Advertisement
ಲಾಕ್‌ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಈ ಹೆದ್ದಾರಿಯಲ್ಲಿ ವಾಹನಗಳ ಓಡಾಟ ಅಧಿಕವಾಗಿದೆ. ಜತೆಗೆ ಮಳೆಗಾಲವೂ ಆರಂಭವಾಗಿದೆ. ಹೀಗಾಗಿ ಸವಾರರು/ ಚಾಲಕರು ಹೆಚ್ಚಿನ ಜಾಗರೂಕತೆ ವಹಿಸಬೇಕಿದೆ.
ನಾದುರಸ್ತಿಯಲ್ಲಿದ್ದ ಕೂಳೂರು ಹಳೆ ಸೇತುವೆಯಲ್ಲಿ ಲಾಕ್‌ಡೌನ್ ಘೋಷಣೆಗಿಂತ ಕೆಲವು ದಿನಗಳ ಮೊದಲು ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ ಸೇತುವೆಯ ದುರಸ್ತಿ ಪೂರ್ಣಗೊಂಡಿದ್ದು ಎರಡೂ ಭಾಗದ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ. ಉಡುಪಿಯಿಂದ ಮಂಗಳೂರಿನತ್ತ ಹೋಗುವ ಸೇತುವೆಯ ಒಂದು ಭಾಗದಲ್ಲಿ ಹಂಪ್ಸ್ ಅಳವಡಿಸಲಾಗಿದೆ. ಇನ್ನೊಂದು ಮಗ್ಗುಲಿನ ಸಂಪರ್ಕ ರಸ್ತೆಯ ಕಾಂಕ್ರೀಟ್ ಕಾಮಗಾರಿ ಪ್ರಗತಿಯಲ್ಲಿದ್ದು ರಸ್ತೆ ಇಕ್ಕಟ್ಟಾಗಿದೆ. ಸೇತುವೆಯ ಇನ್ನೊಂದು ಬದಿ (ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುವ ಭಾಗ) ಸಂಪೂರ್ಣ ಕತ್ತಲಿನಿಂದ ಕೂಡಿದೆ. ಹಳೆ ಸೇತುವೆ ದಾಟಿ ಮಂಗಳೂರು ಕಡೆಗೆ ಬರುವ ಸಂಪರ್ಕ ರಸ್ತೆಯ ಕಾಂಕ್ರೀಟ್ ಕಾಮಗಾರಿ ಪ್ರಗತಿಯಲ್ಲಿದೆ. ಇದರ ಪರಿಣಾಮವಾಗಿ ಇಲ್ಲಿ ಸೋಮವಾರ ಬೆಳಗ್ಗೆ ಮಳೆನೀರು ತುಂಬಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.
Related Articles
ಮಂಗಳೂರಿನಿಂದ ಉಡುಪಿ ಕಡೆಗೆ ಬರುವ ದಿಕ್ಕಿನಲ್ಲಿ ಬೈಕಂಪಾಡಿ ಸೇತುವೆ ಸಮೀಪ ಕಾಂಕ್ರೀಟ್ ಕಾಮಗಾರಿ ಪ್ರಗತಿ
ಯಲ್ಲಿದೆ. ಇಲ್ಲಿಯೂ ವಾಹನ ದಟ್ಟಣೆ ಸಾಧ್ಯತೆ ಇದೆ. ಹೊಸಬೆಟ್ಟು ಭಾಗದಲ್ಲಿ ಮರು ಡಾಮರು ಕಾಮಗಾರಿ ಪೂರ್ಣ ಗೊಂಡಿದ್ದು ಮಾರ್ಕಿಂಗ್ ನಡೆಯುತ್ತಿದೆ. ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನಕ್ಕೆ ತಿರುವು ಪಡೆದುಕೊಳ್ಳುವ ಸ್ಥಳದಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು ಸಣ್ಣ ಹಂಪ್‌ಗ್ಳನ್ನು ಹಾಕಲಾಗಿದೆ. ಇದು ವಾಹನ ಚಾಲಕರು/ಸವಾರರ ಗಮನಕ್ಕೆ ಬರುತ್ತಿಲ್ಲ. ದ್ವಿಚಕ್ರ ವಾಹನ
ಸವಾರರು ಎಚ್ಚರ ವಹಿಸ ಬೇಕಿದೆ.
Advertisement
ಬೆಳಕು, ಸೇತುವೆ ಬಾಕಿಮರುಡಾಮರು ಕಾಮಗಾರಿ ನಡೆದಿರುವ ಕೆಲವು ಸ್ಥಳಗಳು ಇಕ್ಕಟ್ಟಾಗಿವೆ. ಕೆಲವು ಕಡೆಗಳಲ್ಲಿ ರಸ್ತೆ ವಿಭಾಜಕದ ನಡುವೆ ಗಿಡಗಳು ಇಲ್ಲದಿರುವುದರಿಂದ ಎದುರಿನಿಂದ ಬರುವ ವಾಹನಗಳ ಪ್ರಖರ ಬೆಳಕಿನ (ಹೆಡ್‌ಲೈಟ್) ಸಮಸ್ಯೆಯೂ ಇದೆ.
ಪಡುಬಿದ್ರಿ ಪೇಟೆ ಭಾಗದಲ್ಲಿ ಬಾಕಿ ಯಾಗಿದ್ದ ಸರ್ವೀಸ್ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಚರಂಡಿ ಸಮಸ್ಯೆ ಇದೆ. ಅಲ್ಲಿನ ಕಲ್ಸಂಕ ಸೇತುವೆಯ ಇನ್ನೊಂದು ಭಾಗದ ಕಾಮಗಾರಿ ಪೂರ್ಣಗೊಂಡಿಲ್ಲ.