Advertisement

ಉಡುಪಿ: ಕೆಎಸ್ಸಾರ್ಟಿಸಿ ಬಸ್‌ ಆರಂಭ ಸಾಧ್ಯತೆ

12:47 AM May 07, 2020 | Sriram |

ಉಡುಪಿ: ಹಸುರು ವಲಯದಲ್ಲಿ ಬಸ್‌ಗಳ ಓಡಾಟಕ್ಕೆ ಸರಕಾರ ಈಗಾಗಲೇ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಆರಂಭಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಬುಧವಾರ ಕೆಎಸ್ಸಾರ್ಟಿಸಿ ಅಧಿಕಾರಿಗಳು, ಖಾಸಗಿ ಬಸ್‌ ಮಾಲಕರೊಂದಿಗೆ ಸಭೆ ನಡೆಸಿದರು.

Advertisement

ಕೆಎಸ್ಸಾರ್ಟಿಸಿ ಬಸ್‌ಗಳನ್ನು ಹೊರಡಿಸಲು ಆಯ್ದ ರೂಟ್‌ಗಳನ್ನು ಸೂಚಿಸಿ ಸರ್ವೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಉಡುಪಿ, ಕಾರ್ಕಳ, ಹೆಬ್ರಿ, ಕುಂದಾಪುರ, ಮಲ್ಪೆ, ಹೂಡೆ ಸಹಿತ ಮೊದಲಾದ ಪ್ರದೇಶಗಳಿಗೆ ಬಸ್‌ ಸಂಚಾರ ಕಲ್ಪಿಸುವ ಬಗ್ಗೆ ಮಾತುಕತೆ ನಡೆಯಿತು.

ತಮ್ಮ ನಿಯಮಾನುಸಾರ ಸೇವೆ ನೀಡುವುದಾಗಿ ಕೆಎಸ್ಸಾರ್ಟಿಸಿ ಅಧಿಕಾರಿಗಳು ಒಪ್ಪಿಗೆ ಸೂಚಿಸಿದರು. ಬಸ್‌ಗಳಲ್ಲಿ ಶೇ. 50ರಷ್ಟು ಮಾತ್ರ ಪ್ರಯಾಣಿಕರಿಗೆ ಸಂಚಾರ ಅವಕಾಶ ನೀಡಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.

ದಿನಾಂಕ ತೀರ್ಮಾನವಾಗಿಲ್ಲ
ಶೇ. 50ರಷ್ಟು ಮಾತ್ರ ಪ್ರಯಾಣಿಕರನ್ನುಕರೆದೊಯ್ಯಬೇಕೆಂಬ ನಿಯಮದಿಂದ ನಷ್ಟದಲ್ಲಿರುವ ಸಾರಿಗೆ ಉದ್ಯಮಕ್ಕೆ ಮತ್ತಷ್ಟು ಹೊರೆ ಬೀಳಲಿದೆ. ಆದ್ದರಿಂದ ಪ್ರಯಾಣ ದರ ಏರಿಕೆ ಅನಿವಾರ್ಯ ಎಂದು ಖಾಸಗಿ ಬಸ್‌ ಮಾಲಕರು ತಿಳಿಸಿದರು. ಆದರೆ ಯಾನದರ ಏರಿಕೆ ಈಗ ಸೂಕ್ತವಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಬಹು ತೇಕ ಎಲ್ಲ ಉದ್ದಿಮೆ ಗಳಿಗೆ ಅವಕಾಶ ಕಲ್ಪಿಸಿದಂತೆ ಅವಿಭಜಿತ ದ.ಕ. ಜಿಲ್ಲೆಯ ಸಂಪರ್ಕ ಕಲ್ಪಿಸುವ ಎಕ್ಸ್‌ ಪ್ರಸ್‌ ಬಸ್‌ಗಳ ಸಂಚಾರಕ್ಕೆ ಅವ ಕಾಶ ಕಲ್ಪಿಸುವಂತೆ ಖಾಸಗಿ ಬಸ್‌ ಮಾಲಕರು ತಿಳಿಸಿದರು. ಆದರೆ ಜಿಲ್ಲಾಡಳಿತದ ನಿಯಮಾವಳಿಗಳಿಗೆ ಬಸ್‌ ಮಾಲಕರು ಒಪ್ಪದ ಕಾರಣ ಶುಕ್ರವಾರ ಬೆಂಗಳೂರಿನಲ್ಲಿ ನಡೆಯುವ ಸಭೆಯ ಬಳಿಕವಷ್ಟೇ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಬಸ್‌ ಮಾಲಕರು ನಿರ್ಧರಿಸಿದರು. ಟೋಲ್‌ ದರ, ತೆರಿಗೆಗಳಲ್ಲಿ ರಿಯಾಯಿತಿ ನೀಡುವಂತೆ ಖಾಸಗಿ ಬಸ್‌ ಮಾಲಕರು ಆಗ್ರಹಿಸಿದರು.

ಜಿಲ್ಲಾಧಿಕಾರಿ ಜಿ. ಜಗದೀಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ವಿಷ್ಣುವರ್ಧನ್‌, ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಮಕೃಷ್ಣ ರೈ, ಕೆನರಾ ಬಸ್‌ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌, ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ಕೆಎಸ್ಸಾರ್ಟಿಸಿ ಅಧಿಕಾರಿಗಳು, ಖಾಸಗಿ ಬಸ್‌ ಮಾಲಕರು ಉಪಸ್ಥಿತರಿದ್ದರು.

Advertisement

ನಾಳೆ ಬೆಂಗಳೂರಿನಲ್ಲಿ ಸಭೆ
ಖಾಸಗಿ ಬಸ್‌ಗಳ ಮಾಲಕರ ಬೇಡಿಕೆಗಳು ಹಾಗೂ ಅಭಿಪ್ರಾಯಗಳನ್ನು ತಿಳಿಸಲು ಮೇ 8ರಂದು ಬೆಂಗಳೂರಿನಲ್ಲಿ ಸಾರಿಗೆ ಸಚಿವರ ನೇತೃತ್ವದಲ್ಲಿ ರಾಜ್ಯ ಮಟ್ಟದ ಸಭೆ ನಡೆಯಲಿದೆ. ಬಸ್‌ ಪ್ರಯಾಣ ದರ ಏರಿಕೆ, ತೆರಿಗೆ ಕಡಿತ ಸಹಿತ ಬಸ್‌ ಸಂಚಾರ ಆರಂಭ ದಿನಾಂಕದ ಬಗ್ಗೆ ಆ ದಿನ ಚರ್ಚೆ ನಡೆಯ ಲಿದೆ. ಅನಂತರವಷ್ಟೇ ಬಸ್‌ ಸಂಚಾರ ಆರಂಭದ ನಿರೀಕ್ಷೆ ಹೊಂದಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next