ಮಲ್ಪೆ: ಕೊಡವೂರಿನ ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಅಲೈಡ್ ಆರ್ಟ್ಸ್ ಸಂಸ್ಥೆಯ ವತಿಯಿಂದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ ನ. 4ರಿಂದ 6ರ ವರೆಗೆ ಉಡುಪಿ ಅಂಬಾಗಿಲಿನ ಅಮೃತ್ ಗಾರ್ಡನ್ ಸಭಾಂಗಣದಲ್ಲಿ ನಡೆಯಲಿದೆ.
ನ. 4ರಂದು ಅಪರಾಹ್ನ 3ಕ್ಕೆ ನಾಡೋಜ ಡಾ| ಜಿ. ಶಂಕರ್ ಸ್ಪರ್ಧೆಯನ್ನು ಉದ್ಘಾಟಿಸಲಿದ್ದು, ಶಾಸಕ ಕೆ. ರಘುಪತಿ ಭಟ್ ಗ್ರ್ಯಾನ್‌ಮಾಸ್ಟರ್ ಪುತ್ಥಳಿಯನ್ನು ಅನಾವರಣಗೊಳಿಸಲಿದ್ದಾರೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸಮಾ ರಂಭದ ಅಧ್ಯಕ್ಷತೆ ವಹಿಸುವರು.
ಈ ಸಂದರ್ಭ 5 ಮಂದಿ ಅಶಕ್ತರಿಗೆ ಸಹಾಯಧನ, 4 ಮಂದಿ ದಿವ್ಯಾಂಗರಿಗೆ ವೀಲ್‌ಚೇರ್ ವಿತರಣೆ, ಎರಡು ಬುದ್ಧಿಮಾಂದ್ಯ ಮಕ್ಕಳ ಶಾಲೆಗೆ ನೆರವು, ಒಂದು ಕುಟುಂಬಕ್ಕೆ ಜೀವನ ನಿರ್ವಹಣೆಗಾಗಿ ಗೋದಾನ ಮಾಡಲಿದ್ದಾರೆ.
250 ವಿಭಾಗಗಳಲ್ಲಿ ಸ್ಪರ್ಧೆ
ಬುಡೋಕಾನ್ ಕರಾಟೆ ಡೋ ಇಂಟರ್ ನ್ಯಾಶನಲ್‌ನ ಅಧ್ಯಕ್ಷ ಸಿ. ಹನುಮಂತರಾವ್ ಮಾರ್ಗದರ್ಶನದಲ್ಲಿ ಸ್ಪರ್ಧೆಗಳು ನಡೆಯಲಿದ್ದು, ಕಾರ್ಯದರ್ಶಿ ಪ್ರವೀಣ್ ಕುಮಾರ್ ತಾಂತ್ರಿಕ ಸಲಹೆಯನ್ನು ನೀಡಲಿದ್ದಾರೆ.
ದೇಶದ 24 ರಾಜ್ಯಗಳ ಸುಮಾರು ಎರಡು ಸಾವಿರಕ್ಕೂ ಹೆಚ್ಚಿನ ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆ ಇದೆ. ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ 160 ತೀರ್ಪುಗಾರರು ಭಾಗವಹಿಸಲಿದ್ದಾರೆ. ಸ್ಪರ್ಧಾಕೂಟದಲ್ಲಿ ವೈಯಕ್ತಿಕ ಕಟಾ, ವೈಯಕ್ತಿಕ ಕುಮಿಟೆ, ತಂಡ ಕಟಾ ಅಲ್ಲದೆ ಹೊಸ ರೀತಿಯ ತಂಡ ಕುಮಿಟೆ ಸ್ಪರ್ಧೆಯನ್ನೂ ಸೇರಿಸಲಾಗಿದೆ. ಸ್ಪರ್ಧಿಗಳ ಬೆಲ್ಟ್, ವಯಸ್ಸು, ದೇಹ ತೂಕದ ಆಧಾರದಲ್ಲಿ ವಿವಿಧ ವಿಭಾಗಗಳಿದ್ದು ಸುಮಾರು 250 ಉಪ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.
40ನೇ ಸ್ಪರ್ಧಾ ಕೂಟ
ಈ ಬಾರಿಯದು 40ನೇ ಸ್ಪರ್ಧಾ ಕೂಟ. ಕೊಡವೂರು ಶಾಖೆಯ ಶಿಕ್ಷಕ ಕೃಷ್ಣ ಜಿ. ಕೋಟ್ಯಾನ್ ಅವರು ಸ್ಪರ್ಧೆಯನ್ನು ಆಯೋಜಿಸುತ್ತಿದ್ದಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.