Advertisement
ಕಿದಿಯೂರು ಹೊಟೇಲ್ಸ್‌ನ ನಾಗ ಸಾನ್ನಿಧ್ಯದಲ್ಲಿ ಜ. 31ರಂದು ನಡೆಯಲಿ ರುವ ತೃತೀಯ ಅಷ್ಟಪವಿತ್ರ ನಾಗಮಂಡ ಲೋತ್ಸವದ ಅಂಗವಾಗಿ ಮಂಗಳವಾರ ನಡೆದ ಧಾರ್ಮಿಕ ಸಭೆಯನ್ನು ನಾಗದೇವರ ಚಿತ್ರಕ್ಕೆ ಬಣ್ಣ ಕೊಡುವ ಮೂಲಕ ಶ್ರೀಪಾದರು ಉದ್ಘಾಟಿಸಿ ಮಾತನಾಡಿದರು. ಮಂಗಳೂರು ಇಸ್ಕಾನ್ ಅಧ್ಯಕ್ಷ ಗುಣಕರ ರಾಮದಾಸ ಪ್ರಭು ಮಾತನಾಡಿ, ದೇವರ ನಾಮ ಸಂಕೀರ್ತನೆ ಸದಾ ನಮ್ಮನ್ನು ಸನ್ಮಾರ್ಗದಲ್ಲಿ ನಡೆಸುತ್ತದೆ ಎಂದರು.
ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಗೆ ಭುವನೇಂದ್ರ ಕಿದಿಯೂರು ಹಾಗೂ ಡಾ| ಜಿ. ಶಂಕರ್ ಮುಂದಾಳತ್ವದಲ್ಲಿ ನಾಣ್ಯಗಳಿಂದ ತುಲಾಭಾರ ನಡೆಯಿತು. ಶ್ರೀಪಾದರು ಮಾತನಾಡಿ, ಈ ತುಲಾಭಾರ ಸೇವೆ ಶ್ರೀಕೃಷ್ಣ ದೇವರಿಗೆ, ಅಯೋಧ್ಯೆಯಿಂದ ಬಂದು ಉಡುಪಿ ಯಲ್ಲಿ ನೆಲೆಯಾದ ಪ್ರಾಣದೇವರಿಗೆ (ಮುಖ್ಯಪ್ರಾಣ ದೇವರು) ಹಾಗೂ ಶ್ರೀಕೃಷ್ಣ ದೇವರನ್ನು ಪ್ರತಿಷ್ಠಾಪಿಸಿದ ಶ್ರೀ ಮಧ್ವಗುರುಗಳಿಗೆ ಸಲ್ಲುತ್ತದೆ. ತುಲಾ ಭಾರದ ನಾಣ್ಯಗಳೆಲ್ಲವನ್ನು ಭುವನೇಂದ್ರರು ನಡೆಸುತ್ತಿರುವ ಇಂಟರ್ ನ್ಯಾಶ ನಲ್ ಸ್ಕೂಲ್‌ನ ಸಮಗ್ರ ಅಭಿವೃದ್ಧಿಗೆ ಬಳಕೆಯಾಗಲಿ ಎಂದು ಒಪ್ಪಿಸಿದರು.
Related Articles
ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ವತಿಯಿಂದ ಭುವನೇಂದ್ರ ಕಿದಿಯೂರು ಮತ್ತು ಹೀರಾ ಬಿ. ದಂಪತಿ, ಪುತ್ರ ಡಾ| ಬೃಜೇಶ್ ಬಿ. ಮತ್ತು ಶ್ವೇತಾ ಬೃಜೇಶ್ ದಂಪತಿ, ಪುತ್ರ ಡಾ| ಯಜ್ಞೇಶ್ ಬಿ. ಅವರ ಪರವಾಗಿ ಪತ್ನಿ ಶಿಲ್ಪಾ ಯಜ್ಞೇಶ್, ಪುತ್ರ ಜಿತೇಶ್ ಬಿ. ಮತ್ತು ಪ್ರಿಯಾಂಕ ದಂಪತಿ ಹಾಗೂ ಪುತ್ರಿ ಡಾ| ಭವ್ಯಶ್ರೀ ಅಭಿನ್ ಮತ್ತು ಡಾ| ಅಭಿನ್ ದೇವದಾಸ್ ಶ್ರಿಯಾನ್ ಅವರನ್ನು ಸಮ್ಮಾನಿಸಲಾಯಿತು. ನಾಗಮಂಡಲ ಆಯೋಜನ ಸಮಿತಿ ಪ್ರಧಾನ ಕಾರ್ಯದರ್ಶಿ ಯುವರಾಜ್ ಸಾಲ್ಯಾನ್ ಮಸ್ಕತ್ ಮತ್ತು ಮಲ್ಲಿಕಾ ದಂಪತಿಯನ್ನು ಗೌರವಿಸಲಾಯಿತು.
Advertisement