Advertisement

Udupi; ನೇಜಾರು ಕೊಲೆ ಪ್ರಕರಣ: ಆರೋಪಿ ನ್ಯಾಯಾಲಯಕ್ಕೆ ಹಾಜರು

12:34 AM Apr 06, 2024 | Team Udayavani |

ಉಡುಪಿ: ನೇಜಾರಿನಲ್ಲಿ ನಡೆದ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಪ್ರವೀಣ್‌ ಚೌಗುಲೆಯನ್ನು ವೀಡಿಯೋ ಕಾನ್ಫರೆನ್ಸ್‌ (ವಿಸಿ) ಮೂಲಕ ಶುಕ್ರವಾರ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು.

Advertisement

ಈ ಪ್ರಕರಣದ ತನಿಖಾಧಿಕಾರಿ ಮಂಜುನಾಥ ಗೌಡ, ಆರೋಪಿ ಪರ ವಕೀಲರು ಈ ವೇಳೆ ಉಪಸ್ಥಿತರಿದ್ದರು. ವಿಶೇಷ ಸರಕಾರಿ ಅಭಿಯೋಜಕರು ಮುಂದಿನ ವಿಚಾರಣೆ ಸಂದರ್ಭದಲ್ಲಿ ಪ್ರಕರಣಕ್ಕೆ ಪೂರಕವಾದ ಸಾಕ್ಷಿದಾರರ ಹೆಸರು ಸಹಿತವಾದ ಮೆಮೊ ಸಲ್ಲಿಸಬೇಕು. ಆ ಮೂಲಕ ಸಾಕ್ಷಿದಾರರಿಗೆ ಕೋರ್ಟ್‌ ಸಮನ್ಸ್‌ ನೀಡಲು ಸಾಧ್ಯವಾಗುತ್ತದೆ ಎಂದು ನ್ಯಾಯಾಧೀಶರು ವಿಚಾರಣೆ ವೇಳೆ ತಿಳಿಸಿದ್ದಾರೆ.

ಶೀಘ್ರ ವಿಲೇವಾರಿ: ಸೂಚನೆ
ಪ್ರಕರಣದ ಶೀಘ್ರ ವಿಲೇವಾರಿಗೆ ಅನುಕೂಲವಾಗುವಂತೆ ಎರಡೂ ಕಡೆಯಿಂದ ಪೂರ್ಣ ಸಹಕಾರ ನೀಡಲು ಕೋರ್ಟ್‌ ತಿಳಿಸಿದೆ. ಮುಂದಿನ ವಿಚಾರಣೆ ಎ. 10ರಂದು ನಡೆಯಲಿದೆ. ಆ ದಿನ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಮುಂದಿನ ಮೂರು ದಿನಗಳ ಕಾಲ ವಿಚಾರಣೆಗೆ ಕರೆಯಬೇಕಾದ ಸಾಕ್ಷಿಗಳ ಕುರಿತು ಜ್ಞಾಪನಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾ ರೆ. ಅದರಂತೆ ನ್ಯಾಯಾಲಯ ಸಾಕ್ಷಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡುತ್ತದೆ. ಅಂದಿನಿಂದ ಪ್ರಕರಣದ ವಿಚಾರಣೆ ಆರಂಭಗೊಳ್ಳುತ್ತದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣದ ಪ್ರಮುಖ ಸಾಕ್ಷಿಗಳು, ಮಹಜರು ಸಾಕ್ಷಿಗಳು ಸೇರಿದಂತೆ ವಿವಿಧ ಸಾಕ್ಷಿಗಳ ವರ್ಗಾವಾರು ಪ್ರತ್ಯೇಕ ಪಟ್ಟಿಯನ್ನು ತಯಾರಿಸಿ ವಿಶೇಷ ಪಬ್ಲಿಕ್‌ ಪ್ರಾಸಿ ಕ್ಯೂಟರ್‌ ಜ್ಞಾಪನಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next