Advertisement

Udupi; ವಸ್ತ್ರ ಮಳಿಗೆಯಲ್ಲಿ ಮಿಸ್ ಫೈರ್: ಲೈಸನ್ಸ್ ಹೊಂದಿದ್ದ ಪಿಸ್ತೂಲು

07:00 PM Dec 30, 2023 | Team Udayavani |

ಉಡುಪಿ: ಉಡುಪಿಯ ವಸ್ತ್ರ ಮಳಿಗೆಯ ಮೊದಲನೇ ಮಹಡಿಯ ಪುರುಷರ ಶೌಚಾಲಯವನ್ನು ಸಿಬಂದಿಗಳು ಸ್ವಚ್ಛಗೊಳಿಸುತ್ತಿದ್ದಾಗ ಪತ್ತೆಯಾದ ಪಿಸ್ತೂಲಿನ ವಾರಿಸುದಾರನ ಮಾಹಿತಿಯನ್ನು ಪೊಲೀಸರು ಪತ್ತೆ ಹಚ್ಚಿದ್ದು, ಅದು ಪರವಾನಿಗೆ ಹೊಂದಿದ್ದು ಎನ್ನುವುದನ್ನು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

Advertisement

ಶುಕ್ರವಾರ ಡಿ. 30 ರಂದು ಮಧ್ಯಾಹ್ನ 12 ಗಂಟೆ ವೇಳೆ ಶೌಚಾಲಯ ಲ್ಲಿ ಇದ್ದ ಪಿಸ್ತೂಲನ್ನು ಇನ್ನೊಬ್ಬ ಸಿಬಂದಿ ಪರೀಕ್ಷಿಸಲು ಪಡೆದುಕೊಂಡು ಕಾಕ್‌ ಮಾಡಿದ್ದು, ಆಕಸ್ಮಿಕವಾಗಿ ಟ್ರಿಗರ್‌ ಕೈ ತಾಗಿದಾಗ ಗುಂಡು ಸಿಡಿದು ಇನ್ನೊಬ್ಬ ಸಿಬ್ಬಂದಿಯ ಎಡಕೈ ತೋಳಿಗೆ ಗಾಯವಾಗಿತ್ತು.

ಪಿಸ್ತೂಲನ್ನು ಯಾರೋ ಅಪರಿಚಿತ ವ್ಯಕ್ತಿಯು ಶೌಚಾಲಯದಲ್ಲಿ ಬಿಟ್ಟು ಹೋಗಿದ್ದು, ಸಿಬಂದಿಗಳು ಸೂಕ್ತ ಮುಂಜಾಗ್ರತೆ ವಹಿಸದೇ ಕಾಕ್‌ ಮಾಡಿದ ಪರಿಣಾಮ ಫೈರ್‌ ಆಗಿರುತ್ತದೆ. ಪಿಸ್ತೂಲ್‌ ಬಿಟ್ಟು ಹೋದ ಅಪರಿಚಿತ ವ್ಯಕ್ತಿಯ ವಿರುದ್ಧ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ತನಿಖೆಯ ಪ್ರಥಮ ಹಂತದಲ್ಲಿ ಪಿಸ್ತೂಲ್‌ ವಾರಿಸುದಾರರ ಬಗ್ಗೆ ಪತ್ತೆ ಹಚ್ಚಲಾಗಿದ್ದು,ಅದು ಪರವಾನಿಗೆ ಹೊಂದಿದ ಪಿಸ್ತೂಲ್‌ ಆಗಿದ್ದು, ವಸ್ತ್ರ ಮಳಿಗೆಯ ಶೌಚಾಲಯಕ್ಕೆ ತೆರಳಿದಾಗ ಮರೆತು ಬಿಟ್ಟು ಹೋಗಿರುವುದಾಗಿ ತಿಳಿಸಿದ್ದು, ತನಿಖೆ ಮುಂದುವರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next