Advertisement

Udupi: ಶ್ರೀ ಜನಾರ್ಧನ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

04:29 PM Jun 23, 2024 | Team Udayavani |

ಉಡುಪಿ: ಎಳ್ಳಾರೆಯ ಶ್ರೀ ಜನಾರ್ಧನ ಶಾಲೆಯಲ್ಲಿ ಮುನಿಯಾಲ್ ಯೋಗ ಮತ್ತು ನಾಚುರೋಪಥಿ ಕಾಲೇಜ್ ಹರಿಕಂಡಿಗೆ ಇವರ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.

Advertisement

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ ವೃಂದ ಹಾಗೂ ಮುನಿಯಲ್ ಕಾಲೇಜಿನ ಉಪನ್ಯಾಸಕರು ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮುನಿಯಾಲ್ ಯೋಗ ಮತ್ತು ನಾಚುರೋಪಥಿ ಕಾಲೇಜಿನ ಉಪನ್ಯಾಸಕಿ ಡಾ.ರಶ್ಮಿ ಶಾಲಾ ಮಕ್ಕಳಿಗೆ ಯೋಗ ದಿನದ ಮಹತ್ವ ಹಾಗೂ ದೇಹಾರೋಗ್ಯ ಕಾಪಾಡುವಲ್ಲಿ ಯೋಗದ ಪಾತ್ರವನ್ನು ವಿವರಿಸಿದರು.

ಮುನಿಯಲ್ ಕಾಲೇಜಿನ ವಿದ್ಯಾರ್ಥಿಗಳಾದ ಅನುಪಮ ಮತ್ತು ನೇಹಾ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next