Advertisement

Udupi ಗೀತಾರ್ಥ ಚಿಂತನೆ-6: ವೇದವ್ಯಾಸರಿಗೆ ಹೆಸರು ಅನ್ವರ್ಥ

12:42 AM Aug 14, 2024 | Team Udayavani |

ಧರ್ಮಜ್ಞಾನಕ್ಕಾಗಿ ಅವತರಿಸಲು ಭಗವಂತನನ್ನು ಪ್ರಾರ್ಥಿಸುವಾಗ ದೇವತೆಗಳ ಗಡಣದಲ್ಲಿ ಬ್ರಹ್ಮರುದ್ರಾದಿಗಳು ಇದ್ದರು, ಗರುಡ, ಶೇಷನಂತಹ ದೇವತೆಗಳು ಇರಲಿಲ್ಲ. ಇದನ್ನು ಹೀಗೆ ಅರ್ಥೈಸಬಹುದು. ಗರುಡ ಮತ್ತು ಶೇಷ ಅವರು ಸೇವಾ ವಿಭಾಗಕ್ಕೆ (ವಾಹನ ಮತ್ತು ಶಯನ) ಸಂಬಂಧಿಸಿದವರು.

Advertisement

ಬ್ರಹ್ಮರುದ್ರಾದಿಗಳೆಂದರೆ ಲೋಕ ಪರಿಪಾಲನೆ ಮಾಡುವವರು. ಬ್ರಹ್ಮ ಸಕಲ ಜೀವರಾಶಿಗಳಿಗೆ ಮುಖ್ಯಸ್ಥ, ರುದ್ರದೇವರು ಸಂಹಾರಕರ್ತರು, ಇಂದ್ರ ಮೂರು ಲೋಕದ ಅಧಿಪತಿ. ಭಗವಂತನನ್ನು ಪ್ರಾರ್ಥಿಸುವಾಗ ಧರ್ಮದ ಜ್ಞಾನ ಲುಪ್ತವಾಗುತ್ತಿದೆ, ಲೋಕದ ಆಡಳಿತವನ್ನು ನಡೆಸುವುದು ಕಷ್ಟವಾಗುತ್ತಿದೆ ಎಂದು ಅದಕ್ಕೆ ಸಂಬಂಧಪಟ್ಟವರೇ ಹೇಳುವುದು ಸಮುಚಿತ. ಭಗವಂತನೇ ಏಕೆ ಅವತರಿಸಬೇಕು? ದೇವತೆಗಳು ಸಾಲದೆ? ಎಲ್ಲ ದೇವತೆಗಳಿಗೂ ಜ್ಞಾನದ ಅಗತ್ಯವಿರುವುದರಿಂದ ದೇವತೆಗಳಿಗೂ ಮುಖ್ಯಸ್ಥನಾದ ಭಗವಂತನನ್ನು ದೇವತೆಗಳು ಪ್ರಾರ್ಥಿಸಿದರು. ವೇದವ್ಯಾಸರ ನಾಮಕರಣದ ಹೆಸರು “ಕೃಷ್ಣ ದ್ವೈಪಾಯನ’ ಎಂದು, ಬಾದರಾಯಣ ಎಂದೂ ಕರೆಯುತ್ತಾರೆ. ವೇದವ್ಯಾಸ ಎಂಬ ಹೆಸರು ಕೆಲಸದ ಆಧಾರದಲ್ಲಿ ಈ ಹೆಸರು ಬಂದಿದೆ.

“ವ್ಯಾಸ’ ಅಂದರೆ ವ್ಯವಸ್ಥಾಪಕ. ಪ್ರತ್ಯೇಕಿಸುವುದು, ವಿಭಾಗಿಸುವುದು, ಸರಿಪಡಿಸುವುದು ಎಂಬ ಅರ್ಥವಿದೆ. ಗೊತ್ತಿದ್ದವರಿಗೆ ಮಾತ್ರ ಇದು ಸಾಧ್ಯ. ಒಂದೇ ಆಗಿದ್ದ ವೇದವನ್ನು ಪ್ರತ್ಯೇಕಿಸಿ ಕೊಟ್ಟದ್ದರಿಂದ ವೇದವ್ಯಾಸರೆಂದಾದರು. ವ್ಯಾಸವೆನ್ನುವುದು ಹವ್ಯಾಸ.

ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

Advertisement
Advertisement

Udayavani is now on Telegram. Click here to join our channel and stay updated with the latest news.

Next