Advertisement

Udupi ಕೋಟಿ ಗೀತಾ ಲೇಖನಯಜ್ಞ: ಗೀತೋತ್ಸವಕ್ಕೆ ಪುತ್ತಿಗೆ ಶ್ರೀ ಚಾಲನೆ

10:37 AM Dec 26, 2023 | Team Udayavani |

ಉಡುಪಿ: ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಕೋಟಿಗೀತಾ ಲೇಖನಯಜ್ಞ ಸಮಿತಿ ಆಶ್ರಯದಲ್ಲಿ ಬೆಂಗಳೂರಿನ ಬಸವನಗುಡಿ ನ್ಯಾಶನಲ್‌ ಕಾಲೇಜು ಮೈದಾನದಲ್ಲಿ ಡಿ. 23ರಂದು ಗೀತೋತ್ಸವಕ್ಕೆ ಚಾಲನೆ ದೊರಕಿತು.

Advertisement

ಬೆಳಗ್ಗೆ ನಡೆದ ಕೋಟಿಗೀತಾ ಲೇಖನಯಜ್ಞ ದೀಕ್ಷಾ ಸಮಾರಂಭದ ಗೀತೋತ್ಸವದ ಉದ್ಘಾಟನೆಯನ್ನು ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ನೆರವೇರಿಸಿದರು. ಶ್ರೀಕೃಷ್ಣ ಬೋಧಿಸಿದ ಭಗವದ್ಗೀತೆ ಕೇವಲ ಪುಣ್ಯ ಗ್ರಂಥವಲ್ಲ, ನಾವು ಎದುರಿಸುವ ಸಮಸ್ಯೆಗಳ ನಿವಾರಣೆಗೆ ಮಾರ್ಗೋಪಾಯ ಬೋಧಿಸುವ ಗ್ರಂಥ.

ಗೀತೆಯಲ್ಲಿ ಹೇಳಿದಂತೆ ಜೀವನ ದಲ್ಲಿ ಅನುಸರಿಸಿದರೆ ಶ್ರೀಕೃಷ್ಣನಿಗೆ ಪ್ರಿಯವಾಗುತ್ತದೆ. ಆಧುನಿಕ ಕಾಲದ ಜಿಪಿಎಸ್‌ ಇದ್ದಂತೆ ಗೀತೆ ನಮ್ಮ ಜೀವನದಲ್ಲಿದ್ದರೆ ಅದು ಸದಾ ನಮಗೆ ಮಾರ್ಗದರ್ಶನ ತೋರುತ್ತದೆ ಎಂದು ಶ್ರೀಗಳು ಹೇಳಿದರು.

ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.ಗೀತೋತ್ಸವ ಸಮಿತಿ ಪ್ರಧಾನ ಸಂಚಾಲಕ ಎನ್‌.ಆರ್‌.ರಮೇಶ್‌, ತೇಜಸ್ವಿನಿ ಅನಂತ್‌ ಕುಮಾರ್‌, ಅಶ್ವಿ‌ನಿ ಪುನೀತ್‌ ರಾಜ್‌ಕುಮಾರ್‌ ಉಪಸ್ಥಿತರಿದ್ದರು. ಸಹಸ್ರಾರು ಕೃಷ್ಣ ಭಕ್ತರಿಂದ ಸಮಗ್ರ ಕೋಟಿಗೀತಾ ಲೇಖನಯಜ್ಞ ದೀಕ್ಷೆ ನೆರವೇರಿತು. ವಿಷ್ಣು ಸಹಸ್ರನಾಮ ಪಾರಾಯಣ, ನಾಡಿನ ಪ್ರಸಿದ್ಧ ಚಿಂತಕರು, ಉಪನ್ಯಾಸಕರಿಂದ ಗೀತಾ-ಚಿಂತನ, ಭಗವದ್ಗೀತಾ ಕಲಾ ಪ್ರಕಾರಗಳ ಪ್ರಸ್ತುತಿ, ಶಾಲೆಯ ವಿದ್ಯಾರ್ಥಿಗಳಿಗೆ ಭಗವದ್ಗೀತಾ ಸಂಬಂಧಿತ ಸ್ಪರ್ಧೆ, ಭಗವದ್ಗೀತೆಗೆ ಸಂಬಂಧಪಟ್ಟ ವಿವಿಧ ಚಿಂತನೆಗಳ ಸಚಿತ್ರ ಪ್ರದರ್ಶನ, ವಸ್ತು ಪ್ರದರ್ಶನ ನೆರವೇರಿತು. ಸಂಜೆ “ಆಚಾರ್ಯತ್ರಯರ ಚಿಂತನೆಯಲ್ಲಿ – ಭಗವದ್ಗೀತೆ’ ಕಾರ್ಯಕ್ರಮ ಕೇಂದ್ರೀಯ ಸಂಸ್ಕೃತ ವಿ.ವಿ.ಯ ಕುಲಪತಿ ಪ್ರೊ| ಶ್ರೀನಿವಾಸ ವರಖೇಡಿ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು.

“ಆಚಾರ್ಯ ಶಂಕರರ ಗೀತಾಚಿಂತನೆ’ ಬಗ್ಗೆ ಮೈಸೂರಿನ ಶ್ರೀಸುಧಾಮ ಸಂಸ್ಕೃತ ದಿನಪತ್ರಿಕೆಯ ವಿ| ಎಚ್‌.ವಿ. ನಾಗರಾಜ ರಾವ್‌, “ಆಚಾರ್ಯ ರಾಮಾನುಜರ ಗೀತಾಚಿಂತನೆ’ ಬಗ್ಗೆ ಪರಾಂಕುಶಾಚಾರ್ಯ ವೈದಿಕ ಅಧ್ಯಯನ ಸಂಸ್ಥೆಯ ಸ್ಥಾಪಕ ನ್ಯಾಸಿ ಡಾ| ರಾಮಾನುಜನ್‌, “ಆಚಾರ್ಯ ಮಧ್ವರ ಗೀತಾಚಿಂತನೆ’ ಬಗ್ಗೆ ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ನಿವೃತ್ತ ಪ್ರಾಂಶುಪಾಲ ವಿ| ವಿ. ಹರಿದಾಸ್‌ ಭಟ್ಟ ಅವರು ಚಿಂತನೆ ನಡೆಸಿದರು.

Advertisement

ಡಾ| ಬಿ. ಗೋಪಾಲಾಚಾರ್ಯ ನಿರೂಪಿಸಿದರು. ಮಹಿತೋಷ್‌ ಆಚಾರ್ಯ ಸ್ವಾಗತಿಸಿ, ಶ್ರೀಪಾದರ ಆಪ್ತ ಕಾರ್ಯದರ್ಶಿ ಎಂ.ಪ್ರಸನ್ನಾಚಾರ್ಯ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next