Advertisement

Udupi ನೇಜಾರು ಕೊಲೆ ಪ್ರಕರಣ ತನಿಖೆ ಮತ್ತಷ್ಟು ವಿಳಂಬ?

12:26 AM Jun 16, 2024 | Team Udayavani |

ಉಡುಪಿ: ರಾಜ್ಯಮಟ್ಟದಲ್ಲಿ ಸಂಚಲನ ಉಂಟುಮಾಡಿದ್ದ ನೇಜಾರಿನಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣದ ಆರೋಪಿ ಪ್ರವೀಣ್‌ ಚೌಗುಲೆ ಪ್ರಕರಣದ ವಿಚಾರಣೆಗೆ ಎರಡನೇ ಹೆಚ್ಚುವರಿ ಸತ್ರ ನ್ಯಾಯಾಲಯಕ್ಕೆ ಹೊಸ ನ್ಯಾಯಾಧೀಶರು ಬರುವವರೆಗೆ ಕಾಯಬೇಕಿದೆ.

Advertisement

ಪ್ರಸ್ತುತ ಇಲ್ಲಿಯ ನ್ಯಾಯಾಧೀಶ ರಾದ ದಿನೇಶ್‌ ಹೆಗ್ಡೆ ಅವರು ವರ್ಗಾವಣೆಗೊಂಡಿದ್ದಾರೆ. ಈ ಹಿಂದೆ ನಡೆದ ಕಲಾಪದಲ್ಲಿ ಜೂ. 13ರಿಂದ 15ರ ವರೆಗೆ ವಿಚಾರಣೆಗೆ ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ನ್ಯಾಯಾಧೀಶರೇ ಇಲ್ಲದ ಕಾರಣ ಆರೋಪಿ ಪ್ರವೀಣ್‌ ಚೌಗುಲೆಯನ್ನು ವೀಡಿಯೋ ಕಾನ್ಫರೆನ್ಸ್‌ (ವಿಸಿ) ಮೂಲಕ ಪ್ರಭಾರ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಅವರ ಮುಂದೆ ಹಾಜರುಪಡಿಸಲಾಯಿತು. ಬಳಿಕ ವಿಚಾರಣೆ ಮುಂದೂಡಲಾಯಿತು.

ಇತ್ತೀಚೆಗಷ್ಟೇ ಜಿಲ್ಲಾ ಪ್ರಧಾನ ನ್ಯಾಯಾಧೀಶರಾಗಿದ್ದ ಶಾಂತ ವೀರ ಶಿವಪ್ಪ ಸಹಿತ ಇತರ ನಾಲ್ವರು ನ್ಯಾಯಾಧೀಶರ ವರ್ಗಾವಣೆ ಆಗಿದೆ. ಈ ಜಾಗಕ್ಕೆ ಹೊಸನ್ಯಾಯಾಧೀಶರು ನೇಮಕ ವಾದರೂ, 2ನೇ ಹೆಚ್ಚುವರಿ ಸತ್ರ ನ್ಯಾಯಾಲ ಯದ ನ್ಯಾಯಾಧೀಶರಾಗಿದ್ದ ದಿನೇಶ್‌ ಹೆಗ್ಡೆ ಅವರಿಂದ ತೆರ ವಾದ ಸ್ಥಾನಕ್ಕೂ ಯಾರನ್ನೂ ನೇಮಿಸಿಲ್ಲ.
ಪ್ರಕರಣದ ವಿಚಾ ರಣೆ ತ್ವರಿತಗತಿಯಲ್ಲಿ ನಡೆಯುತ್ತಿತ್ತು. ಆದರೆ ಈಗ ಹೊಸ ನ್ಯಾಯಾಧೀಶರು ಬಂದು ಪ್ರಕರಣವನ್ನು ಅರ್ಥ ಮಾಡಿಕೊಂಡು ವಿಚಾರಣೆ ಆರಂಭಿ ಸಲು ಕೊಂಚ ಸಮಯ ತಗುಲುವ ಸಂಭವವಿದೆ. ಈ ಹಿಂದಿನ ದಿನೇಶ್‌ ಹೆಗ್ಡೆಯವರು ಸಿವಿಲ್‌, ಕ್ರಿಮಿನಲ್‌ ಅಷ್ಟೇ ಅಲ್ಲದೆ ಸೋಮವಾರ ಹಾಗೂ ಮಂಗಳವಾರ ಕಾರ್ಕಳ ತಾಲೂಕಿನ ಪ್ರಕರಣಗಳನ್ನೂ ನಿರ್ವಹಿಸುತ್ತಿದ್ದರು. ಈಗ ಅವರನ್ನು ಬೆಂಗಳೂರಿಗೆ ವರ್ಗಾಯಿಸ ಲಾಗಿದೆ.

ನ. 12ರಂದು ನಡೆದ ಘಟನೆ
2023ರ ನವೆಂಬರ್‌ 12ರಂದು ಮುಂಜಾನೆ ಈ ಘಟನೆ ನಡೆದಿದ್ದು, ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿ ದ್ದರೆ ಒಬ್ಬರು ಗಂಭೀರವಾಗಿ ಗಾಯ ಗೊಂಡಿದ್ದರು. ಕೃತ್ಯ ನಡೆಸಿದ ಬಳಿಕ ಆರೋಪಿ ಪ್ರವೀಣ್‌ ಚೌಗುಲೆ ತಲೆಮರೆ ಸಿಕೊಂಡಿದ್ದು, ಕೆಲವು ದಿನಗಳ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದರು. ಪ್ರಸ್ತುತ ಆತ ಪರಪ್ಪನ ಆಗ್ರಹಾರ ಜೈಲಿನಲ್ಲಿದ್ದು, ವಿಚಾರಣೆ ವೇಳೆ ವಿಸಿ ಮೂಲಕ ಹಾಜರಾಗುತ್ತಿದ್ದಾನೆ.

ಜು. 18ಕ್ಕೆ ವಿಚಾರಣೆ ಮುಂದೂಡಿಕೆ
ಉಡುಪಿ: ಪ್ರಕರಣದ ಆರೋಪಿ ಪ್ರವೀಣ್‌ ಚೌಗುಲೆಯ ವಿಚಾರಣೆ ಯನ್ನು ನ್ಯಾಯಾಧೀಶರು ಜು.18ಕ್ಕೆ ಮುಂದೂಡಿದ್ದಾರೆ. ಜೂ. 16ರಿಂದ 18ಕ್ಕೆ ವಿಚಾರಣೆ ನಿಗದಿಯಾಗಿತ್ತು. ಆದರೆ 2ನೇ ಹೆಚ್ಚುವರಿ ನ್ಯಾಯಾ ಧೀಶರು ವರ್ಗಾವಣೆ ಯಾಗಿದ್ದ ಕಾರಣ ವಿಚಾರಣೆ ನಡೆಯಲಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next