Advertisement
ಈ ಸಂದರ್ಭ ಮಾತನಾಡಿದ ಡಾ| ಜಯಮಾಲಾ, ಪ್ರಮೋದ್ ಮಧ್ವರಾಜ್ ಅವರು ಅಧಿಕಾರ ದಲ್ಲಿದ್ದಾಗ ಮತ್ತು ಅಧಿಕಾರ ಇಲ್ಲದ ಈ ಸಂದರ್ಭದಲ್ಲಿಯೂ ಜನಪರ ಕಾಳಜಿ ಹೊಂದಿದ್ದಾರೆ. ಇದು ಶ್ಲಾಘನೀಯ ಎಂದರು.ಪ್ರಮೋದ್ ಮಧ್ವರಾಜ್ ಮಾತ ನಾಡಿ, ನಗರೋತ್ಥಾನದ ಬಹುತೇಕ ಕಾಮಗಾರಿಗಳು ಮುಗಿದಿವೆ. ಇನ್ನು ಕೆಲವು ಪ್ರಗತಿಯಲ್ಲಿವೆ ಎಂದರು.
ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ನಗರಸಭೆಯ ಮಾಜಿ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕರೆ, ನಗರಸಭೆ ಮಾಜಿ ಸದಸ್ಯರಾದ ಶೋಭಾ ಕಕ್ಕುಂಜೆ, ನಾರಾಯಣ ಕುಂದರ್, ಗಣೇಶ್ ನೇರ್ಗಿ, ಶಶಿರಾಜ ಕುಂದರ್, ಚಂದ್ರಕಾಂತ ನಾಯ್ಕ, ಮುಖಂಡರಾದ ಕೇಶವ ಎಂ. ಕೋಟ್ಯಾನ್, ಪ್ರಶಾಂತ್ ಪೂಜಾರಿ, ಜಗದೀಶ್ ಸುವರ್ಣ, ಪೌರಾಯುಕ್ತ ಆನಂದ ಕಲ್ಲೋಳಿಕರ್ ಉಪಸ್ಥಿತರಿದ್ದರು.
ಕಕ್ಕುಂಜೆ ವಾರ್ಡ್, ಗೋಪಾಲಪುರ ವಾರ್ಡ್, ನಿಟ್ಟೂರು ವಾರ್ಡ್, ರಾಮಕೃಷ್ಣ ನಗರ, ಕೊಡವೂರು ವಾರ್ಡ್, ವಡಭಾಂಡೇಶ್ವರ ವಾರ್ಡ್, ಕಲ್ಮಾಡಿ ವಾರ್ಡ್, ಅಜ್ಜರಕಾಡು ಕಾಡಬೆಟ್ಟು ಎಸ್‌ಸಿ ಕಾಲನಿ, ಇಂದಿರಾ ನಗರ ವಾರ್ಡ್, ಕಸ್ತೂರ್ ಬಾ ನಗರ ವಾರ್ಡ್, ಇಂದ್ರಾಳಿ ವಾರ್ಡ್ ಮತ್ತು ಸರಳೇಬೆಟ್ಟು ವಾರ್ಡ್‌ನಲ್ಲಿ ನಿರ್ಮಿಸಲಾದ ವಿವಿಧ ಕಾಮಗಾರಿಗಳನ್ನು ಸಚಿವರು ಉದ್ಘಾಟಿಸಿದರು.
ಸಂತೋಷ್ ನಗರ ಗರಡಿ ರಸ್ತೆಯ ಉದ್ಘಾಟನ ಕಾರ್ಯಕ್ರಮ ಮುಗಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಶಾಸಕ ಕೆ. ರಘುಪತಿ ಭಟ್ ಅವರು, ನಿಮ್ಮ ಮೇಲೆ ಗೌರವ ಇದೆ. ಆದರೆ, ಜನರಿಂದ ಆಯ್ಕೆಯಾದ ನನ್ನನ್ನು ನಿರ್ಲಕ್ಷಿಸಿದ್ದಕ್ಕೆ ನೋವಾಗಿದೆ ಎಂದರು.
ಅದಕ್ಕೆ ಪ್ರತಿಕ್ರಿಯಿಸಿದ ಸಚಿವೆ ಜಯಮಾಲಾ, ಇನ್ನು ಮುಂದೆ ಹೀಗಾಗದಂತೆ ಗಮನ ಹರಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಶಾಸಕರ ಜತೆ ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಗಿರೀಶ್ ಅಂಚನ್ ಉಪಸ್ಥಿತರಿದ್ದರು.