Advertisement
ಜಿಲ್ಲಾ ಜಿಎಸ್‌ಬಿ ಸಮಾಜ ಹಿತರಕ್ಷಣ ವೇದಿಕೆ ನೇತೃತ್ವದಲ್ಲಿ, ಮುದರಂಗಡಿ ಸಮರ್ಪಣ ಚಾರಿಟೆಬಲ್ ಟ್ರಸ್ಟ್ ಸಹಯೋಗದೊಂದಿಗೆ ಅಂಬಾಗಿಲಿನ ಅಮೃತ್ ಗಾರ್ಡನ್ ಸಭಾಭವನದಲ್ಲಿ ಜರಗಿದ ಜಿಎಸ್‌ಬಿ ವಿದ್ಯಾರ್ಥಿವೇತನ ವಿತರಣೆ, ಶೈಕ್ಷಣಿಕ ದತ್ತು ಸ್ವೀಕಾರ, ಶೈಕ್ಷಣಿಕ ಪ್ರೇರಣ ಕಾರ್ಯಾಗಾರ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
Related Articles
Advertisement
ಬೈಲೂರಿನ ಹೊಸಬೆಳಕು ಸೇವಾ ಟ್ರಸ್ಟ್ ಸಂಸ್ಥಾಪಕಿ ತನುಲಾ ತರುಣ್ ಅವರಿಗೆ 2 ಲಕ್ಷ ರೂ. ದೇಣಿಗೆ ನೀಡಿ ಗೌರವಿಸಲಾಯಿತು. ವಿದ್ಯಾಪೋಷಕ ನಿಧಿ ವಿದ್ಯಾರ್ಥಿ ವೇತನ ಯೋಜನೆ ಅಧ್ಯಕ್ಷ ಎಸ್. ಎಸ್. ನಾಯಕ್ ಸ್ವಾಗತಿಸಿ, ವೇದಿಕೆ ಸಂಚಾಲಕ ಆರ್. ವಿವೇಕಾನಂದ ಶೆಣೈ ಪ್ರಸ್ತಾವನೆಗೈದರು. ಪ್ರ. ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ನಿರೂಪಿಸಿದರು. ಅಧ್ಯಕ್ಷ ಜಿ. ಸತೀಶ್ ಹೆಗಡೆ ಕೋಟ ವಂದಿಸಿದರು.
160 ಕುಟುಂಬಗಳಿಗೆ ನೆರವು ಜಿಎಸ್‌ಬಿ ಸಮಾಜದ ಆರ್ಥಿಕ ಹಿಂದುಳಿದ 160 ಕುಟುಂಬಗಳ ಕನಿಷ್ಠ ಜೀವನೋಪಾಯಕ್ಕಾಗಿ ಆರ್ಥಿಕ ನೆರವು ನೀಡುವ ಕುಟುಂಬ ಚೈತನ್ಯ ನಿಧಿ ಯೋಜನೆಗೆ 10 ವರ್ಷ ತುಂಬಿರುವ ನೆಲೆಯಲ್ಲಿ ಪ್ರತೀ ಕುಟುಂಬಕ್ಕೆ ತಲಾ 12 ಸಾ. ರೂ. ಒಟ್ಟು 19.50 ಲಕ್ಷ ರೂ. ಆರ್ಥಿಕ ನೆರವು ಆಪದ್ಧನವಾಗಿ ನೀಡಲಾಯಿತು. ಸಾಧಕರಿಗೆ ದತ್ತಿನಿಧಿ ಪುರಸ್ಕಾರ
ವೇದಮೂರ್ತಿ ದಿ| ಪಡುಬಿದ್ರಿ ದೇವಿದಾಸ ಶರ್ಮರ ಮಕ್ಕಳು ಸ್ಥಾಪಿಸಿರುವ ದತ್ತಿ ನಿಧಿಯಿಂದ ಸಂಸ್ಕೃತ, ವೇದ, ತರ್ಕ, ಸುಧಾಪಾಠ ಮೊದಲಾದ ಕ್ಷೇತ್ರಗಳಲ್ಲಿ ಸಾಧನೆಗೈದ ಸಂಸ್ಕೃತ ಸಾಹಿತ್ಯದಲ್ಲಿ ಡಾಕ್ಟರೆಟ್ ಪದವಿ ಪಡೆದ ಡಾ| ಪಂಡಿತ್ ಎಂ. ನರಸಿಂಹ ಆಚಾರ್ಯ, ಸಂಸ್ಕೃತ ವಿ. ವಿ.ಯಿಂದ ದ್ವೆ çತ ವೇದಾಂತ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಅರವಿಂದ ಭಟ್, ನ್ಯಾಯಸುಧಾ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ರಾಘವೇಂದ್ರ ಆಚಾರ್ಯ, ಬಿ. ರಾಮಕೃಷ್ಣ ಭಟ್ ಅವರನ್ನು ಗೌರವಿಸಲಾಯಿತು. 1.1 ಕೋ. ರೂ. ಆರ್ಥಿಕ ನೆರವು
ಶೈಕ್ಷಣಿಕ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆಗೈದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹೆತ್ತವರನ್ನು ಕಳೆದುಕೊಂಡ 121 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶುಲ್ಕ ಖರ್ಚನ್ನು ವಿದ್ಯಾರ್ಥಿವೇತನದ ಮೂಲಕ ವಿತರಿಸಲಾಯಿತು. ಜಿಎಸ್‌ಬಿ ಸಮುದಾಯದ 444 ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಒಟ್ಟು ಈ ವರ್ಷ ಸಮಾಜಮುಖೀ ಸೇವಾ ಕಾರ್ಯ ಚಟುವಟಿಕೆಗೆ 1,01,81,000 ರೂ. ಮೊತ್ತ ವಿನಿಯೋಗಿಸಲಾಗಿದೆ. 2016ರಲ್ಲಿ ಹೆಜಮಾಡಿಯಲ್ಲಿ ಜರಗಿದ ವಿಶ್ವ ಜಿಎಸ್‌ಬಿ ಸಮ್ಮೇಳನದಲ್ಲಿ ಅಂದಿನ ರಕ್ಷಣ ಸಚಿವ ಮನೋಹರ್ ಪ್ರಭು ಪರಿಕ್ಕರ್ ಮೂಲಕ ಗಾಯಾಳು ಸೈನಿಕರ ಕಲ್ಯಾಣ ನಿಧಿಗೆ ಇಷ್ಟೇ ಮೊತ್ತದ ನಿಧಿಯನ್ನು ಸಮಾಜ ಬಾಂಧವರಿಂದ ಸಂಗ್ರಹಿಸಿ ಸಮರ್ಪಿಸಲಾಗಿತ್ತು. ಈಗ ಇಷ್ಟೇ ಮೊತ್ತವನ್ನು ಸಮಾಜ ಕಲ್ಯಾಣಕ್ಕೂ ವಿನಿಯೋಗಿಸಲಾಗಿದೆ ಎಂದು ಸಾಣೂರು ನರಸಿಂಹ ಕಾಮತ್ ತಿಳಿಸಿದರು.