Advertisement
ಪ್ರಬುದ್ಧರಾದವರಿಗೆ ಇದು ಹೇಳಿಸಿದ್ದಲ್ಲ, ಅಕೀರ್ತಿಕರ. ವಿಚಾರವಿಲ್ಲದೆ ಭಾವನೆ ಇದ್ದರೂ, ವಿಚಾರವಿದ್ದು ಭಾವನೆ ಇದ್ದರೂ ಪ್ರಯೋಜನವಿಲ್ಲ. ವಿಚಾರ ಮುಂದಿರಬೇಕು, ಭಾವನೆ ಹಿಂದಿರಬೇಕು. ನಮ್ಮವರು ಸಾಯುತ್ತಾರೆ ಎಂಬುದು ಮುಂದೆ ಬಂದಿದೆ. ಇಲ್ಲಿ ವಿಚಾರಗಳಿಲ್ಲ. ವಿಚಾರದ ಅಂಶ ಹೆಚ್ಚಿರಬೇಕು, ಭಾವನೆ ಕಡಿಮೆ ಇರಬೇಕು. ಅದುವೇ ಭಗವಂತನ ವಿಷಯ ಬಂದಾಗ ಜ್ಞಾನ, ಭಾವನೆ, ಭಕ್ತಿ ಮೊದಲು ಇರಬೇಕು. ಅನಂತರ ವಿಚಾರ ಇರಬೇಕು. ಈಗ ಕಂಡುಬರುವ ಧ್ಯಾನ ಶಿಬಿರಗಳಲ್ಲಿ ದೇವರ ಧ್ಯಾನ ಕಲಿಸುತ್ತಾರೆ. ಆದರೆ ಭಗವಂತನ ಸ್ಥಿತಿ ಬಗೆಗೆ ವಿಷಯಗಳೇ ಇರುವುದಿಲ್ಲ. ಇದನ್ನು ನಿರ್ವಿಶೇಷ ಧ್ಯಾನ ಎನ್ನಬಹುದು. ಮೊದಲು ವಿಚಾರ ಮಾಡಬೇಕು, ಆಮೇಲೆ ಭಾವನೆ ಬರಬೇಕು. ಎಲ್ಲ ವಿಚಾರಗಳಲ್ಲೂ ಹೀಗೆ. ತಣ್ತೀ ನಿಶ್ಚಯ ಮೊದಲಿರಬೇಕು.
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ – ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ ಗೀತಾ ಮಂದಿರ,
ಉಡುಪಿ ಸಂಪರ್ಕ ಸಂಖ್ಯೆ: 8055338811