Advertisement

ಉಡುಪಿ: ಲೈಂಗಿಕ ಕಾರ್ಯಕರ್ತೆಯರಿಗೆ ಎಚ್ಚರಿಕೆ  

08:15 PM Oct 27, 2022 | Team Udayavani |

ಉಡುಪಿ: ನಗರದ ಸರ್ವಿಸ್‌ ಬಸ್‌ ನಿಲ್ದಾಣ ಹಾಗೂ ಹಳೆ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದ ಬಳಿ ಗ್ರಾಹಕರಿಗೆ ಹೊಂಚು ಹಾಕುತ್ತಿದ್ದ ಲೈಂಗಿಕ ಕಾರ್ಯಕರ್ತರಿಗೆ ಉಡುಪಿ ನಗರ ಠಾಣೆಯ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Advertisement

ಮುಂಜಾನೆಯಿಂದ ತಡರಾತ್ರಿವರೆಗೆ ಈ ಭಾಗದಲ್ಲಿ ಸಾವಿರಾರು ಮಂದಿ ಕೂಲಿಕಾರ್ಮಿಕರು ಸಹಿತ ಇತರಭಾಗದಿಂದ ಕೆಲಸಕ್ಕೆಂದು ಆಗಮಿಸುತ್ತಾರೆ. ಸಾರ್ವಜನಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಓಡಾಟ ಮಾಡುತ್ತಿರುತ್ತಾರೆ. ಈ ಬಗ್ಗೆ ಪೊಲೀಸ್‌ ಠಾಣೆಗೂ ಹಲವಾರು ಬಾರಿ ದೂರು ನೀಡಲಾಗಿದೆ. ಎಚ್ಚರಿಕೆ ನೀಡಿದರೂ ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿತ್ತು.

ಕೆಲವೊಂದು ಖಾಸಗಿ ಹೊಟೇಲ್‌ಗ‌ಳು ಕೂಡ ಇವರಿಗೆ ಮಿತದರದಲ್ಲಿ ಕೊಠಡಿಗಳನ್ನು ನೀಡುತ್ತಿರುವುದರಿಂದ ಕಮಿಷನ್‌ ಆಧಾರದಲ್ಲಿ ಈ ದಂಧೆ ನಗರದಲ್ಲಿ ನಡೆಯುತ್ತಿದೆ. ಈ ಎಲ್ಲ ಮಾಹಿತಿಗಳ ಹಿನ್ನೆಲೆಯಲ್ಲಿ ಉಡುಪಿ ನಗರ ಠಾಣೆಯ ಪೊಲೀಸರು ಹಠಾತ್ತನೆ ಅವರ ಬೆನ್ನು ಹತ್ತಿ ಎಚ್ಚರಿಕೆ ನೀಡಿದ್ದಾರೆ.

ಪೊಲೀಸರ ವಾಹನ ಕಂಡು ಕಾರ್ಯಕರ್ತರೆಲ್ಲ ದಿಕ್ಕಾಪಾಲಾಗಿ ಓಡಿದ್ದಾರೆ. ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಅವರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next