Advertisement

ಲಾಕ್​ಡೌನ್​ : ಉಡುಪಿಯಲ್ಲಿ ಬೆಳ್ಳಂಬೆಳಗ್ಗೆ ಲಾಠಿ ಹಿಡಿದು ಫೀಲ್ಡ್​ಗಿಳಿದ ಪೊಲೀಸರು

08:35 AM May 10, 2021 | Team Udayavani |

ಉಡುಪಿ: ರಾಜ್ಯದಾದ್ಯಂತ ಇಂದಿನಿಂದ 14 ದಿನಗಳ ಕಾಲ ಲಾಕ್​ಡೌನ್​ ಜಾರಿ ಮಾಡಲಾಗಿದ್ದು, ಕಟ್ಟುನಿಟ್ಟಿನ ಕ್ರಮಕ್ಕೆ ಸರ್ಕಾರ ಆದೇಶಿಸಿದೆ. ಹೀಗಾಗಿ ನಗರದಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರು ಫೀಲ್ಡ್​ಗಿಳಿದಿದ್ದು, ಪ್ರತಿ ವಾಹನ ತಪಾಸಣೆ ಮಾಡುತ್ತಿದ್ದಾರೆ.

Advertisement

ಉಡುಪಿ ಜಿಲ್ಲೆಯಾದ್ಯಂತ ಪೊಲೀಸರು ಬಿಗಿ ತಪಾಸಣೆ ನಡೆಸುತ್ತಿದ್ದಾರೆ. ಸರಕಾರ ವಾಹನದಲ್ಲಿ ಓಡಾಟ ಮಾಡಬಾರದು ಎಂದು ನೀಡಿರುವ ಆದೇಶವನ್ನು ಉಲ್ಲಂಘಿಸಿ ವಿನಾ ಕಾರಣ ಓಡಾಟ ಮಾಡುತ್ತಿರುವವರ ವಾಹನವನ್ನು ಪೊಲೀಸರು ಮುಟ್ಟುಗೋಲು ಹಾಕುತ್ತಿದ್ದಾರೆ.

ಜಿಲ್ಲೆಯ 32 ಚೆಕ್ ಪೋಸ್ಟಗಳಲ್ಲಷ್ಟೇ ಅಲ್ಲದೆ ಹೊಯ್ಸಳ ವಾಹನದಲ್ಲಿಯೂ ಪೊಲೀಸರು ಗಸ್ತು ಕಾರ್ಯಾಚರಣೆ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next