Advertisement
ಮೂಢಭಕ್ತಿಯಿಂದ ಆರಂಭದಲ್ಲಿ ದೇವಸ್ಥಾನಕ್ಕೆ ಹೋಗುವುದೇ ಆಗಿದ್ದರೂ ಇದುವೇ ಟರ್ನಿಂಗ್ ಪಾಯಿಂಟ್ ಆಗಿರುತ್ತದೆ. ಇಂತಹ ಸಂದರ್ಭ ಒಂದು ಬಗೆಯ ಸೆಳೆತ ಉಂಟಾಗುತ್ತದೆ. ಭಕ್ತಿಯ ಸೆಳೆತದಿಂದಲೇ ದೇವಸ್ಥಾನಕ್ಕೆ ಹೋಗಲು ಆರಂಭವಾಗುತ್ತದೆ. ದೇವರ ಮಹಿಮೆಯನ್ನು ಕೇಳಿ ಪ್ರೀತಿ, ಕಾಳಜಿ ಮೊದಲು ಶುರುವಾಗುತ್ತದೆ. ಒಳ್ಳೆಯ ವಿಷಯದಲ್ಲಿ ಆಸಕ್ತಿ ಇದ್ದರೆ ಅದನ್ನು ನೋಡಬೇಕು ಅಂದೆನಿಸುತ್ತದೆ. ಯಾವ ಜೀವಿಯ ಸ್ವಭಾವ ಹೇಗಿದೆಯೋ ಹಾಗೆ ಆಸಕ್ತಿ ಬೆಳೆಯುತ್ತದೆ. ಇದು ಎಲ್ಲರ ಅನುಭವಕ್ಕೆ ಬರುವ ವಿಷಯ. ಈಗ ತೀವ್ರ ಚರ್ಚೆಯಲ್ಲಿರುವ ಎಡಪಂಥ, ಬಲಪಂಥಕ್ಕೂ ಇದು ಅನ್ವಯ. ಯಾರೂ ಕೂಡ ಚಿಕ್ಕ ಪ್ರಾಯದಲ್ಲಿಯೇ ಎಡಪಂಥದವರೋ, ಬಲಪಂಥದವರೋ ಆಗಿರುವುದಿಲ್ಲ. ಆತನ/ಆಕೆಯ ಸ್ವಭಾವಕ್ಕೆ ತಕ್ಕುದಾಗಿ ಅಂತಹ ವಿಷಯದ ಒಲವು ಹೆಚ್ಚುತ್ತದೆ.
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
Related Articles
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
Advertisement