Advertisement

ನಾಡಹಬ್ಬಕ್ಕೆ ಅಣಿಯಾಗುತ್ತಿದೆ ಉಡುಪಿ

08:30 AM Sep 04, 2017 | Harsha Rao |

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸೆ. 13 ಮತ್ತು 14ರಂದು ವಿಜೃಂಭಣೆಯಿಂದ ಜರಗಲಿದ್ದು, ಸಕಲ ಸಿದ್ಧತೆಗಳು ನಡೆಯುತ್ತಿವೆ.

Advertisement

ಆ. 14ರಂದು ನಡೆದ ಚಾಂದ್ರಮಾನ ಅಷ್ಟಮಿ ಶ್ರೀಕೃಷ್ಣ ಮಠದಲ್ಲಿ ನಡೆದಿದ್ದು, ಎಂದಿನಂತೆ ಸೌರಾಷ್ಟಮಿಯ ಸಂಭ್ರಮಕ್ಕೆ ಸಿದ್ಧತೆಯಾಗುತ್ತಿದೆ. ಶ್ರೀ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಪಂಚಮ ಪರ್ಯಾಯದ ಎರಡನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿಯೂ ಇದಾಗಿದೆ. ಹೀಗಾಗಿ ಈ ಜನ್ಮಾಷ್ಟಮಿ ಮಹತ್ವದ್ದಾಗಿದೆ. 

ಸೆ. 13ರ ಮಧ್ಯರಾತ್ರಿ 12.34ಕ್ಕೆ ಪೇಜಾವರ ಸಹಿತ ಎಲ್ಲ ಸ್ವಾಮೀಜಿಯವರು ಶ್ರೀಕೃಷ್ಣನಿಗೆ ಅಘÂì ಪ್ರದಾನ ಮಾಡ ಲಿದ್ದು, ಸೆ. 14ರಂದು ಅಪರಾಹ್ನ 3 ಗಂಟೆಯಿಂದ ಶ್ರೀಕೃಷ್ಣನ ಮೃಣ್ಮಯ ಪ್ರತಿಮೆಯ ರಥೋತ್ಸವ, ವಿಟ್ಲಪಿಂಡಿ ಉತ್ಸವ (ಶ್ರೀಕೃಷ್ಣ ಲೀಲೋತ್ಸವ) ನಡೆಯಲಿದೆ. ಕೆಲವು ಬಾರಿ ಚಾತುರ್ಮಾಸ್ಯದ ಕಾರಣ ಇತರ ಸ್ವಾಮೀಜಿ ಯವ ರಿಗೆ ಕೃಷ್ಣಾಷ್ಟಮಿಗಾಗಿ ಉಡುಪಿಗೆ ಬರಲಾಗುತ್ತಿರಲಿಲ್ಲ. ಆದರೆ ಈ ಬಾರಿ ಜನ್ಮಾಷ್ಟಮಿ ಸಂದರ್ಭ ಚಾತುರ್ಮಾಸ್ಯ ಕಾಲ ಮುಗಿಯ ಲಿದ್ದು ಇತರ ಸ್ವಾಮೀಜಿಯವರೂ ಭಾಗವಹಿಸಲಿದ್ದಾರೆ. 

ಉಂಡೆ, ಲಡ್ಡು  ತಯಾರಿಕೆ…
ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸಾಂಪ್ರದಾಯಿಕ ಲಡ್ಡು, ಉಂಡೆ ತಯಾರಿ ಸೆ. 13ರಂದು ನಡೆಯಲಿದೆ. ಮಠದಿಂದ ಬಿಸಿಯೂಟ ನೀಡುವ ಶಾಲೆಗಳಿಗೆ ನೀಡುವ ಲಡ್ಡು, ಉಂಡೆ ತಯಾರಿ ಎರಡು ದಿನ ಹಿಂದೆಯೇ ಪ್ರಾರಂಭವಾಗುತ್ತದೆ. ಸೆ. 14ರಂದು ಸಾರ್ವಜನಿಕರಿಗೆ ವಿಶೇಷ ಅನ್ನಸಂತರ್ಪಣೆ ಮಠದ ವತಿಯಿಂದ ನೀಡಲಾಗುತ್ತದೆ. ಬಿಸಿಯೂಟ ನೀಡುತ್ತಿರುವ 110 ಶಾಲೆಗಳ 24,000 ಮಕ್ಕಳಿಗೆ ಮುದ್ದುಕೃಷ್ಣ ವೇಷ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಶಾಲೆಯಲ್ಲೇ ಬಹುಮಾನ ನೀಡಲಾಗುತ್ತಿದೆ. 

ಉಡುಪಿಯಲ್ಲಿ ಸೌರಾಷ್ಟಮಿ
ಚಾಂದ್ರಮಾನ ಮತ್ತು ಸೌರಮಾನ ಎಂಬ ಎರಡು ತಿಂಗಳು ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಚಾಂದ್ರಮಾನ ತಿಂಗಳು ಅಮಾವಾಸ್ಯೆ ಮರುದಿನದಿಂದ, ಸೌರಮಾನ ತಿಂಗಳು ಸಂಕ್ರಾಂತಿಯ ಮರುದಿನದಿಂದ ಪ್ರಾರಂಭವಾಗುತ್ತವೆ. ಚಾಂದ್ರಮಾನ ಕ್ರಮದಂತೆ ಕೃಷ್ಣಾಷ್ಟಮಿಯು ಆಗಸ್ಟ್‌ ತಿಂಗಳಲ್ಲಿ ಹಾಗೂ ಸೌರಮಾನದ ಅಷ್ಟಮಿ ಸೆಪ್ಟಂಬರ್‌ ತಿಂಗಳಲ್ಲಿ ಬರುತ್ತದೆ. ಕರಾವಳಿ ಕರ್ನಾಟಕದಲ್ಲಿ ಹಿಂದಿನಿಂದಲೂ ಸೌರಮಾನ ಅಷ್ಟಮಿಯನ್ನು ಆಚರಿಸಲಾಗುತ್ತಿದೆ.

Advertisement

ರಾಜಾಂಗಣದ ನವೀಕರಣ
ರಾಜಾಂಗಣದ ನವೀಕರಣಕ್ಕೆ ಕಾಲ ಕೂಡಿಬಂದಿದೆ. ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಸೆ. 4ರಿಂದ ರಾಜಾಂ ಗಣದ ಛಾವಣಿಯ ಹಳೆಯ ಶೀಟ್‌ ತೆಗೆದು ಮೊದಲ ಮಹಡಿ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಈಗಿರುವ ತಳಭಾಗ, ಗ್ಯಾಲರಿ, ವೇದಿಕೆ ಅದೇ ರೀತಿ ಇರಲಿದೆ. ಬೆಂಗ ಳೂರಿನ ಕಂಪೆನಿಗೆ ಮಹಡಿ ನಿರ್ಮಾಣದ ಹೊಣೆಗಾರಿಕೆ ನೀಡಲಾಗಿದೆ. ನೂತನವಾಗಿ ನಿರ್ಮಾಣವಾಗುವ ಪ್ರಥಮ ಮಹಡಿಯನ್ನು ಸಾರ್ವಜನಿಕ ಅನ್ನಸಂತರ್ಪಣೆ ವ್ಯವಸ್ಥೆಗೆ ಪೂರಕವಾಗುವಂತೆ ರೂಪಿಸಲಾಗುವುದು. ಪೂರ್ಣ ಕೆಲಸಕ್ಕಾಗಿ ಎರಡು ತಿಂಗಳ ಕಾಲಾವಕಾಶ ಬೇಕಾಗಿದೆ. ನವೆಂಬರ್‌ ತಿಂಗಳಲ್ಲಿ ಧರ್ಮಸಂಸತ್‌ ನಡೆಯಲಿರುವುದರಿಂದ ತ್ವರಿತವಾಗಿ ಕೆಲಸ ಮುಗಿಯಬೇಕಾಗಿದೆ.

ಹೊಸ ವೇದಿಕೆಯಲ್ಲಿ ಕಲಾ ಪ್ರದರ್ಶನ
ವಿಟ್ಲಪಿಂಡಿಯಂದು ಅಪರಾಹ್ನ 3 ಗಂಟೆಯಿಂದ ಹುಲಿವೇಷ ಸ್ಪರ್ಧೆ, ಜನಪದ ಕಲೆಗಳ ಪ್ರದರ್ಶನ ರಾಜಾಂಗಣದಲ್ಲಿ ನಡೆಯುವುದಿಲ್ಲ. ರಾಜಾಂಗಣದ ಮೊದಲ ಮಹಡಿಯ ನಿರ್ಮಾಣದ ಕಾರ್ಯ ಚಾಲ್ತಿಯಲ್ಲಿರುವುದರಿಂದ ಸಾಂಸ್ಕೃತಿಕ ಕಾರ್ಯಗಳಿಗೆ ನೂತನ ವೇದಿಕೆ ಮಠದ ರಥಬೀದಿ ಅಥವಾ ಪಾರ್ಕಿಂಗ್‌ ವ್ಯಾಪ್ತಿಯಲ್ಲಿ ಸಿದ್ಧವಾಗಲಿದೆ. ಮುಂಬಯಿಯ ಜನಪದ ತಂಡಗಳೂ ವಿಟ್ಲಪಿಂಡಿ ಉತ್ಸವದಲ್ಲಿ  ಭಾಗವಹಿಸಲಿವೆ.

ಸಾರ್ವಜನಿಕರಿಗೆ ಸಾಕಷ್ಟು ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದ್ದು, ಸೆ. 2ರಂದು ಚಾಲನೆ ದೊರೆ ತಿದೆ. ಭಕ್ತಿ ಸಂಗೀತ, ಪ್ರಬಂಧ, ನೃತ್ಯ ಸ್ಪರ್ಧೆಗಳು ವಿವಿಧ ವಿಭಾಗ ಗಳಲ್ಲಿ, ಮಠದ ರಾಜಾಂಗಣದಲ್ಲಿ ನಡೆಯುತ್ತಿವೆ. 
ಸೆ. 14ರ ವರೆಗೂ ಸ್ಪರ್ಧೆಗಳು ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next