ಉಡುಪಿ: ಅಧಿಕ ಲಾಭಾಂಶದ ಆಸೆಯಿಂದ ಹಿರಿಯ ನಾಗರಿಕರೊಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ನಡೆದಿದೆ.
ಉಡುಪಿಯ ಟೆರೆನ್ಸ್ (60) ಅವರ ವಾಟ್ಸ್ ಆ್ಯಪ್‌ಗೆ ಅಪರಿಚಿತ ನಂಬರ್‌ನಿಂದ Up stock Securities ಲಿಂಕ್ ಬಂದಿದ್ದು, ಆ ಲಿಂಕ್ ಆನ್‌ಲೈನ್ ಮಾರ್ಕೆಟಿಂಗ್‌ಗೆ ಸಂಬಂಧಿಸಿದ್ದಾಗಿತ್ತು. ಅಪರಿಚಿತ ವ್ಯಕ್ತಿಯು ಅವರನ್ನು ಲಿಂಕ್‌ನಲ್ಲಿ ವಾಟ್ಸ್ ಆ್ಯಪ್ ಗ್ರೂಪ್‌ಗೆ ಸೇರಿಸಿಕೊಂಡಿದ್ದಾರೆ. ಅನಂತರ ಪ್ಲೇ ಸ್ಟೋರ್ ಲಿಂಕ್ ಕಳುಹಿಸಿ ಅದರಲ್ಲಿ ಷೇರ್ ಖರೀದಿ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂಬುವುದಾಗಿ ತಿಳಿಸಿದ್ದರು.
ಟೆರೆನ್ಸ್ ಅವರು ಜು. 3ರಂದು 1,50,000 ರೂ.ಗಳನ್ನು ಬ್ಯಾಂಕ್ ಖಾತೆಯಿಂದ ರಿಯಾ ಎಂಟರ್ ಪ್ರೈಸಸ್ ಎಂಬ ಹೆಸರಿನಲ್ಲಿರುವ ಯುಕೋ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರು. ಬಳಿಕ ಆ. 6ರಂದು ನೆಫ್ಟ್ ಮಾಡಿದ್ದು, ಅನಂತರ ದಿನಾಂಕ 2024ರ ಆ. 6ರಂದು Up stock Securitiesನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುವುದಾಗಿ ಚಾರ್ಟ್ ತೋರಿಸಿದೆ. ಅದರಂತೆ ಟೆರೆನ್ಸ್ ಅವರು 24,000 ರೂ.ಗಳನ್ನು ಬ್ಯೂಟಿ ಕೇರ್ ಎಕ್ಸ್ ಎಲ್ ಇದರ ಖಾತೆಗೆ ನೆಫ್ಟ್ ಮಾಡಿದ್ದರು.
Up stock Securities App ಮೂಲಕ ಒಟ್ಟು 1,74,000 ರೂ. ಹೂಡಿಕೆ ಮಾಡಿ 20,000 ರೂ. ಮಾತ್ರ ಲಾಭಂಶ ಪಡೆದಿದ್ದು, ಅನಂತರ ಉಳಿದ ಹಣವನ್ನು ಪಡೆಯಲು ಪ್ರಯತ್ನಿಸಿದಾಗ ಆಗಿರಲಿಲ್ಲ. ಆ ಹಣವನ್ನು ಪಡೆಯಲು Up stock Securities App ನಲ್ಲಿ ಪುನಃ 1,50,000 ರೂ. ಹಣವನ್ನು ಹಾಕಿದರೆ ಮಾತ್ರ ಉಳಿದ ಹಣವನ್ನು ನೀಡುವುದಾಗಿ ಅಪರಿಚಿತ ವ್ಯಕ್ತಿ ತಿಳಿಸಿದ್ದಾನೆ. ಹೀಗೆ ಆರೋಪಿಯು ತನ್ನ ಖಾತೆಗೆ ಒಟ್ಟು 1,74,000 ರೂ.ಗಳನ್ನು ವರ್ಗಾಯಿಸಿಕೊಂಡು ಮೋಸ ಎಸಗಿದ್ದಾನೆ ಎಂದು ಟೆರೆನ್ಸ್ ಅವರು ನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.