Advertisement

ಮಧ್ವರಿಂದ ತಣ್ತೀಶಾಸ್ತ್ರೀಯ ಸಂವಿಧಾನ : ಮೊಯ್ಲಿ

11:48 PM Jan 18, 2020 | Sriram |

ಉಡುಪಿ: ಭಕ್ತಿ ಸಿದ್ಧಾಂತದ ಮೂಲಕ ಆಧ್ಯಾತ್ಮಿಕ ವಿಮರ್ಶೆಯನ್ನು ಮಾಡಿದ ಆಚಾರ್ಯ ಮಧ್ವರು ತಣ್ತೀಶಾಸ್ತ್ರೀಯ ಸಂವಿಧಾನವನ್ನು ಜಗತ್ತಿಗೆ ಕೊಟ್ಟರು ಎಂದು ಮಾಜಿ ಮುಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಯ್ಲಿ ಬಣ್ಣಿಸಿದರು.

Advertisement

ಅದಮಾರು ಮಠದ ದರ್ಬಾರ್‌ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಅವರು, ಜೀವ, ಮನಸ್ಸು, ಸತ್ಯ ಇತ್ಯಾದಿಗಳು ಅನಂತ ಎಂದು ತಣ್ತೀಜ್ಞಾನದ ಕ್ಷೇತ್ರದಲ್ಲಿ ವಿಜ್ಞಾನಿಯಂತೆ ಕೆಲಸ ಮಾಡಿದವರು ಮಧ್ವರು ಎಂದರು.

ಮಹಾಭಾರತ, ರಾಮಾಯಣಗಳು ಆಯಾ ಕಾಲಘಟ್ಟದ ಧರ್ಮವನ್ನು ತಿಳಿಸುತ್ತಿದ್ದರೂ ಅದರೊಳಗಿನ ವಿಷಯಗಳನ್ನು ಆದ್ಯತೆಯ ಮಟ್ಟದಲ್ಲಿ ತಿಳಿಯುವಂಥದ್ದಿದೆ. ಮಧ್ವಾಚಾರ್ಯರು ತುಳು ಭಾಷೆಗೂ ಮಹತ್ವವನ್ನು ಕೊಟ್ಟು ಎಲ್ಲರನ್ನೂ ಒಳಗೊಳ್ಳುವ ಸಮಾಜವನ್ನು ಕಟ್ಟುವ ಸಿದ್ಧಾಂತವನ್ನು ಪ್ರತಿಪಾದಿಸಿದರು. ಭಗವದ್ಗೀತೆ, ಭಕ್ತಿ ಮಾರ್ಗಕ್ಕೆ ಹೊಸ ವ್ಯಾಖ್ಯಾನವನ್ನು ಬರೆದರು ಎಂದು ಬಣ್ಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next