Advertisement

ಉಡುಪಿ: ಮತ್ತೆ ಎಚ್‌1ಎನ್‌1?

12:30 AM Feb 16, 2019 | Team Udayavani |

ಉಡುಪಿ: ಜಿಲ್ಲೆಯಲ್ಲಿ ಈ ವರ್ಷದ ಜನವರಿಯಿಂದ ಫೆಬ್ರವರಿ 15ರ ವರೆಗೆ 11 ಎಚ್‌1ಎನ್‌1 ಪ್ರಕರಣಗಳು ಪತ್ತೆಯಾಗಿವೆ. ವಿವಿಧೆಡೆ ಸಾರ್ವಜನಿಕ ವಲಯದಲ್ಲಿ ಎಚ್‌1ಎನ್‌1 ಕುರಿತಾದ ಆತಂಕದ ಮಾತುಗಳು ಕೇಳಿಬರುತ್ತಿವೆ. ಆದರೆ ಇಲಾಖಾಧಿಕಾರಿಗಳು ಆತಂಕದ ಸ್ಥಿತಿ ಇಲ್ಲ ಎಂದಿದ್ದಾರೆ.

Advertisement

ಆರೋಗ್ಯ ಇಲಾಖಾಧಿಕಾರಿಗಳ ಪ್ರಕಾರ ಈ ವರ್ಷ ಎಚ್‌1ಎನ್‌1 ಪ್ರಕರಣಗಳು ಹೆಚ್ಚಾಗಿರುವ ಲಕ್ಷಣ ಇಲ್ಲ. 2017ರಲ್ಲಿ 524 ಪ್ರಕರಣಗಳು, 2018ರಲ್ಲಿ 117 ಪ್ರಕರಣಗಳು ಪತ್ತೆಯಾಗಿವೆ. ವರ್ಷದಿಂದ ವರ್ಷಕ್ಕೆ ಕಡಿಮೆಯಾಗಿತ್ತಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಚ್‌1ಎನ್‌1 ಉಸಿರಾಟದ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಶೀತ, ಜ್ವರದ ಲಕ್ಷಣದೊಂದಿಗೆ ಆರಂಭಗೊಂಡು ಅನಂತರ ಉಸಿರಾಟದ ತೊಂದರೆ, ಗಂಟಲು ನೋವು, ನ್ಯೂಮೋನಿಯಾ ಉಂಟಾಗಿ ಮಾರಣಾಂತಿಕವಾಗುತ್ತದೆ. ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆಯಬೇಕು. ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಎಚ್‌1ಎನ್‌1 ರೋಗಿಗಳು ಸಾಧ್ಯವಾದಷ್ಟು ಸಾರ್ವಜನಿಕ ಸ್ಥಳಗಳಿಂದ ದೂರವಿರಬೇಕು. ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಎಚ್‌1ಎನ್‌1ಗೆ ಉಚಿತ ಔಷಧಿ ದೊರೆಯುತ್ತದೆ ಎಂದು ಇಲಾಖಾಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next