Advertisement
ಇದೀಗ ಮತ್ತಷ್ಟು ವ್ಯವಸ್ಥಿತ ಮತ್ತು ವಿಶಾಲವಾಗಿ ಸಂಸ್ಥೆಯನ್ನು ರೂಪಿಸಲಾಗಿದೆ. 5 ಸಾವಿರ ಚ. ಅಡಿಯಲ್ಲಿ ಸಾಕಷ್ಟು ಸ್ಥಳಾವಕಾಶ ಹೊಂದಿದ್ದು. ಆತ್ಯಧುನಿಕ ಉಪಕರಣಗಳನ್ನು ಹೊಂದಲು ಸಹಕಾರಿಯಾಗಿದೆ. ಹೊಸ ಕಟ್ಟಡದಲ್ಲಿ ತ್ರೀಡಿ ಪ್ರಿಂಟರ್, ಆಟೊ ಕಾಸ್ಟಿಂಗ್ ಲಕ್ಷಾಂತರ ಮೌಲ್ಯದ ಉಪಕರಣಗಳನ್ನು ಜೋಡಿಸಲಾಗಿದೆ.
ಐಐಜಿಜೆ ಸಂಸ್ಥೆಯು ತನ್ನ ವಿಶೇಷ ಕಾರ್ಯಕ್ರಮದಡಿ ಆಭರಣ ತಯಾರಿಕೆ ಮತ್ತು ವಿನ್ಯಾಸ ತಾಂತ್ರಿಕತೆ ಬೋಧಿಸುತ್ತದೆ. ಇಲ್ಲಿ ವಿದ್ಯಾರ್ಥಿಗಳಿಗೆ ಆಭರಣ ಸಿದ್ಧಪಡಿಸುವ ಪ್ರಾಯೋಗಿಕ ಕೌಶಲ ಕಲಿಸಿಕೊಡಲಾಗುತ್ತದೆ. ಯುವಜನರಿಗೆ ರತ್ನ ಮತ್ತು ಆಭರಣ ಉದ್ಯಮದಲ್ಲಿ ವೃತ್ತಿಜೀವನ ಮುಂದುವರಿಸಲು ಅನುವು ಮಾಡಿಕೊಡಲು ಈ ಕೌಶಲವು ಅತ್ಯಗತ್ಯವಾಗಿದೆ. ಇಲ್ಲಿಯವರೆಗೆ 670 ವಿದ್ಯಾರ್ಥಿಗಳು ತರಬೇತಿ ಪಡೆದು ವಿವಿಧ ಚಿನ್ನಾಭರಣ ಸಂಸ್ಥೆಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ. 17 ಮಂದಿ ಸ್ವಂತ ಚಿನ್ನಾಭರಣ ತಯಾರಿಕೆ ಸ್ವಂತ ಉದ್ದಿಮೆಯನ್ನು ಆರಂಭಿಸಿ ಜೀವನ ರೂಪಿಸಿಕೊಂಡಿದ್ದಾರೆ.
Related Articles
Advertisement
ದಕ್ಷಿಣ ಭಾರತದಲ್ಲಿ ಏಕೈಕ ಸಂಸ್ಥೆಕೇಂದ್ರ ಸರಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಐಐಜಿಜೆ ದಿಲ್ಲಿ, ಮುಂಬಯಿ, ಜೈಪುರ್, ವಾರಾಣಸಿ ಹೊರತುಪಡಿಸಿ ದಕ್ಷಿಣ ಭಾರತದಲ್ಲಿ ಉಡುಪಿಯಲ್ಲಿ ಮಾತ್ರ ಐಐಜಿಜೆ ಕ್ಯಾಂಪಸ್ ಹೊಂದಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿಶೇಷ ಮುತುವರ್ಜಿ ವಹಿಸಿ ಉಡುಪಿಯಲ್ಲಿ ಕೇಂದ್ರ ಸ್ಥಾಪನೆಯಾಗುವಂತೆ ಸಂಸದರ ನಿಧಿಯಿಂದ ಅನುದಾನ ಒದಗಿಸಿದ್ದರು. ಕೇಂದ್ರ ಸಿದ್ಧ
ಐಐಜಿಜೆ ಸ್ವಂತ ಕಟ್ಟಡದ ಬೇಡಿಕೆ ಈಡೇರಿದ್ದು, ವಿಶಾಲವಾದ ಒಳಾಂಗಣ ಮತ್ತು ಅತ್ಯಾಧುನಿಕ ಯಂತ್ರೋಪಕರಣ ಒಳಗೊಂಡ ಕೇಂದ್ರ ಸಿದ್ಧಗೊಂಡಿದೆ. ಕಟ್ಟಡದ ಉದ್ಘಾಟನೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ನೆರವೇರಲಿದ್ದು, ಈ ತಿಂಗಳ ಅಂತ್ಯದೊಳಗೆ ಉದ್ಘಾಟನೆ ಕಾರ್ಯಕ್ರಮ ನಡೆಯಬಹುದು.
– ಕೋಟ ಶ್ರೀನಿವಾಸ್ ಪೂಜಾರಿ, ಸಂಸದರು ವಿದ್ಯಾರ್ಥಿನಿಯರಿಗೆ ತರಬೇತಿ ಕಾರ್ಯಾಗಾರ
ಉಡುಪಿ ನಗರದ ಸರಕಾರಿ ಹಾಸ್ಟೆಲ್ಗಳಲ್ಲಿದ್ದು ಪದವಿ, ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಐಐಜಿಜೆಯಲ್ಲಿ ಅಲ್ಪಾವಧಿಯ ಉಚಿತ ತರಬೇತಿಯನ್ನು ನೀಡಲಾಗುತ್ತದೆ. ಈಗಾಗಲೇ ಒಂದು ಬ್ಯಾಚ್ನ ವಿದ್ಯಾರ್ಥಿನಿಯರು ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ. ವೃತ್ತಿ ಕೌಶಲತೆ ಹೆಚ್ಚಿಸಿಕೊಳ್ಳಲು ಇದು ಸಹಕಾರಿಯಾಗಿದೆ. ಪಿಎಂ ವಿಶ್ವಕರ್ಮ ಯೋಜನೆಯಡಿ ತರಬೇತಿಯನ್ನು ನೀಡಲಾಗುತ್ತಿದೆ.