Advertisement

24×7 ವಿದ್ಯುತ್‌ ನೀಡುವ ಏಕೈಕ ವಿಧಾನಸಭಾ ಕ್ಷೇತ್ರ ಉಡುಪಿ

03:18 PM May 06, 2017 | Harsha Rao |

ಮಲ್ಪೆ: ದಿನದ 24 ಗಂಟೆ ಕರೆಂಟ್‌ ಮತ್ತು ಸರಕಾರಿ ವಿವಿಧ ಇಲಾಖಾ ಅಧಿಕಾರಿಗಳನ್ನು ಜನರ ಬಳಿಗೆ ಕರೆದುಕೊಂಡು ಬಂದು ಅವರ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ನೀಡುವ ಜನಸಂಪರ್ಕ ಸಭೆ ಮಾಡುತ್ತೇನೆ ಎಂದು ಚುನಾವಣಾ ಪೂರ್ವ ಮತದಾರರಿಗೆ ಭರವಸೆ ನೀಡಿದ್ದೆ. ಆ ಮಾತನ್ನು  ಉಳಿಸಿಕೊಂಡಿದ್ದೇನೆ. ಈ ನಿಟ್ಟಿನಲ್ಲಿ ಇಂದು ದಿನದ 24 ಗಂಟೆ ನಿರಂತರ ವಿದ್ಯುತ್‌ ಪೂರೈಸುತ್ತಿರುವ ಉಡುಪಿ ರಾಜ್ಯದ ಏಕೈಕ ವಿಧಾನಸಭಾ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಮೀನುಗಾರಿಕಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Advertisement

ಕಡೆಕಾರು ಬಿಲ್ಲವ ಸೇವಾ ಸಂಘದ ನಾರಾಯಣಗುರು ಸಮುದಾಯ ಭವನದಲ್ಲಿ ಶುಕ್ರವಾರ ನಡೆದ 35ನೇ ಕಡೆಕಾರು ಗ್ರಾ.ಪಂ.ನ ಕಡೆಕಾರು ಕನ್ನರ್ಪಾಡಿ ಗ್ರಾಮಮಟ್ಟದ ಜನಸಂಪರ್ಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಉಡುಪಿ ನಗರ ಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹಮೂರ್ತಿ, ಜಿ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಕಡೆಕಾರು ಗ್ರಾ.ಪಂ. ಅಧ್ಯಕ್ಷ ರಘುನಾಥ್‌ ಕೋಟ್ಯಾನ್‌, ಉಪಾಧ್ಯಕ್ಷೆ ಮಾಲತಿ ವಿಶ್ವನಾಥ್‌, ಮಾಜಿ ಜಿ.ಪಂ. ಸದಸ್ಯ ದಿವಾಕರ ಕುಂದರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸತೀಶ್‌ ಅಮೀನ್‌ ಪಡುಕರೆ, ನಗರಸಭಾ ಸದಸ್ಯ ಗಣೇಶ್‌ ನೆರ್ಗಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜನಾರ್ದನ, ಕಡೆಕಾರು ಗ್ರಾ.ಪಂ. ಸದಸ್ಯರಾದ ತಾರಾನಾಥ ಸುವರ್ಣ, ಜತ್ತಿನ್‌ ಕಡೆಕಾರ್‌, ನವೀನ್‌ ಶೆಟ್ಟಿ, ವಿನಯ ಪ್ರಕಾಶ್‌, ವೀಣಾ ಪ್ರಕಾಶ್‌, ಗೀತಾ ಪಾಂಡು ಕಾಂಚನ್‌, ನಿರ್ಮಲ ಕನ್ನರ್ಪಾಡಿ, ಆಶಾ ಜೆ. ಶೆಟ್ಟಿ, ಅರುಣ್‌ ಕುಮಾರ್‌ ಶೆಟ್ಟಿ ಕನ್ನರ್ಪಾಡಿ, ಜಯಕರ ಕನ್ನರ್ಪಾಡಿ, ಬಿಲ್ಲವ ಸಂಘದ ಅಧ್ಯಕ್ಷ ರಮೇಶ್‌ ಕೆ. ಪೂಜಾರಿ ಉಪಸ್ಥಿತರಿದ್ದರು. 

ಉಡುಪಿ ತಹಶೀಲ್ದಾರ ಮಹೇಶ್ಚಂದ್ರ ಸ್ವಾಗತಿಸಿದರು. ಹರಿಕೃಷ್ಣ ಶಿವತ್ತಾಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುರೇಶ್‌ ಮೆಂಡನ್‌ ಕಾರ್ಯಕ್ರಮ ನಿರೂಪಿಸಿದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ| ಸರ್ವೋತ್ತಮ ವಂದಿಸಿದರು.

ವಿವಿಧ ಸವಲತ್ತು ವಿತರಣೆ
ಬಸವ ವಸತಿ ಯೋಜನೆಯ ಮಂಜೂರಾತಿ ಪತ್ರ, ರಾಷ್ಟ್ರೀಯ ಕುಟುಂಬ ಸಹಾಯಧನ, ಪಶು ಸಂಗೋಪನ, ಭಾಗ್ಯಲಕ್ಷ್ಮೀ ಬಾಂಡ್‌, ಸಂಧ್ಯಾ ಸುರಕ್ಷಾ ಯೋಜನೆ, ವಿಕಲಚೇತನ ವೇತನ, ಶಿಶು ಅಭಿವೃದ್ಧಿ ಯೋಜನೆ ಸೇರಿದಂತೆ 51 ವಿವಿಧ ಯೋಜನೆಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.

ಬಸ್‌: ವಿರೋಧವನ್ನೂ ಮೆಟ್ಟಿನಿಂತೆ
ಖಾಸಗಿ ಬಸ್‌ ಮಾಲಕರು ಈ ಹಿಂದಿನ ಯಾವ ಜನಪ್ರತಿನಿಧಿಗಳಿಗೂ ಉಡುಪಿಗೆ ಸರಕಾರಿ ಬಸ್‌ ತರಲು ಬಿಡಲಿಲ್ಲ. ನನಗೂ ಸಾಕಷ್ಟು ವಿರೋಧ ಮಾಡಿದ್ದಾರೆ. ನಾನು ಅವರ ಎಲ್ಲ ವಿರೋಧ ಮೆಟ್ಟಿ ನಿಂತು ಉಡುಪಿಯಲ್ಲಿ ಸರಕಾರಿ ಬಸ್‌ ಓಡಾಡುವಂತೆ ಮಾಡಲು ಯಶಸ್ವಿಯಾಗಿದ್ದೇನೆ. ಈ ಸರಕಾರಿ ಬಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ, ಅಂಗವಿಕಲರಿಗೆ, ಹಿರಿಯರಿಗೆ ವಿಶೇಷ ಸೌಲಭ್ಯ ಒದಗಿಸಲಾಗುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ ಉಡುಪಿ ನಗರಕ್ಕೆ 12, ಗ್ರಾಮೀಣ ಭಾಗದಲ್ಲಿ 5 ಬಸ್‌ಗಳು ಬಂದಿವೆ. ಇನ್ನೂ 10 ಬರಲಿವೆ. 55 ಬಸ್‌ಗಳ  ಪರ್ಮಿಟ್‌ ಪಾಸಾಗಿದೆ. ಅದರಲ್ಲಿ ಕಡೆಕಾರು ರೂಟ್‌ ಇದ್ದರೆ ಅತೀ ಶೀಘ್ರದಲ್ಲಿ ಬಸ್‌ ಹಾಕುವ ವ್ಯವಸ್ಥೆ ಮಾಡಲಾಗುವುದು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next