Advertisement
ಕೇಂದ್ರ ಸರಕಾರದ ಆತ್ಮನಿರ್ಭರ ಯೋಜನೆಯಡಿ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಜಾರಿಯಾಗಿದ್ದು, ಕೃಷಿಯೇತರ ಉತ್ಪನ್ನಗಳಡಿ ಎಂಎಸ್‌ಎಂಇ ಉತ್ಪನ್ನಗಳಿಗೆ ಜಿಲ್ಲಾಡಳಿತ ಆಥವಾ ಜಿಲ್ಲಾ ಕೈಗಾರಿಕಾ ಕೇಂದ್ರಗಳ ಮೂಲಕ ವಿಶೇಷ ಪ್ರೋತ್ಸಾಹ, ಬ್ರ್ಯಾಂಡಿಂಗ್ ಒದಗಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ಹೀಗಾಗಿ ಎಲ್ಲ ಜಿಲ್ಲೆಗಳು ಕೃಷಿಯೇತರ ಉತ್ಪನ್ನವೊಂದನ್ನು ತಮ್ಮ ಜಿಲ್ಲೆಯ ಉತ್ಪನ್ನವಾಗಿ ಆಯ್ಕೆ ಮಾಡಿಕೊಂಡಿವೆ.
ಜಿಲ್ಲೆಯಲ್ಲಿ ಕೇಂದ್ರ ಸರಕಾರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಜೆಮ್ಸ್ ಆ್ಯಂಡ್ ಜುವೆಲರಿ(ಐಐಜಿಜೆ) ಸಂಸ್ಥೆ ಇದೆ. ಇದು ದಕ್ಷಿಣ ಭಾರತದ ಏಕೈಕ ಸಂಸ್ಥೆ. ಜತೆಗೆ ಉಡುಪಿ ಜಿಲ್ಲೆಗೆ ರತ್ನ, ಮುತ್ತುಗಳ ಆಭರಣ ತಯಾರಿಕೆಯಲ್ಲಿ ತನ್ನದೇ ಹಿರಿಮೆಯಿದೆ. ಜತೆಗೆ ಜಿಲ್ಲೆಯಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಚಿನ್ನ, ಬೆಳ್ಳಿ ಕುಶಲಗಾರರು ಇದ್ದಾರೆ. ಇಲ್ಲಿನ ಆಭರಣ ಸಂಸ್ಥೆಗಳು ದೇಶ ವಿದೇಶದಲ್ಲೂ ಜನಪ್ರಿಯವಾಗಿವೆ. ಹಾಗಾಗಿ ಇದನ್ನೇ ಜಿಲ್ಲೆಯ ಬ್ರ್ಯಾಂಡ್ ಆಗಿ ಜಿಲ್ಲಾಡಳಿತ ಅಧಿ ಕೃತ ಜಾಲತಾಣದಲ್ಲೂ ಬೆಂಬಲಿಸಲಿದೆ. ಜಿಲ್ಲೆಯ ಸಾಮಾಜಿಕ ಆರ್ಥಿಕ ಬೆಳವಣಿಗೆಯನ್ನು ಕೇಂದ್ರವಾಗಿರಿಸಿ ಕೊಂಡು, ಉತ್ಪಾದನೆ ಹಾಗೂ ರಫ¤ನ್ನು ಉತ್ತೇಜಿಸಲು ಹೂಡಿಕೆ ಯನ್ನು ಆಕರ್ಷಿಸಲು ಬ್ರ್ಯಾಂಡಿಂಗ್ ಅನುಕೂಲವಾಗಲಿದೆ.
Related Articles
Advertisement
ನವರತ್ನ ಪರಿಶೀಲನೆ ಲ್ಯಾಬ್“ರತ್ನಗಳು ಮತ್ತು ಆಭರಣ ತಯಾರಿಕೆಯನ್ನು ಜಿಲ್ಲೆಯ ಬ್ರ್ಯಾಂಡ್ ಆಗಿ ಸ್ವೀಕರಿಸಲು ಇನ್ನೊಂದು ಕಾರಣ ವಿದೆ. ನವರತ್ನಗಳ ಟೆಸ್ಟಿಂಗ್ ಲ್ಯಾಬ್ ಉಡುಪಿಯಲ್ಲಿದೆ. ಕರಾವಳಿ ಬೈಪಾಸ್ ಬಳಿಯ ಐಐಜಿಜೆಯಲ್ಲಿ ನವರತ್ನಗಳನ್ನು ಗುರುತಿಸುವ ಲ್ಯಾಬ್‌ಗಳಿವೆ. ಹೀಗಾಗಿ ನವರತ್ನಗಳ ವಿಷಯವಾಗಿ ನಕಲಿ ಮಾಡಲು ಸಾಧ್ಯವಿಲ್ಲ ಮತ್ತು ಪರೀಕ್ಷೆಗಾಗಿ ದೂರದ ಊರುಗಳಲ್ಲಿರುವ ಲ್ಯಾಬ್‌ಗ ಕಳುಹಿಸುವ ಪ್ರಮೇಯ ಉದ್ಭವಿಸದು ಎನ್ನಲಾಗಿದೆ. ದ.ಕ. ಜವಳಿ ಸಂಸ್ಕರಣೆ
ದಕ್ಷಿಣ ಕನ್ನಡ ಜಿಲ್ಲೆಯು ಜವಳಿ ಸಂಸ್ಕರಣೆಯನ್ನು ಆಯ್ದು ಕೊಂಡಿದ್ದು, ರಾಜ್ಯ ಸರಕಾರ ಅನುಮೋದಿಸಿದೆ. ಜಿಲ್ಲೆಯ ಕೈಗಾರಿಕೆ ಕೇಂದ್ರದ ಮೂಲಕ ಜವಳಿ ಉತ್ಪನ್ನಗಳ ಸಂಸ್ಕರ ಣೆಗೆ ಆದ್ಯತೆ ಹಾಗೂ ರಫ್ತು ಹೆಚ್ಚಳಕ್ಕೆ ಉತ್ತೇಜನ ದೊರಕಲಿದೆ. ಕೃಷಿಯೇತರ ಉತ್ಪನ್ನಗಳ ವಿಭಾಗದಲ್ಲಿ ಉಡುಪಿಯು ರತ್ನಗಳು ಹಾಗೂ ಆಭರಣ ತಯಾರಿಕೆಯನ್ನು ಆಯ್ಕೆ ಮಾಡಿಕೊಂಡಿದೆ. ಉತ್ಪನ್ನದ ಬ್ರ್ಯಾಂಡಿಂಗ್, ರಫ್ತು ಇತ್ಯಾದಿಗೆ ಉತ್ತೇಜನ ನೀಡಲಾಗುವುದು.
– ನಾಗರಾಜ್ ವಿ. ನಾಯಕ್,
ಜಂಟಿ ನಿರ್ದೇಶಕರು, ಉಡುಪಿ ಜಿಲ್ಲಾ ಕೈಗಾರಿಕೆ ಕೇಂದ್ರ.