ಉಡುಪಿ: ಉಡುಪಿ ಪರ್ಯಾಯೋತ್ಸವದ ಹಿನ್ನೆಲೆಯಲ್ಲಿ ಜ. 17 ಮತ್ತು ಜ.18ರಂದು ಪರ್ಯಾಯ ದರ್ಬಾರ್ ಮತ್ತು ಗಣ್ಯರ ವಾಹನ ಪಾರ್ಕಿಂಗ್ ವ್ಯವಸ್ಥೆ ಕುರಿತು ಶ್ರೀಕೃಷ್ಣ ಮಠದ ರಾಜಾಂಗಣದ ಪೇ ಪಾರ್ಕಿಂಗ್ ಹಾಗೂ ಹೊರಗಡೆಯಿಂದ ಬರುವ ಎಲ್ಲ ವಾಹನಗಳಿಗೆ ಪಾರ್ಕಿಂಗ್ ಸ್ಥಳ ನಿಗದಿಗೊಳಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ದರ್ಬಾರ್ ಕಾರ್ಯಕ್ರಮ ಮತ್ತು ವಿವಿಐಪಿ ವಾಹನ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಶ್ರೀಕೃಷ್ಣ ಮಠದ ರಾಜಾಂಗಣದ ಪಾರ್ಕಿಂಗ್ ಮತ್ತು ಡಿಮಾರ್ಟ್ ಪಾರ್ಕಿಂಗ್ ಸ್ಥಳವನ್ನು ವಿಐಪಿ ವಾಹನ ಪಾರ್ಕಿಂಗ್‌ಗೆ ಹಾಗೂ ಹೊರಗಡೆಯಿಂದ ಬರುವ ಎಲ್ಲ ವಾಹನಗಳಿಗೆ ಈ ಕೆಳಕಂಡ ಸ್ಥಳವನ್ನು ಕಾಯ್ದಿರಿಸುವಂತೆ ಸೂಚನೆ ನೀಡಲಾಗಿದೆ.
ಎಲ್ಲ ಕಡೆಯಿಂದ ಆಗಮಿಸುವ ವಿವಿಐಪಿ ವಾಹನಗಳಿಗೆ ರಾಜಾಂಗಣ ಪಾರ್ಕಿಂಗ್ ಪ್ರದೇಶ, ವಿಐಪಿ ವಾಹನಗಳಿಗೆ ಡಿ ಮಾರ್ಟ್, ಬೆಂಗಳೂರು ಬಸ್ ಮತ್ತು ರೂಟ್ ಬಸ್‌ಗಳಿಗೆ ಕರಾವಳಿಯಿಂದ ಅಂಬಲಪಾಡಿ ಎರಡೂ ಕಡೆ ಸರ್ವಿಸ್ ರಸ್ತೆ, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳಿಗೆ ಕಿತ್ತೂರು ಚೆನ್ನಮ್ಮ ಕ್ರಾಸ್ ರಸ್ತೆಯ ಎರಡೂ ಬದಿ, ಟೌನ್‌ಹಾಲ್ ಪಾರ್ಕಿಂಗ್, ಪೊಲೀಸ್ ವಾಹನಗಳಿಗೆ ಮದರ್ ಸಾರೋಸ್ ಚರ್ಚ್, ಮಂಗಳೂರು ಕಡೆಯಿಂದ ಆಗಮಿಸುವ ವಾಹನಗಳಿಗೆ ಜಿ. ಶಂಕರ್ ಶಾಮಿಲಿ ಹಾಲ್ ಎದುರು, ನಗರದಿಂದ ಆಗಮಿಸುವ ವಾಹನಗಳಿಗೆ ಅಜ್ಜರಕಾಡು ಸೈಂಟ್ ಸಿಸಿಲಿ ಸ್ಕೂಲ್ ಮೈದಾನ ಹಾಗೂ ಸರ್ವೀಸ್ ನಿಲ್ದಾಣದ ಬಳಿಯ ಬೋರ್ಡ್ ಹೈಸ್ಕೂಲ್, ಕಾರ್ಕಳ ಹಾಗೂ ಮಣಿಪಾಲ ಕಡೆಯಿಂದ ಆಗಮಿಸುವ ವಾಹನಗಳಿಗೆ ಎಂಜಿಎಂ ಕಾಲೇಜು ಮತ್ತು ರಾಯಲ್ ಗಾರ್ಡನ್ ಬಳಿ, ಸಂತೆಕಟ್ಟೆ ಹಾಗೂ ಮಲ್ಪೆ ಕಡೆಯಿಂದ ಆಗಮಿಸುವ ವಾಹನಗಳಿಗೆ ಕರಾವಳಿ ಹೊಟೇಲ್ ಪಾರ್ಕಿಂಗ್ ಸ್ಥಳ, ಕಿನ್ನಿಮೂಲ್ಕಿ ಸ್ವಾಗತ ಗೋಪುರ-ಕನ್ನರ್ಪಾಡಿಯಿಂದ ಬರುವವರಿಗೆ ಅಜ್ಜರಕಾಡು ವಿವೇಕಾನಂದ ಶಾಲೆ ಹಾಗೂ ಭುಜಂಗ ಪಾರ್ಕ್ ಪಕ್ಕದ ರಸ್ತೆ, ಕುಕ್ಕಿಕಟ್ಟೆ-ಮಣಿಪಾಲ-ಮೂಡುಬೆಳ್ಳೆ-ಕಾರ್ಕಳದಿಂದ ಆಗಮಿಸುವ ವಾಹನಗಳು ಬೀಡಿನಗುಡ್ಡೆ ಕ್ರೀಡಾಂಗಣ, ಬೀಡಿನಗುಡ್ಡೆ ಮೈದಾನ, ವಿದ್ಯೋದಯ ಹೈಸ್ಕೂಲ್‌ನಲ್ಲಿ ನಿಲುಗಡೆ ಮಾಡಬೇಕು. ಅಲೆವೂರು- ಮೂಡುಬೆಳ್ಳೆ, ಕೊರಂಗ್ರಪಾಡಿ, ಕುಕ್ಕಿಕಟ್ಟೆಯಿಂದ ಆಗಮಿಸುವ ವಾಹನಗಳು ಅಮ್ಮಣಿ ರಾಮಣ್ಣ ಶೆಟ್ಟಿ ಹಾಲ್, ಯುಬಿಎಂಸಿ ಚರ್ಚ್ ಮಿಷನ್ ಕಾಂಪೌಂಡ್ ರಸ್ತೆ, ಕ್ರಿಶ್ಚಿಯನ್ ಹೈಸ್ಕೂಲ್, ಕ್ರಿಶ್ಚಿಯನ್ ಪ.ಪೂ.ಕಾಲೇಜು, ಮುದ್ದಣ್ಣ ಎಸ್ಟೇಟ್‌ನಲ್ಲಿ ನಿಲುಗಡೆ ಮಾಡುವುದು. ಎಲ್ಲ ಕಡೆಯಿಂದ ಆಗಮಿಸುವ ಕಾರು ಮತ್ತು ದ್ವಿಚಕ್ರ ವಾಹನಗಳನ್ನು ಕಲ್ಸಂಕ-ಗುಂಡಿಬೈಲು ರಸ್ತೆಯ ಎರಡೂ ಬದಿ ನಿಲ್ಲಿಸುವುದು, ಉಡುಪಿ ನಗರದಿಂದ ಆಗಮಿಸುವ ದ್ವಿಚಕ್ರ ವಾಹನಗಳನ್ನು ವೆಂಕಟರಮಣ ದೇವಸ್ಥಾನದ ಬಳಿಯ ನಾಗಬನದ ಕ್ರಾಸ್ ಬಳಿ ನಿಲ್ಲಿಸುವುದು.