Advertisement

ಉಡುಪಿ : ಮಧ್ಯಾಹ್ನ ಒಂದರವರೆಗೂ ಅಂಗಡಿ ಮಳಿಗೆಗೆ ಅವಕಾಶ

09:56 PM May 02, 2020 | Sriram |

ಉಡುಪಿ : ಜಿಲ್ಲೆಯು ಹಸಿರು ವಲಯಕ್ಕೆ ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ಜನರಿಗೆ ಇನ್ನಷ್ಟು ಲಾಕ್‌ಡೌನ್ ಸಡಿಲಿಕೆ ವಿನಾಯಿತಿ ದೊರೆತಿದೆ.
ಸೋಮವಾರದಿಂದ ದಿನ ಬಳಕೆ ವಸ್ತುಗಳ ಖರೀದಿ ಸಮಯವನ್ನೂ ವಿಸ್ತರಿಸಿದ್ದು, ಬೆಳಗ್ಗೆ 7 ರಿಂದ ಮಧ್ಯಾಹ್ನ 1 ರವರೆಗೆ ಅಂಗಡಿ ಮಳಿಗೆಗಳು ಕಾರ್ಯ ನಿರ್ವಹಿಸಲಿವೆ. ಇದರೊಂದಿಗೆ ಕಾರ್ಖಾನೆಗಳಲ್ಲಿನ ಸಿಬಂದಿಗೆ ಸಂಜೆ 5 ರಿಂದ 7 ರವರೆಗೆ ಮನೆಗೆ ತೆರಳಲು ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

Advertisement

ಶನಿವಾರ ಜಿ.ಪಂ. ಸಭಾಂಣದಲ್ಲಿ ನಡೆದ ಜಿಲ್ಲೆಗೆ ಅಂತರ್ ಜಿಲ್ಲೆ/ ರಾಜ್ಯದಿಂದ ಜನರನ್ನು ಕರೆತರುವ ಮತ್ತು ಕಳುಹಿಸಿ ಕೊಡುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆದರೆ ಅಂತರ್ ಜಿಲ್ಲಾ ಪ್ರವಾಸಕ್ಕೆ ಅನುಮತಿ ನೀಡುವುದಿಲ್ಲ ಎಂಬುದನ್ನು ಖಚಿತಪಡಿಸಿದ ಅವರು, ಜಿಲ್ಲೆಯೊಳಗಿನ ಬಸ್ ಸಂಚಾರವನ್ನು ಇನ್ನೂ ಒಂದು ವಾರದ ಕಾಲ ಆರಂಭಿಸುವುದಿಲ್ಲ. ಸೆಲೂನ್, ಸ್ಪಾಗಳನ್ನೂ ಸಹ ತೆರೆಯಲು ಇನ್ನೂ ಒಂದು ವಾರ ಅವಕಾಶವಿಲ್ಲ ಎಂದು ಹೇಳಿದರು.

ವೈದ್ಯಕೀಯ ಕಾರಣ ಹೊರತುಪಡಿಸಿ ಇತರ ಕಾರಣಕ್ಕೆ ಪಾಸ್ ನೀಡುವುದಿಲ್ಲ. ಅಕ್ರಮ ಪ್ರವೇಶಿಸುವವರಿಗೆ ಕಡ್ಡಾಾಯವಾಗಿ ಸರಕಾರಿ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು. ಹಾಗೆಯೇ ಅಂತರ್‌ಜಿಲ್ಲೆ ಹಾಗೂ ರಾಜ್ಯಗಳಿಂದ ಬರುವವರು ಕಡ್ಡಾಯವಾಗಿ ಸರಕಾರಿ ಕ್ವಾರಂಟೈನ್‌ಗೆ ಒಳಪಡಬೇಕು. ಆ ಷರತ್ತಿನೊಂದಿಗೆ ಮಾತ್ರ ಜಿಲ್ಲೆಯೊಳಗೆ ಪ್ರವೇಶಿಸಲು ಬಿಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಜಿಲ್ಲೆಯ ನಾಗರಿಕರ ಆರೋಗ್ಯದ ಹಿತದೃಷ್ಟಿಯಿಂದ ಕಠಿಣ ನಿಯಮಾವಳಿ ಅನಿವಾರ್ಯ. ಎಲ್ಲರೂ ಸಹಕರಿಸಬೇಕು ಎಂದು ವಿನಂತಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next