Advertisement

Udupi -Mangaluru; ಉಭಯ ಜಿಲ್ಲೆಗಳಲ್ಲಿ ಬೃಹತ್‌ ಸ್ವಚ್ಛತ ಅಭಿಯಾನ

12:15 AM Oct 02, 2023 | Team Udayavani |

ಮಂಗಳೂರು: ತ್ಯಾಜ್ಯ ಮುಕ್ತ ಸಮಾಜಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ, ಈ ನಿಟ್ಟಿನಲ್ಲಿ ಸ್ವಚ್ಛತೆ ನಮ್ಮ ಮನೆಯಿಂದಲೇ ಆರಂಭಗೊಳ್ಳಲಿ, ಆಗ ಇಡೀ ಸಮಾಜವೇ ಸ್ವಚ್ಛವಾಗುತ್ತದೆ ಎಂದು ದ.ಕ. ಜಿ. ಪಂ. ಸಿಇಒ ಡಾ| ಆನಂದ್‌ ಅವರು ಹೇಳಿದರು.

Advertisement

ರಾಜ್ಯದ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತಾ ಹಿ ಸೇವಾ/ಸ್ವಚ್ಛತೆಯೇ ಸೇವೆ ಎಂಬ ವಿಶೇಷ ಜನಾಂದೋಲನ ಕಾರ್ಯಕ್ರಮ ಅಂಗವಾಗಿ ದ.ಕ. ಜಿ. ಪಂ., ಮಂಗಳೂರು ತಾಲೂಕು ಪಂಚಾಯತ್‌ ಸಹಯೋಗದಲ್ಲಿ ರವಿವಾರ ಗುರುಪುರ ಗ್ರಾ. ಪಂ. ವಠಾರದಲ್ಲಿ ನಡೆದ ಬೃಹತ್‌ ಸ್ವಚ್ಛತಾ ಅಭಿಯಾನಕ್ಕೆ ಅವರು ಚಾಲನೆ ನೀಡಿ ಮಾತನಾಡಿ, ಸ್ವಚ್ಛತೆಯ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಇರಬೇಕು. ಸ್ವಚ್ಛತಾ ಆಂದೋಲನ ಕೇವಲ ಒಂದು ದಿನಕ್ಕೆ ಸೀಮಿತಗೊಳ್ಳದೆ, ನಿರಂತರವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರು, ಸಂಘ-ಸಂಸ್ಥೆಗಳ ಸಹಕಾರವೂ ಅಗತ್ಯ ಎಂದು ತಿಳಿಸಿದರು.

ಗುರುಪುರ ಪಂಚಾಯತ್‌ ಅಧ್ಯಕ್ಷೆ ಸಫರಾ ಮದಕ, ಉಪಾಧ್ಯಕ್ಷರಾದ ದಾವೂದ್‌ ಬಂಗ್ಲಗುಡ್ಡೆ, ಗುರುಪುರ ಪಂಚಾಯತ್‌ ಕಾರ್ಯದರ್ಶಿ ಅಶೋಕ್‌, ತಾ.ಪಂ. ಸಹಾಯಕ ನಿರ್ದೇಶಕ ಮಹೇಶ್‌ ಅಂಬೆಕಲ್ಲು, ಸ್ವಚ್ಛ ಭಾರತ್‌ ಮಿಷನ್‌ (ಗ್ರಾಮೀಣ)ನ ಡೊಂಬಯ್ಯ ಇಡಿxದು, ಪವನ್‌ ಕುಮಾರ್‌ ಎಸ್‌. ಶೆಟ್ಟಿ, ಗುರುಪುರ ಕಂದಾಯ ನಿರೀಕ್ಷಕ ಪೂರ್ಣಚಂದ್ರ ತೇಜಸ್ವಿ, ಗುರುಪುರ ಶಾಲೆಯ ಮುಖ್ಯೋಪಾಧ್ಯಾಯ ಬಾಬು ಪಿ.ಎಂ., ಮುಂತಾದವರು ಉಪಸ್ಥಿತರಿದ್ದರು.

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಹೇಶ್‌ ಕೆ. ಹೊಳ್ಳ ಸ್ವಾಗತಿಸಿದರು. ಗುರುಪುರ ಪಂಚಾಯತ್‌ ಅಧಿಕಾರಿ ಪಂಕಜ ಶೆಟ್ಟಿ ವಂದಿಸಿದರು. ಇದೇ ವೇಳೆ ಸ್ವತ್ಛ ಮೇವ ಜಯತೆ ಪ್ರಮಾಣ ವಚನ ಬೋಧಿಸಲಾಯಿತು. ಸುತ್ತಲಿನ ಪ್ರದೇಶದಲ್ಲಿ ಸ್ವತ್ಛತಾ ಕಾರ್ಯ ಕೈಗೊಳ್ಳಲಾಯಿತು.

ಸ್ವಚ್ಛತೆಗೆ ಆದ್ಯತೆ: ಡಾ| ವಿದ್ಯಾ ಕುಮಾರಿ
ಉಡುಪಿ: ಉತ್ತಮ ಆರೋಗ್ಯಕ್ಕೆ ವೈಯಕ್ತಿಕ ಸ್ವತ್ಛತೆ, ಪರಿಸರ ಸ್ವಚ್ಛತೆ ಸೇರಿದಂತೆ ಎಲ್ಲ ರೀತಿಯ ಸ್ವಚ್ಛತೆ ಬಹಳ ಆವಶ್ಯಕ. ಇದರ ಜತೆ ಶುಚಿತ್ವಕ್ಕೆ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾ ಕುಮಾರಿ ತಿಳಿಸಿದರು.

Advertisement

ಬಡಾನಿಡಿಯೂರು ಹಾಗೂ ಕೆಮ್ಮಣ್ಣು ಗ್ರಾ. ಪಂ. ವ್ಯಾಪ್ತಿಯ ಆಸರೆ ಬೀಚ್‌ನಲ್ಲಿ ಮಹಾತ್ಮಾ ಗಾಂಧೀಜಿಯವರ ಜನ್ಮದಿನ ಸ್ಮರಣಾರ್ಥ “ಸ್ವಚ್ಛತಾ ಹೀ ಸೇವಾ’ ಆಂದೋಲನದ ಅಂಗವಾಗಿ ನಡೆದ ಬೃಹತ್‌ ಸ್ವತ್ಛತಾ ಶ್ರಮದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಸ್ವಚ್ಛತೆ ಸ್ವಸ್ಥ ಸಮಾಜದ ಮೂಲಾ ಧಾರವಾಗಿದೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವತ್ಛವಾಗಿಟ್ಟುಕೊಂಡಾಗ ಮಾತ್ರ ನಾವು ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದರು.

ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್‌ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕು. ಬಳಸಿದ ಪ್ಲಾಸ್ಟಿಕ್‌ ಅನ್ನು ಅಲ್ಲಲ್ಲಿ ಎಸೆಯುವ ಬದಲು ವ್ಯವಸ್ಥಿತವಾಗಿ ನಿರ್ವಹಣೆ ಮಾಡಬೇಕು. ಇಲ್ಲವಾದಲ್ಲಿ ನಮ್ಮ ಪರಿಸರಕ್ಕೆ ಸೇರಿ ಮಾನವ ಸೇರಿದಂತೆ ಜೀವಸಂಕುಲಗಳ ಅವನತಿಗೆ ಕಾರಣವಾಗುತ್ತದೆ ಎಂದರು.

ಜಿ. ಪಂ. ಸಿಇಒ ಪ್ರಸನ್ನ ಎಚ್‌. ಮಾತನಾಡಿ, ನಾವು ಮನೆಯಲ್ಲಿ ಉತ್ಪತ್ತಿ ಮಾಡುವ ಕಸವನ್ನು ವಿಂಗಡಿಸಿ ಗ್ರಾ.ಪಂ. ವಾಹನಕ್ಕೆ ನೀಡಿದರೆ ಈ ರೀತಿ ಬೀಚ್‌ನಲ್ಲಿ ಕಸ ಬಂದು ಸೇರುವುದು ತಪ್ಪುತ್ತದೆ. ಆದ್ದರಿಂದ ಮನೆಯ ಕಸವನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಬೇಕು ಎಂದರು.

ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ ಸ್ವತ್ಛತಾ ಪ್ರತಿಜ್ಞಾ ವಿಧಿ ಬೋಧಿಸಿದರು. ಜಿÇÉಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಅರುಣ್‌ ಕೆ., ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್‌ ರಾವ್‌, ಕೆಮ್ಮಣ್ಣು ಗ್ರಾ.ಪಂ.ಅಧ್ಯಕ್ಷೆ ಕುಸುಮಾ ರವೀಂದ್ರ, ಬಡನಿಡಿಯೂರು ಗ್ರಾ.ಪಂ.ಅಧ್ಯಕ್ಷೆ ಯಶೋದಾ ಆಚಾರ್ಯ ಉಪಸ್ಥಿತರಿದ್ದರು.
ಬೀಚ್‌ ಸ್ವತ್ಛತಾ ಶ್ರಮದಾನದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಭಾಗವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next