾದ ಕೇಸು ಹಾಕಲಾಗುತ್ತದೆ. ಕೇಸಿನ ವಿವರಗಳು ಆಟೋಪ್ರಿಂಟ್ ಆಗಿ ಸಿಗಲಿದೆ. ಬರಲಿದೆ ಕ್ಯಾಶ್‌ಲೆಸ್ ವ್ಯವಸ್ಥೆ
ಮಲ್ಟಿಫಂಕ್ಷನಿಂಗ್ ಡಿವೈಸ್‌ನಲ್ಲಿ ಕಾರ್ಡ್ ಸ್ವೆ„ಪ್ ಮಾಡಿ ದಂಡ ಕಟ್ಟುವ ಆಪ್ಶನ್ ಇದೆ. ಆದರೆ ಸದ್ಯಕ್ಕೆ ಆಕ್ಟಿವ್ ಮಾಡಿಲ್ಲ. ಸದ್ಯದ ಮಾದರಿಯಲ್ಲಿ ಫೈನ್ ಹಾಕಿದ ಕೂಡಲೇ ನಗದನ್ನೇ ನೀಡಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಕ್ಯಾಶ್‌ಲೆಸ್ ವ್ಯವಹಾರ ನಿರೀಕ್ಷಿಸಲಾಗಿದೆ.
Related Articles
ಇದೂ ಆ್ಯಂಡ್ರಾಯಿಡ್ ಮೊಬೈಲ್‌ನ ರೀತಿ ಎಲ್ಲ ಫೀಚರ್ ಹೊಂದಿದೆ. ವಾಹನ ಪತ್ತೆ, ಜಿಪಿಎಸ್, ಫೋಟೋ ತೆಗೆಯುವುದು, ವಿಡಿಯೋ ಮಾಡುವ ಸೌಕರ್ಯವಿದೆ. ಮುಂದಿನ ದಿನಗಳಲ್ಲಿ ಆರ್‌ಟಿಒ ಸರ್ವರ್ ಜತೆಗೆ ಕನೆಕ್ಟ್ ಆಗಿ ಸ್ಮಾಟ್ ಕಾರ್ಡ್ ರೀತಿ ಇರುವ ಚಾಲನಾ ಪರವಾನಿಗೆಯಲ್ಲೇ ಟ್ರಾಫಿಕ್ ನಿಯಮ ಉಲ್ಲಂಘನೆ ಸ್ಟೋರ್ ಮಾಡಲಾಗುತ್ತದೆ. ಮಲ್ಟಿ ಫಂಕ್ಷನಿಂಗ್ ಡಿವೈಸ್‌ನಲ್ಲಿಯೂ ದತ್ತಾಂಶ ಶೇಖರಣೆ ಯಾಗುತ್ತದೆ. ಇದನ್ನು ಬೆಂಗಳೂರಿನ ದಿಮ್ಯಾಟಿಕ್ಸ್ ಐಟಿ ಸಲ್ಯೂಶನ್ ನವರು ಡಿವೈಸ್‌ನ ತಾಂತ್ರಿಕ ನಿರ್ವಹಣೆ ಮಾಡುತ್ತಾರೆ.
Advertisement
8 ಠಾಣೆಗಳಿಗೆ 10 ಹೊಸ ಡಿವೈಸ್ಜಿಲ್ಲೆಯ 23 ಪೊಲೀಸ್ ಠಾಣೆಗಳ ಪೈಕಿ 8 ಪೊಲೀಸ್ ಠಾಣೆಗಳಿಗೆ 10 ಹೊಸ ಡಿವೈಸ್‌ಗಳನ್ನು ಒದಗಿಸಲಾಗಿದೆ. ಕುಂದಾಪುರ ಮತ್ತು ಉಡುಪಿ ಟ್ರಾಫಿಕ್‌ಗೆ ತಲಾ 2 ಹಾಗೂ ಬೈಂದೂರು, ಬ್ರಹ್ಮಾವರ, ಪಡುಬಿದ್ರಿ, ಕಾಪು, ಮಣಿಪಾಲ ಮತ್ತು ಕಾರ್ಕಳ ನಗರ ಪೊಲೀಸ್ ಠಾಣೆಗಳಿಗೆ ತಲಾ ಒಂದು ಡಿವೈಸ್ ನೀಡಲಾಗಿದೆ. ಪೊಲೀಸ್ ಇಲಾಖೆಯ ಬೆಂಗಳೂರಿನ ಕೇಂದ್ರ ಸ್ಥಾನ ಸಹಿತ ಪಶ್ಚಿಮ ವಲಯ ಐಜಿಪಿ ಕಚೇರಿ ಮತ್ತು ಜಿಲ್ಲಾ ಎಸ್‌ಪಿ ಕಚೇರಿಯಲ್ಲಿ ಮಾನಿಟರಿಂಗ್ ಮಾಡಲಾಗುತ್ತದೆ. 2ನೇ ಹಂತದಲ್ಲಿ ಮತ್ತಷ್ಟು ಡಿವೈಸ್‌ಗಳನ್ನು ನಿರೀಕ್ಷಿಸಲಾಗಿದೆ.
– ಲಕ್ಷ್ಮಣ ಬ. ನಿಂಬರಗಿ, ಉಡುಪಿ ಎಸ್‌ಪಿ. ಪೊಲೀಸ್ ಠಾಣೆ ಕೇಸು ದಂಡ ವಸೂಲಾತಿ ಮೊತ್ತ (ರೂ.)
ಉಡುಪಿ ಟ್ರಾಫಿಕ್ 1,757 1,93,400
ಕುಂದಾಪುರ ಟ್ರಾಫಿಕ್ 800 1,83,900
ಬ್ರಹ್ಮಾವರ 682 1,74,000
ಮಣಿಪಾಲ 752 1,15,600
ಬೈಂದೂರು 695 1,02,200
ಕಾರ್ಕಳ ನಗರ 598 84,000
ಕಾಪು 611 73,500
ಪಡುಬಿದ್ರಿ 496 53,400
ಒಟ್ಟು: 6,391 9,80,000 – ಚೇತನ್ ಪಡುಬಿದ್ರಿ