Advertisement
ಇಂತಹ ಸ್ಥಿತಿಯಲ್ಲಿ ಪ್ರಹ್ಲಾದ ಶ್ರಾದ್ಧಾದಿ ಕರ್ಮಗಳನ್ನು ಮಾಡಿದ. ದುರ್ಯೋಧನಾದಿಗಳನ್ನು ಕೊಂದ ಬಳಿಕ ಪಾಂಡವರು ಶ್ರಾದ್ಧಾದಿಗಳನ್ನು ಮಾಡಿದರು. ರಾವಣನನ್ನು ಕೊಂದ ಬಳಿಕ ಶ್ರೀರಾಮನೇ ಹೇಳಿ ವಿಭೀಷಣನಿಂದ ಅಂತಿಮ ಸಂಸ್ಕಾರಗಳನ್ನು ಮಾಡಿಸಿದ. ಬ್ಯಾಂಕ್ ಒಂದು ನಷ್ಟಕ್ಕೊಳಗಾಗಿ ಮುಳುಗಿ ಹೋಯಿತೆಂದು ಇಟ್ಟುಕೊಳ್ಳಿ. ಅಲ್ಲಿ ಮಾಡಿದ ಸಾಲವನ್ನು ತೀರಿಸಬೇಕೋ? ಬೇಡವೋ? ಉತ್ತರವೆಂದರೆ ತೀರಿಸಲೇಬೇಕು. ಒಬ್ಬ ದುಷ್ಟನಿದ್ದಾನೆ. ಆತ ನಮಗೆ ಉಪಕಾರ ಮಾಡಿದ ಎಂದಿಟ್ಟುಕೊಳ್ಳಿ. ಆತನಿಗೆ ಕೃತಜ್ಞತೆ ಸಲ್ಲಿಸಬೇಕೇ? ಬೇಡವೆ? ಸಲ್ಲಿಸಬೇಕು. ಒಬ್ಬ ಕೆಟ್ಟ ವ್ಯಕ್ತಿ ಮರಣ ದಂಡನೆ ಆಯಿತೆಂದು ಇಟ್ಟುಕೊಳ್ಳಿ. ಆತನಿಂದ ನಾವು ಸಾಲ ಪಡೆದಿದ್ದರೆ ಅದನ್ನು ಹಿಂದಿರುಗಿಸಬೇಕೋ? ಬೇಡವೋ? ಉತ್ತರ – ಹಿಂದಿರುಗಿಸಲೇಬೇಕು. ಈ ಎಲ್ಲ ವಿಷಯಗಳಲ್ಲಿ ಮುಖ್ಯ ವಿಷಯವೆಂದರೆ ನಮ್ಮ ಮುಂದಿನ ದಾಖಲೆ ಕ್ಲೀನ್ ಆಗಿರಬೇಕೆಂಬುದು. ಅವರು ಕೆಟ್ಟವರೋ? ಸುಭಗರೋ? ಬ್ಯಾಂಕ್ ನಷ್ಟದಲ್ಲಿದೆಯೋ? ಲಾಭದಲ್ಲಿದೆಯೋ ಮುಖ್ಯವಲ್ಲ.
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811