Advertisement
ಗಡಿನಾಡು ಕಾಸರಗೋಡಿನ ಮಕ್ಕಳಿಗಾಗಿ ಪ್ರಥಮ ಬಾರಿ ಆಯೋಜಿಸಿದ ಚಿಣ್ಣರ ಬಣ್ಣ ಸ್ಪರ್ಧೆಯಲ್ಲಿ ಮಕ್ಕಳು ಬಹಳ ಉತ್ಸಾಹದಿಂದ ಭಾಗವಹಿಸಿದರು. ಅಪರಾಹ್ನ 2 ಗಂಟೆಯಿಂದಲೇ ಮಕ್ಕಳು ಹೆತ್ತವರೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಆಗಮಿಸಿದ್ದರು. ಮೂರು ಗಂಟೆ ವೇಳೆಗೆ ಸಭಾಂಗಣ ಭರ್ತಿಯಾಗಿತ್ತು. ಕಾಸರಗೋಡಿನಲ್ಲಿ ಈ ಮಟ್ಟದ ಸ್ಪರ್ಧೆ ನಡೆಯುತ್ತಿರುವುದು ಪ್ರಥಮವಾದುದರಿಂದ ಸಹಜವಾಗಿ ಮಕ್ಕಳಲ್ಲಿ, ಹೆತ್ತವರಲ್ಲಿ ಕುತೂಹಲವಿತ್ತು. ಪುಟಾಣಿ ಮಕ್ಕಳು ನೆಲದಲ್ಲಿ ಕುಳಿತು ಚಿತ್ರ ರಚಿಸುವುದು ಮನಸ್ಸಿಗೆ ಮುದ ನೀಡುತ್ತಿತ್ತು. ಭಾಗವಹಿಸಿದ ಎಲ್ಲ ಮಕ್ಕಳಿಗೆ ಉಡುಗೊರೆ ಹಾಗೂ ಪ್ರಮಾಣ ಪತ್ರ ನೀಡಲಾಯಿತು. ಇದು ಮಕ್ಕಳ ಮೊಗದಲ್ಲಿ ಸಂತೋಷದ ನಗುಬೀರಿಸಿತು.
ಅವರಲ್ಲಿ ಹುಮ್ಮಸು ಕಂಡು ಬಂತು. ಕಾಸರಗೋಡಿನ ಕನ್ನಡಿಗರಿಗೆ ಅವಕಾಶ ದೊಂದಿಗೆ ಹೊಸ ಹುಮ್ಮಸ್ಸು ಸಿಕ್ಕಿದೆ. ಮುಂದೆಯೂ ಕಾರ್ಯಕ್ರಮಗಳನ್ನು ಆಯೋಜಿಸಿದ್ದಲ್ಲಿ ಇನ್ನಷ್ಟು ಮಕ್ಕಳು ಭಾಗವಹಿಸುವರು ಎಂಬ ಅಭಿಪ್ರಾಯ ಗಳು ಕೇಳಿ ಬಂತು. ಅನೇಕ ಮಕ್ಕಳು ಬಹುಮಾನಕ್ಕಿಂತ ಅವಕಾಶ ಸಿಕ್ಕಿದ್ದು ಹೆಚ್ಚು ಖುಷಿ ನೀಡಿದೆ ಎಂದಿದ್ದಾರೆ. ಸಬ್ ಜೂನಿಯರ್, ಜೂನಿಯರ್, ಸೀನಿಯರ್ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ನಿರೀಕ್ಷೆಗೂ ಮೀರಿ 1,000ಕ್ಕೂ ಅಧಿಕ ಮಕ್ಕಳು ಭಾಗವಹಿಸಿದರು.
Related Articles
ಅ. 27ರಂದು ಕಡಬ ತಾಲೂಕು ಮಟ್ಟದ ಸ್ಪರ್ಧೆಯು ಸೈಂಟ್ ಜೋಕಿಂ ಸಮುದಾಯ ಭವನ ಕಡಬ, ಸುಳ್ಯ ತಾಲೂಕು ಮಟ್ಟದ ಸ್ಪರ್ಧೆಯು ಕೆವಿಜಿ ಕಾನೂನು ಮಹಾ ವಿದ್ಯಾಲಯ, ಚೆನ್ನಕೇಶವ ದೇವಸ್ಥಾನದ ಬಳಿ, ಸುಳ್ಯ, ಕುಂದಾಪುರ ತಾಲೂಕು ಮಟ್ಟದ ಸ್ಪರ್ಧೆಯು ಬಸ್ರೂರು ಮೂರ್ಕೈಯಲ್ಲಿರುವ ಎಚ್‌ಎಂಎಂ ಮತ್ತು ವಿಕೆಆರ್ ಶಾಲೆಗಳಲ್ಲಿ, ಬ್ರಹ್ಮಾವರ ತಾಲೂಕು ಮಟ್ಟದ ಸ್ಪರ್ಧೆಯು ಬಂಟರ ಭವನ, ಬಸ್‌ನಿಲ್ದಾಣದ ಎದುರು, ಬ್ರಹ್ಮಾವರ ಇಲ್ಲಿ ಬೆಳಗ್ಗೆ 9.30ರಿಂದ 11 .30ರ ತನಕ ನಡೆಯಲಿದೆ.
Advertisement
ಬೆಳ್ತಂಗಡಿ ತಾಲೂಕು ಮಟ್ಟದ ಸ್ಪರ್ಧೆಯು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನ, ಸಂತೆಕಟ್ಟೆ ಬೆಳ್ತಂಗಡಿ, ಪುತ್ತೂರು ತಾಲೂಕು ಮಟ್ಟದ ಸ್ಪರ್ಧೆಯು ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಬಿಲ್ಲವ ಸಂಘ ಪುತ್ತೂರು, ಬೈಂದೂರು ತಾಲೂಕು ಮಟ್ಟದ ಸ್ಪರ್ಧೆಯು ಜೆ.ಎನ್.ಆರ್. ಕಲಾ ಮಂದಿರ, ಬೈಂದೂರು, ಹೆಬ್ರಿ ತಾಲೂಕು ಮಟ್ಟದ ಸ್ಪರ್ಧೆಯು ಎಸ್.ಆರ್. ಪಬ್ಲಿಕ್ ಸ್ಕೂಲ್, ಹೆಬ್ರಿಯಲ್ಲಿ ಜರಗಲಿದೆ. ಈ ನಾಲ್ಕು ತಾಲೂಕುಗಳಲ್ಲಿ ಸ್ಪರ್ಧೆಯು ಅ. 27ರ ಅಪರಾಹ್ನ 3ರಿಂದ 5ರ ವರೆಗೆ ನಡೆಯಲಿದೆ.
2ನೇ ಹಂತದ ಸ್ಪರ್ಧೆಯು ನ. 2, 3ರಂದು ದ.ಕ. ಮತ್ತು ಉಡುಪಿ ಜಿಲ್ಲೆಯ 8 ತಾಲೂಕುಗಳಲ್ಲಿ ನಡೆಯಲಿದೆ. ನ. 10ರಂದು ತಾಲೂಕು ಮಟ್ಟದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ವಿಜೇತರಿಗಾಗಿ ಮೂರು ಜಿಲ್ಲಾಮಟ್ಟದ ಸ್ಪರ್ಧೆಯು ಮಂಗಳೂರಿನಲ್ಲಿ ಜರಗಲಿದೆ.