Advertisement
ಕ್ರೆಡೈ ಉಡುಪಿ ಅಧ್ಯಕ್ಷ ಮನೋಹರ ಎಸ್. ಶೆಟ್ಟಿ ಉದ್ಘಾಟಿಸಿ, ಹಿಂದೆ ಮನೆ, ಕಟ್ಟಡಗಳನ್ನು ನಿರ್ಮಿಸಲು ಸಾಕಷ್ಟು ಕಷ್ಟ ಎದುರಿಸುವುದರೊಂದಿಗೆ ಸಮಯದ ಅಭಾವವೂ ಎದುರಾಗುತ್ತಿತ್ತು. ಆದರೆ ಪ್ರಸ್ತುತ ಆಧುನಿಕ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಕಟ್ಟಡ, ಮನೆಗಳ ನಿರ್ಮಾಣ ಅತ್ಯಂತ ಸುಲಭವಾಗಿ ಪರಿಣಮಿಸಿದೆ ಎಂದರು.
ಮಾಂಡವಿ ಬಿಲ್ಡರ್ ಆ್ಯಂಡ್ ಡೆವಲಪರ್ನ ಎಂಡಿ ಡಾ| ಜೆರ್ರಿ ವಿನ್ಸೆಂಟ್ ಡಯಾಸ್ ಮಾತನಾಡಿ, ಹಿಂದೆ ಕಟ್ಟಡ ಸಾಮಗ್ರಿಗಳಿಗಾಗಿ ದೂರದ ಪಟ್ಟಣಕ್ಕೆ ತೆರಳಬೇಕಿತ್ತು. ಆದರೆ ಪ್ರಸ್ತುತ ನಮ್ಮ ಕಾಲ ಬುಡದಲ್ಲೇ ಎಲ್ಲ ಬಗೆಯ ಸಾಮಗ್ರಿಗಳು ದೊರಕುತ್ತಿವೆ ಎಂದು ಹರ್ಷ ವ್ಯಕ್ತಪಡಿಸಿದರು.
Related Articles
Advertisement
ಶಾಂತಾ ಎಲೆಕ್ಟ್ರಿಕಲ್ಸ್ ಆ್ಯಂಡ್ ಎಂಜಿನಿಯರಿಂಗ್‌ನ ಎಂಡಿ ಶ್ರೀಪತಿ ಭಟ್, 3 ದಿನಗಳ ಪ್ರದರ್ಶನದ ಯಶಸ್ಸಿಗೆ ಎಲ್ಲರ ಸಹಕಾರ ಅತ್ಯಗತ್ಯ ಎಂದರು.ಉಜ್ವಲ್ ಡೆವಲಪರ್ನ ಎಂಡಿ ಪುರುಷೋತ್ತಮ ಪಿ. ಶೆಟ್ಟಿ, ಅಸೋಸಿಯೇಶನ್ ಮಾಜಿ ಅಧ್ಯಕ್ಷ ಗೋಪಾಲ ಎಂ. ಭಟ್, ಯು.ಎಸ್. ಕಮ್ಯೂನಿಕೇಶನ್ಸ್‌ನ ಉಮಾಪತಿ, ಕೋಶಾಧಿಕಾರಿ ಲಕ್ಷ್ಮೀನಾರಾಯಣ ಉಪಾಧ್ಯ, ಅಸೋಸಿಯೇಶನ್ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಅಸೋಸಿಯೇಶನ್ ಅಧ್ಯಕ್ಷ ಪಾಂಡುರಂಗ ಆಚಾರ್ ಕೆ. ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಕಾರ್ಯದರ್ಶಿ ಯೋಗೀಶ್ಚಂದ್ರಧರ ವಂದಿಸಿದರು. ಅರ್ಚನಾ ಪ್ರೊಜೆಕ್ಟ್ ನ ಪಾಲುದಾರ ಅಮಿತ್ ಅರವಿಂದ್ ನಿರೂಪಿಸಿದರು.
ಕಟ್ಟಡ ಸಾಮಗ್ರಿಗಳ ಪ್ರದರ್ಶನಎಲ್ಲ ತಾಲೂಕುಗಳ ಎಂಜಿನಿಯರ್, ಕಾಂಟ್ರಾಕ್ಟರ್, ಬಿಲ್ಡರ್, ಡೆವಲಪರ್, ಕಟ್ಟಡ ಸಾಮಗ್ರಿಗಳ ಉತ್ಪಾದಕರು ಮತ್ತು ಮಾರಾಟಗಾರರು, ಮೇಸನ್ಸ್, ಪೈಂಟರ್, ಫ್ಲಂಬರ್, ಟೈಲ್ಸ್ ಫಿಟ್ಟರ್, ಬಾರ್ ಬೆಂಡರ್ ಮತ್ತು ಸೆಂಟ್ರಿಂಗ್ ಇರುವರು. ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಅಗತ್ಯ ಸಾಲ ಸೌಲಭ್ಯಗಳ ಮಾಹಿತಿ ದೊರಕುವುದು. ರಾಷ್ಟ್ರ, ಅಂತಾರಾಷ್ಟ್ರೀಯ ಉತ್ಪಾದಕರಿಂದ ಕಟ್ಟಡ ಸಾಮಗ್ರಿಗಳು, ಇಂಟೀರಿಯರ್, ಎಕ್ಸ್‌ಟೀರಿಯರ್ ಉತ್ಪನ್ನಗಳು, ಕನ್‌ಸ್ಟ್ರಕ್ಷನ್ ಟೆಕ್ನಾಲಜೀಸ್, ಸೋಲಾರ್ ಪ್ರೊಡಕ್ಟ್, ಫ್ಲೋರಿಂಗ್ ಮತ್ತು ರೂಫಿಂಗ್‌ಗೆ ಸಂಬಂಧಿಸಿದ ಉತ್ಪನ್ನಗಳು, ಪೈಂಟ್ಸ್/ವಾಟರ್ ಪ್ರೂಫ್ ಕೆಮಿಕಲ್ಸ್, ಸ್ಟೀಲ್, ಸಿಮೆಂಟ್, ಪ್ಲೆವುಡ್, ಸೇಫ್ಟಿ ಮತ್ತು ಮೆಷಿನರಿ ಎಕ್ವಿಪ್‌ಮೆಂಟ್ಸ್, ಎಲಿವೇಟರ್ ಹೀಗೆ ಹತ್ತಾರು ಕಟ್ಟಡ ಸಾಮಗ್ರಿ ಇಲ್ಲಿನ ಆಕರ್ಷಣೆಯಾಗಿದೆ.