ಭಗವಂತನ ಮೇಲಿನ ಪ್ರೀತಿ ಜ್ಞಾನಪೂರ್ವಕವಾಗಿದ್ದಾಗ ಅದರಿಂದ ಮೋಕ್ಷಪ್ರಾಪ್ತಿಯಾಗುತ್ತದೆ.
“ಮಹಾತ್ಮéಜ್ಞಾನಪೂರ್ವಸ್ತು ಸುದೃಢಃ ಸರ್ವತೋಧಿಕಃ ಸ್ನೇಹಃ ಭಕ್ತಿರಿತಿಪ್ರೋಕ್ತಃ…’ ಎಂಬ ಭಾಷ್ಯದ ಉಲ್ಲೇಖದಂತೆ ಭಕ್ತಿ ಸ್ನೇಹರೂಪವಾಗಿರಬೇಕು. ಜಡಭರತ ಜಿಂಕೆಯನ್ನು ಪ್ರೀತಿಸಿದಂತೆ, ಜಿಂಕೆಯು ಜಡಭರತನನ್ನು ಪ್ರೀತಿಸಿದಂತೆ ಮುಗ್ಧವಾಗಿರಬಾರದು. ತನ್ನ ಮೇಲೆ ತನಗೆ ಎಷ್ಟು ಸ್ವಾಭಿಮಾನ ಪ್ರೇಮವಿದೆಯೋ ಅದಕ್ಕಿಂತ ಹೆಚ್ಚು ಪ್ರೀತಿ ಭಗವಂತನ ಮೇಲಿರಬೇಕು.
ಭಗವಂತನನ್ನು ಉಪಾಯದಿಂದ ಗೆಲ್ಲಬೇಕು ಎಂಬ ಮಾತಿದೆ. ಉಪ= ಶ್ರೇಷ್ಠ, ಆಯ= ಲಾಭ. ಸ್ನೇಹಕ್ಕೆ ಖರ್ಚೇ ಇಲ್ಲ. ಅತಿ ಸುಲಭವಾದದ್ದು. ತುಂಬ ಖರ್ಚು ಮಾಡಿ ಸ್ನೇಹ ಗಳಿಸುವುದಕ್ಕಿಂತ ಖರ್ಚು ಮಾಡದೆ ಸ್ನೇಹ ಮಾಡುವುದು ಲಾಭಕರವಲ್ಲವೆ? ಸ್ನೇಹವೆಂದರೆ ಪ್ರೀತಿ. ಜಗಳವಾದರೆ ಕೊನೆಯಲ್ಲಿ ಆಡುವ ಮಾತೇ “ನಿನ್ನ ಮೇಲೆ ಪ್ರೀತಿ ಇಲ್ಲ’ ಎಂಬುದಾಗಿ. ಈ ಜಗತ್ತಿನಲ್ಲಿರುವುದು ಎರಡು ವಿಷಯ.
ಮೊದಲನೆಯದು ಲಾಭ- ನಷ್ಟ, ಎರಡನೆಯದು ವಾಸ್ತವಿಕತೆ- ಅವಾಸ್ತವಿಕತೆ. ಲಾಭ ನಷ್ಟದ ವಿಷಯದಲ್ಲಿ ರಾಜಕಾರಣಿಗಳು ನಿತ್ಯ ಮುಳುಗಿರುತ್ತಾರೆ. ಲಾಭ- ನಷ್ಟ, ಸತ್ಯಾಸತ್ಯತೆಯ ವಿಷಯದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಅಗತ್ಯವಾಗುತ್ತದೆ. ಕೆಲವು ಬಾರಿ ದೊಡ್ಡ ಕೆಲಸಕ್ಕಾಗಿ ಸಣ್ಣ ಪ್ರಮಾಣದ ದೋಷವನ್ನು ಸಹಿಸಿಕೊಳ್ಳಬೇಕಾಗುತ್ತದೆ. ಒಂದು ವೇಳೆ ಇದಕ್ಕೆ ಒಪ್ಪದೆ ಇದ್ದರೆ ದೊಡ್ಡ ಕೆಲಸವನ್ನು ಬಿಡಬೇಕಾಗುತ್ತದೆ.
-ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811