Advertisement

Udupi: ಉದ್ಯೋಗ ಆಮಿಷ: ಆನ್‌ಲೈನ್‌ ವಂಚನೆ

08:52 PM Apr 25, 2023 | Team Udayavani |

ಉಡುಪಿ: ಆನ್‌ಲೈನ್‌ ಮೂಲಕ ಉದ್ಯೋಗ ನೀಡುವ ಆಮಿಷವೊಡ್ಡಿ ಲಿಂಕ್‌ ಕಳುಹಿಸಿ ಲಕ್ಷಾಂತರ ರೂ. ಹಣ ವರ್ಗಾಯಿಸಿಕೊಂಡ ಘಟನೆ ನಡೆದಿದೆ.

Advertisement

ಹಿತೇಶ್‌ ಕುಮಾರ್‌ ಅವರಿಗೆ ಅಪರಿಚಿತ ವ್ಯಕ್ತಿಗಳು ಪ್ರಾಡಕ್ಟ್ಗಳನ್ನು ಮಾರಾಟ ಮಾಡಿ ಕಮಿಷನ್‌ ರೂಪದಲ್ಲಿ ಹಣ ಸಂಪಾದಿಸುವ ಆನ್‌ಲೈನ್‌ ಉದ್ಯೋಗದ ಕುರಿತು ವಾಟ್ಸ್‌ ಆ್ಯಪ್‌ ಮೂಲಕ ಸಂದೇಶ ಕಳುಹಿಸಿದ್ದರು.

ಸಂದೇಶದಲ್ಲಿದ್ದ ಆ್ಯಪ್‌ ಮೂಲಕ ಹಿತೇಶ್‌ ಕುಮಾರ್‌ ಅವರು ಎ. 17ರಿಂದ 20ರ ವರೆಗೆ ಒಟ್ಟು 1,05,651 ರೂ.ಗಳನ್ನು ವರ್ಗಾವಣೆ ಮಾಡಿದ್ದಾರೆ. ಆದರೆ ಆರೋಪಿಗಳು ಯಾವುದೇ ಸೊತ್ತುಗಳನ್ನು ನೀಡದೆ ವಂಚಿಸಿದ್ದಾರೆ. ಈ ಬಗ್ಗೆ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next