ಉಡುಪಿ: ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿ ಆಶ್ರಯದಲ್ಲಿ ಗುರುಪೂರ್ಣಿಮಾ ಮಹೋತ್ಸವ ಕಿನ್ನಿಮೂಲ್ಕಿ ವೀರಭದ್ರ ಕಲಾಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಪ್ರೇರಕ ಭಕ್ತರಾಜ ಮಹಾರಾಜರ ಬಿಂಬ ಪೂಜೆ ಮಾಡಲಾಯಿತು. ನ್ಯಾಯವಾದಿ ಎ.ಆರ್.ರಾಜೇಶ್, ಜನಜಾಗೃತಿ ಸಮಿತಿಯ ಮಂಗಳೂರಿನ ವಿವೇಕ್ ಪೈ, ರಣರಾಗಿಣಿ ಶಾಖೆಯ ಪವಿತ್ರ ಕುಡ್ವ ಮಾರ್ಗದರ್ಶನ ಮಾಡಿದರು. ರಾಜೇಶ್ ಅವರು ರೋಗ ನಿವಾರಣೆಗಾಗಿ ಖಾಲಿ ಪೆಟ್ಟಿಗೆಗಳ ಉಪಾಯ ಹೇಗೆ ಮಾಡಬೇಕು ಎಂಬ ಗ್ರಂಥವನ್ನು ಬಿಡುಗಡೆ ಮಾಡಿದರು.
ಇಂದಿನ ಕಾಲವು ಕೆಟ್ಟದಾಗಿದ್ದರೂ, 2023 ರ ಬಳಿಕದ ಕಾಲವು ಸನಾತನ ಧರ್ಮಕ್ಕೆ ಪೂರಕವಾಗಿರಲಿದೆ. ಇದೇ ಕಾಲದಲ್ಲಿ ಸತ್ವಗುಣಿ ಜನರಿಂದ ಭಾರತದಲ್ಲಿ ಹಿಂದೂರಾಷ್ಟ್ರದ ಸ್ಥಾಪನೆಯಾಗಲಿದೆ ಎಂಬ ಜಯಂತ ಅಠವಲೆಯವರ ಸಂದೇಶ ವಾಚಿಸಲಾಯಿತು.
ಗುರುಪೂರ್ಣಿಮೆಯು ಹಿಂದೂ ಸಂಸ್ಕೃತಿಯ ಪ್ರತೀಕವಾಗಿದೆ. ಧರ್ಮಾ ಚರಣೆಯ ಅಭಾವದಿಂದ ಹಿಂದು ಯುವತಿಯರು ಅನ್ಯಧರ್ಮಿಯರ ಮೋಸದ ಜಾಲದಲ್ಲಿ ಸಿಲುಕುತ್ತಿದ್ದಾರೆ. ಲವ್‌ಜಿಹಾದ್‌ನಿಂದ ಭಾರತವು ಅಧಃಪತನದತ್ತ ಸಾಗುತ್ತಿದೆ. ಇದನ್ನು ನಾವು ಎಲ್ಲರೂ ವಿರೋಧಿಸಬೇಕಾಗಿದೆ. ಇದು ನಮ್ಮ ಮನೆಯಲ್ಲಿ ಬದಲಾವಣೆ ಮಾಡುವು ದರಿಂದ ಪ್ರಾರಂಭವಾಗ ಬೇಕಾಗಿದೆ. ರಾಜಕೀಯ ಪಕ್ಷಗಳು ಹಿಂದುತ್ವಕ್ಕಾಗಿ ಏನೂ ಮಾಡದೆ ತಮ್ಮ ಸಾಥìದ ಬಗ್ಗೆ ಕೆಲಸ ಮಾಡುತ್ತಿರುವುದು ಪಕ್ಕದ ಜಿಲ್ಲೆಯ ಬೆಳವಣಿಗೆಗಳಿಂದ ತಿಳಿಯಬಹುದು ಎಂದು ರಾಜೇಶ್ ತಿಳಿಸಿದರು.
ಧರ್ಮ ಸಂಸ್ಥಾಪನೆಯೆಂದರೆ ಭಾರತವನ್ನು ಅಧೋಗತಿಯತ್ತ ಕೊಂಡೊಯ್ಯುವ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಪರ್ಯಾಯವಾದ ಆದರ್ಶ ರಾಜ್ಯ ವ್ಯವಸ್ಥೆಯಿರುವ ಧರ್ಮಾಧಿಷ್ಠಿತ ಹಿಂದೂರಾಷ್ಟ್ರ ಸ್ಥಾಪಿಸುವುದಾಗಿದೆ ಎಂದು ವಿವೇಕ್ ಪೈ ಹೇಳಿದರು.
1857 ರ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪೆಟ್ಟುತಿಂದ ಬಳಿಕ ಆಂಗ್ಲರು ಇಂಡಿಯನ್ ಆಮ್ಸ್ì ಆಕ್ಟ್ ಕಾನೂನು ಜಾರಿಗೊಳಿಸಿ ಹಿಂದೂಗಳ ಕೈಯಿಂದ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡರು. 1920 ರ ಬಳಿಕ ಗಾಂಧೀಜಿಯವರು ಹಿಂದೂಗಳ ಮನಸ್ಸಿನಿಂದ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡರು ಎಂದು ಪವಿತ್ರ ಕುಡ್ವ ಹೇಳಿದರು. ಸೌಮ್ಯಾ ಕಾರ್ಯಕ್ರಮ ನಿರೂಪಿಸಿದರು.