Advertisement

Udupi ಜ್ಞಾನ, ಭಕ್ತಿಯ ಶರಣಾಗತಿಯಿಂದ ಶ್ರೇಯಸ್ಸು: ಚಿತ್ರಾಪುರ ಶ್ರೀ

12:21 AM Jul 08, 2024 | Team Udayavani |

ಉಡುಪಿ: ಈಶಾವಾಸ್ಯ ಉಪನಿಷತ್ತಿನ 18 ಶ್ಲೋಕಗಳಲ್ಲಿ ಭಗವಂತನ ಕತೃತ್ವಗಳ ಬಗ್ಗೆ ವಿಶೇಷವಾಗಿ ಉಲ್ಲೇಖಿಸಲಾಗಿದೆ. ಇಂಥ ಮಹಿಮೆಗಳ ಕುರಿತಾಗಿ ಜ್ಞಾನ ಪಡೆದು ನಿವ್ಯಾìಜ ಭಕ್ತಿಯಿಂದ ದೇವರಿಗೆ ಶರಣಾದಾಗ ನಿಶ್ಚಯವಾಗಿಯೂ ಶ್ರೇಯ ಪ್ರಾಪ್ತಿಯಾಗುತ್ತದೆ ಎಂದು ಮಧ್ವಾಚಾರ್ಯರೇ ಮೊದಲಾದ ಮಹಾಮಹಿಮರು ತಿಳಿಸಿಕೊಟ್ಟಿದ್ದಾರೆ ಎಂದು ಶ್ರೀ ಸಂಸ್ಥಾನ ಚಿತ್ರಾಪುರ ಮಠದ ಶ್ರೀ ವಿದ್ಯೆàಂದ್ರತೀರ್ಥ ಶ್ರೀಪಾದರು ಹೇಳಿದರು.

Advertisement

ಸುರತ್ಕಲ್‌ ಸಮೀಪದ ಚಿತ್ರಾಪುರ ಮಠದಲ್ಲಿ ಎರಡು ತಿಂಗಳುಗಳಿಂದ ಎಂಟು ಜನ ಶಿಷ್ಯರಿಗೆ ತಾವು ನಡೆಸಿದ ಈಶಾವಾಸ್ಯ ಉಪನಿಷತ್ತಿನ ಪಾಠದ ಮಂಗಲೋತ್ಸವ ರವಿವಾರ ನಡೆಸಿ ಅನುಗ್ರಹ ಸಂದೇಶ ನೀಡಿದರು. ಇದೇ ರೀತಿಯಾಗಿ ಹತ್ತು ಉಪನಿಷತ್ತುಗಳ ಪಾಠವನ್ನು ಯಥಾಮತಿ ನಡೆಸುವ ಉದ್ದೇಶವಿದೆ ಎಂದು ಅವರು ತಿಳಿಸಿದರು.

ಶ್ರೀ ಮಠದಲ್ಲಿ ಈಗಾಗಲೇ ಎಲ್ಲ ವಯೋಮಾನಗಳ ಆಸಕ್ತ ವಿಪ್ರರಿಗೆ ನಿತ್ಯೋಪಯೋಗಿ ಸಾಂಪ್ರದಾಯಿಕ ವಿಧಿ ವಿಧಾನಗಳು, ವೇದ ಹಾಗೂ ಮಹಾಭಾರತ ತಾತ್ಪರ್ಯ ನಿರ್ಣಯವೇ ಮೊದಲಾದ ಗ್ರಂಥಗಳ ಕುರಿತಾಗಿ ಪಾಠಗಳನ್ನು ನಡೆಸಲಾಗುತ್ತಿದೆ. ಐಟಿಬಿಟಿ ಮೊದಲಾದ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ನಡೆಸುತ್ತಿರುವ ಅನೇಕ ವಿಪ್ರ ಯುವಕರೂ ಇದರಲ್ಲಿ ತೊಡಗಿಸಿಕೊಂಡಿರುವುದು ವಿಶೇಷ. ಸದ್ಯದಲ್ಲೇ ಶ್ರೀ ಮಠವನ್ನು ನವೀಕರಿಸಿ ಮಠದ ಆದ್ಯ ಪ್ರವರ್ತಕರಾದ ಶ್ರೀ ವಿಜಯಧ್ವಜ ತೀರ್ಥ ಶ್ರೀ ಪಾದರ ಹೆಸರಿನಲ್ಲಿ ವಿದ್ಯಾಪೀಠವನ್ನು ಸ್ಥಾಪಿಸುವ ಮಹತ್ವಾಕಾಂಕ್ಷೆ ಹೊಂದಿರುವುದಾಗಿ ತಿಳಿಸಿದರು.

ಇದೇ ಸಂದರ್ಭ ಸಂಸ್ಥಾನದ ಪಟ್ಟದ ದೇವರಿಗೆ ವಾರ್ಷಿಕ ಮಹಾಭಿಷೇಕವನ್ನು ನೆರವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next