Advertisement
ಧೂಳು ನಿಯಂತ್ರಿಸಲು ನೀರು ಸುರಿದಿದ್ದರಿಂದ ಪ್ರಯಾಣಿಕರು ಬಸ್ ಹತ್ತಲು ಸಂಕಷ್ಟ ಪಡುವಂತಾಗಿದೆ. ಸುಮಾರು ನೂರು ಅಡಿ ಉದ್ದ ಮತ್ತು 50 ಅಡಿ ಅಗಲದ ನರ್ಮ್ನ ತಾತ್ಕಾಲಿಕ ಬಸ್ ನಿಲ್ದಾಣದಿಂದಾಗಿ ಬಸ್ ಚಾಲಕರು ಮತ್ತು ಪ್ರಯಾಣಿಕರು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಫುಟ್‌ಪಾತ್ ಏರಿ ಈ ಜಾಗಕ್ಕೆ ಬಸ್‌ಗಳು ಬರಬೇಕಿದೆ. ಆದರೆ ಲೋಫ್ಲೋರ್ ಹೊಂದಿರುವ ಈ ಬಸ್‌ಗಳ ಅಡಿ ಭಾಗ ಫುಟ್‌ಪಾತ್‌ಗೆ ತಾಗುತ್ತದೆ. ಇದನ್ನು ತಡೆಯಲು ಮಣ್ಣು ಹಾಕಿ ಎತ್ತರಿಸಲಾಗಿದೆ. ಇದು ಸಾಕಷ್ಟು ಧೂಳಿಗೆ ಕಾರಣವಾಗಿದೆ. ನಾಲ್ಕು ಬಸ್‌ಗಳು ಮಾತ್ರ
ಈ ಪುಟಾಣಿ ನಿಲ್ದಾಣದಲ್ಲಿ ನಾಲ್ಕು ನರ್ಮ್ ಬಸ್‌ಗಳಿಗೆ ಮಾತ್ರ ಅವಕಾಶ. ಬೇರೆ ಬಸ್ ಬಂದರೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲೂ ಜಾಗವಿಲ್ಲದಾಗಿದೆ. ಅಲ್ಲದೇ ಈ ಸ್ಥಳದಲ್ಲಿ ತಿರುಗಿಸುವುದು, ಪಾರ್ಕಿಂಗ್ ಮಾಡುವುದಕ್ಕೂ ಅತಿ ಜಾಗರೂಕತೆ ವಹಿಸಬೇಕಿದೆ ಎನ್ನುತ್ತಾರೆ ಬಸ್ ಚಾಲಕರು ಸಿಟಿ ಬಸ್ ನಿಲ್ದಾಣಕ್ಕೆ ಪ್ರವೇಶವಿಲ್ಲ ಸಿಟಿ ಬಸ್ ನಿಲ್ದಾಣದಲ್ಲಿ ಸದ್ಯ ನರ್ಮ್ ಬಸ್‌ಗಳಿಗೆ ಅವಕಾಶ ನೀಡುತ್ತಿಲ್ಲ. ನರ್ಮ್ ಬಸ್‌ಗಳು ಸಮಯ ಪಾಲನೆ ಮಾಡುತ್ತಿಲ್ಲ ಎಂಬ ತಗಾದೆ ಖಾಸಗಿಯವರದ್ದು. ಸಿಟಿ ಬಸ್ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಿದರೆ, ಧೂಳು, ಜಾಗದ ಕೊರತೆ ಸಮಸ್ಯೆ ಬಹುತೇಕ ನೀಗುತ್ತದೆ.
ವಿದ್ಯಾಂಗ ಉಪನಿರ್ದೇಶಕ ಕಚೇರಿ ಆವರಣ ತೆರವುಗೊಳಿಸಿ ಅದೇ ಸ್ಥಳದಲ್ಲಿ ಹೊಸ ನರ್ಮ್ ಬಸ್ ನಿಲ್ದಾಣ ನಿರ್ಮಿಸಲಾಗುತ್ತದೆ. ಇದಕ್ಕಾಗಿ ಕಾಮಗಾರಿ ನಡೆಯುತ್ತಲೇ ಇದೆ. ಸುಮಾರು ನಾಲ್ಕು ಕೋಟಿ ರೂ. ವೆಚ್ಚದ ಈ ಕಾಮಗಾರಿಗೆ ಕಳೆದ ಸೆಪ್ಟಂಬರ್‌ನಲ್ಲಿ ಶಿಲಾನ್ಯಾಸ ನೆರವೇರಿದ್ದು, ಕೆಲಸ ಪೂರ್ಣವಾಗುವ ವರೆಗೂ ಧೂಳು-ಕೆಸರಿನಿಂದ ಜನರಿಗೆ ಮುಕ್ತಿ ಇಲ್ಲ ಎನ್ನುವಂತಾಗಿದೆ. ಇನು ಮಳೆಗಾಲದ ಸಂದರ್ಭದಲ್ಲಂತೂ ಪ್ರಯಾಣಿಕರು ಮತ್ತಷ್ಟು ಕಷ್ಟಪಡುವ ಸಾಧ್ಯತೆಗಳೇ ಅಧಿಕವಾಗಿದೆ.